ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿ ಹೊಸಪೇಟೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿ ಹೊಸಪೇಟೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ  ಶಿಬಿರ  Free health check-up camp organized by Anjuman Khidmat-e-Islam Committee, Hospet


ಹೊಸಪೇಟೆ 21:  ಇಂದು ವಿಜಯನಗರ ಕ್ಷೇತ್ರದ ಹೊಸಪೇಟೆಯ ಬಸ್ ಡಿಪೋ ಹಿಂಬಾಗದಲ್ಲಿರುವ ಆಜಾದ್ ನಗರದ ಅಂಜುಮನ್ ಶಾದಿಮ ಹಲ್ ಆವರಣದಲ್ಲಿ ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿ ಹೊಸಪೇಟೆ ಹಾಗು ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮೂತ್ರಪಿಂಡ. ಕಲ್ಲು ಹೃದಯರೋಗ. ಮೂಳೆ ಹಾಗು ಇನ್ನಿತರ ಹಲವಾರು ಕಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು 10 ನೇ ಬಾರಿಗೆ ಹಮ್ಮಿಕೊಳ್ಳಲಾಯಿತು.ಈ ಒಂದು ಉಚಿತ ತಪಾಸಣಾ ಶಿಬಿರದಲ್ಲಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್‌. ಎನ್‌. ಮೊಹಮ್ಮದ್ ಇಮಾಮ್ ನಿಯಾಜಿರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹೊಸಪೇಟೆಯ ಆವರಣದಲ್ಲಿ ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿ ಹೊಸಪೇಟೆ ಹಾಗು ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸತತವಾಗಿ ಐದನೇ  ಬಾರಿಗೆ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. 

 ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯು ಹಲವಾರು ಜನಪರ ಕಾರ್ಯಕ್ಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಅದರಲ್ಲೂ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಇಂದಿನ ಅತ್ಯಾಧುನಿಕ ಯುಗದಲ್ಲಿ ಕಡು ಬಡತನದಲ್ಲಿರುವ ದಿನಗೂಲಿ ಕಾರ್ಮಿಕರಿಗೂ, ಹಾಗೂ ಹಣದ ಸಂಪಾದನೆಯ ಹಿಂದೆ ಬಿದ್ದಿರುವ ಬಡವರಿಂದ ಹಿಡಿದು ಶ್ರೀಮಂತರ ವರೆಗೂ ಆರೋಗ್ಯದ ಬಗ್ಗೆ ಸ್ವತಹ ಕಾಳಜಿ ವಹಿಸುತ್ತಿರುವುದಿಲ್ಲ. ಆರೋಗ್ಯದ ಮಹತ್ವವನ್ನು ಅರಿಯದೆ ದಿವ್ಯ ನಿರ್ಲಕ್ಷವನ್ನು ಮಾಡುತ್ತಿರುತ್ತಾರೆ. ನಂತರ ಆರೋಗ್ಯ ವನ್ನು ಮರಳಿ ಪಡೆಯಲು ಹಣವನ್ನು ವಿಪರೀತವಾಗಿ ಖರ್ಚು ಮಾಡಬೇಕಾಗುತ್ತದೆ. ಇನ್ನು ಹೆಚ್ಚಿನ ಚಿಕಿತ್ಸೆ ಇದ್ದಲ್ಲಿ ಬಿ.ಪಿ.ಎಲ್ ಕಾರ್ಡ್‌, ಆರೋಗ್ಯ ಕಾರ್ಡ್‌, ಯಶಸ್ವಿನಿ ಕಾರ್ಡ್‌ ಇನ್ನಿತರೆ ಕಾರ್ಡ್‌ ಗಳಿದ್ದಲ್ಲಿ ಬೆಂಗಳೂರಿನಲ್ಲಿ ಉಚಿತ ತಪಾಸಣೆ ಮಾಡಲಾಗುವುದು ಎಂದರು. ಹಾಗು ಆರೋಗ್ಯವೇ ಮಹಾಭಾಗ್ಯ ಎನ್ನುವ ನಾಣ್ಣುಡಿಯಂತೆ ಕೇವಲ ಮುಸ್ಲಿಂ ಜನಾಂಗವಲ್ಲದೇ ಕ್ಷೇತ್ರದ ಸಮಸ್ತ ನಾಗರೀಕರು ಯಾವುದೇ ಜಾತಿ, ಮತ, ಪಂಥ ತಾರತಮ್ಯ ಭೇದ ಭಾವ ಇಲ್ಲದೆ ಎಲ್ಲರೂ ಸದುಪಯೋಗಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.  

ಇದೇ ಸಂಧರ್ಭದಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಎಮ್‌. ಫೈರೋಜ್ ಖಾನ್‌. ಅಬುಬಕರ್ ಸಿದ್ದಿಕ್, ಅನ್ಸರ್ ಭಾಷ. ಡಾಽಽ ದುರ್ವೇಶ್ ಮುಯೂದ್ದೀನ್, ಸದ್ದಾಮ್ ಹುಸ್ಸೇನ್, ಮೊಹಮ್ಮದ್ ಮೋಸಿನ್, ಹಾಗೂ ಸಪ್ತಗಿರಿ ಆಸ್ಪತ್ರೆಯ ಅಧಿಕಾರಿಗಳಾದ ವಿಶ್ವನಾಥ್ ರೆಡ್ಡಿ ವೈದ್ಯರುಗಳಾದ ಡಾಽಽ ವಿಕ್ರಮ್, ಡಾಽಽ ಶೈನೇಶ್, ಡಾಽಽ  ನಂದಕುಮಾರ್, ಡಾಽಽ  ವಿವೇಕ್ ಹಾಗು ಅಂಜುಮನ್ ಆಸ್ಪತ್ರೆಯ ಸಿಬ್ಬಂದಿಗಳು,  ಸಾರ್ವಜನಿಕರು ಹಿರಿಯ ನಾಗರೀಕರು ಯುವಕರು ಮಹಿಳೆಯರು ಭಾಗವಹಿಸಿದ್ದರು