ಎಚ್ ಕೆ ಪಾಟೀಲ್ ಸೇವಾ ತಂಡದ ವತಿಯಿಂದ 23 ನೇ ವಾರ್ಡಿನ ನಾಗರಿಕರಿಗೆ ಉಚಿತ ನೇತ್ರ ಶಸ್ತ್ರ ಚೀಕಿತ್ಸಾ ಅಭಿಯಾನ
Free eye surgery campaign for the citizens of Ward 23 by HK Patil Seva Team
ಗದಗ 14 :- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ನಾಗರಿಕರಿಗಾಗಿ ಎಚ್ ಕೆ ಪಾಟೀಲ್ ಸೇವಾ ತಂಡ ಹಾಗೂ ಹುಲಕೋಟಿಯ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗಷ್ಟೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ಇಂದು ಇದೇ ದಿನಾಂಕ 10 ರಂದು ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸೆಗಾಗಿ ಅನುಮೋದನೆಗೊಂಡ ಒಕ್ಕಲಗೇರಿ ಬಡಾವಣೆಯ ನಾಗರಿಕರಾದ ಭೀಮಾ ಸತ್ಯಪ್ಪನವರ ಶಕುಂತಲಾ ಲಿಂಗದಾಳ್, ನಾಗವ್ವ, ಲಕ್ಷ್ಮಿಭಾಯಿ ಉಬಾಜಿ, ಹಾಜರಾತಬಿ ಡಾಲಾಯತ್,ಬಾಬುಸಾಬ್ ಸೊನ್ನೆಖಾನ್, ಮಹ್ಮದರಫೀಕ ನರೇಗಲ್, ಬಾಬುಸಾಬ್ ನದಾಫ್ ಮಲ್ಲಮ್ಮ ಗುಡ್ಡಿಮಠ, ಈರಮ್ಮ ಗುಡ್ಡಿಮಠ. ಮಹಾದೇವಿ ಮೆಣಸಗಿ, ಗಂಗಯ್ಯ ಗುಡ್ಡಿಮಠ ರವರನ್ನು ನಗರದ 23 ನೇ ವಾರ್ಡಿನ ನಗರಸಭಾ ಸದಸ್ಯರು ಹಾಗೂ ಎಚ್ ಕೆ ಪಾಟೀಲ್ ಸೇವಾ ತಂಡದ ಸಂಯೋಜಕರಾದ ಜನಾಬ್ ಬರಕತಲಿ ಮುಲ್ಲಾ ರವರ ನೇತೃತ್ವದಲ್ಲಿ ಹುಲಕೋಟಿಯ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಎಮ್ ಎಮ್ ಜ್ಯೋಶಿ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡದವರಿಂದ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ಎಚ್ ಕೆ ಪಾಟೀಲ್ ಸೇವಾ ತಂಡದ ಕ್ಯಾಪ್ಟನರು, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಉಪಸ್ಥಿತರಿದ್ದರು.
.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 