ಎಚ್ ಕೆ ಪಾಟೀಲ್ ಸೇವಾ ತಂಡದ ವತಿಯಿಂದ ಉಚಿತ ನೇತ್ರ ಶಸ್ತ್ರ ಚೀಕಿತ್ಸಾ ಅಭಿಯಾನ
Free eye surgery campaign by HK Patil Seva Team
ಗದಗ 17 :- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 5 ನೇ ವಾರ್ಡಿನ ನಾಗರಿಕರಿಗಾಗಿ ಎಚ್ ಕೆ ಪಾಟೀಲ್ ಸೇವಾ ತಂಡ ಹಾಗೂ ಹುಲಕೋಟಿಯ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗಷ್ಟೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸೆಗಾಗಿ ಅನುಮೋದನೆಗೊಂಡ ಬೆಟಗೇರಿಯ ಕೆ ಎಚ್ ಡಿ ಸಿ ನೇಕಾರ ಕಾಲನಿ ಬಡಾವಣೆಯ ನಾಗರಿಕರಾದ ವಿದ್ಯಾಬಾಯಿ ಹೈದರಾಬಾದ್, ಕೊಟ್ರವ್ವ ರೋಡ್ದಾನವರ, ನಾಗಮ್ಮ ಗಂಗನಕಟ್ಟಿ, ಲೋಕಪ್ಪ ಕೊಂಡಮಿ, ನಿಂಗಪ್ಪಾ ದೊಡ್ಡಮನಿ,
ಲಕ್ಷ್ಮವ್ವ ರೋಡ್ದಾನವರ, ಗಿರಿಜಮ್ಮ ಮ್ಯಾಳಿ, ಬಸವರಾಜ ಕೆಂಚಗುಂಡಿ, ಹನಮಂತಪ್ಪ ಬಂಡಾ, ರವೀಂದ್ರ ಸಿಂಗ್ ರಜಪೂತ, ಶಂಕರವ್ವ ಚಳಗೇರಿ, ಮುದುಕಯ್ಯ ಕೆಂಚಗುಂಡಿ, ಚಿದಾನಂದಪ್ಪ ದಾಸರ,ಬಾಬಾಜಾನ್ ರೋಣ, ಸರೋಜಮ್ಮ ಮಾಡಗುಂದಿ ರಮಾಬಾಯಿ ಬಸವಾ, ರವರನ್ನು ನಗರದ 5 ನೇ ವಾರ್ಡಿನ ಸೇವಾ ತಂಡದ ಕ್ಯಾಪ್ಟನರಾದ ಡ್ರಾಕ್ಷಾಯಣಿ ಹಾಸಲಕರ ರವರ ನೇತೃತ್ವದಲ್ಲಿ ಹುಲಕೋಟಿಯ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಎಮ್ ಎಮ್ ಜ್ಯೋಶಿ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡದವರಿಂದ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.
ಆ ಪ್ರಯುಕ್ತ ಬೆಟಗೇರಿಯ ಕೆ ಎಚ್ ಡಿ ಸಿ ನೇಕಾರ ಕಾಲನಿಯ ಸಮಸ್ತ ನಾಗರಿಕರು ಸನ್ಮಾನ್ಯ ಡಾಕ್ಟರ್.ಎಚ್ ಕೆ ಪಾಟೀಲ ಸಾಹೇಬರಿಗೆ ಹಾಗೂ ಸನ್ಮಾನ್ಯ ಡಿ ಆರ್ ಪಾಟೀಲ ಸಾಹೇಬರಿಗೆ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ್ ಹಾಗೂ ಡಾ ಎಸ್ ಆರ್ ನಾಗನೂರ ಡಾ ವೇಮನ ಸವಕಾರ ಡಾಕ್ಟರ್ ರಫೀಕ್ ಕರಕಟ್ಟಿ ಸಿಸ್ಟೆರ್ ಆಶೀಯಾ ರವರ ಸೇವೆಯನ್ನು ಸ್ಮರಿಸಿದರು. ಈ ಸಂಧರ್ಭದಲ್ಲಿ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 