24 ನೇ ವಾರ್ಡಿನ ನಾಗರಿಕರಿಗೆ ಎಚ್ ಕೆ ಪಾಟೀಲ್ ಸೇವಾ ತಂಡದ ವತಿಯಿಂದ ಉಚಿತ ಕಣ್ಣಿನ ಲೆನ್ಸ್, ಹಾಗೂ ಶಸ್ತ್ರ ಚಿಕಿತ್ಸೆ
Free eye lenses and surgery provided by HK Patil Seva Team to citizens of Ward 24
ಗದಗ 21:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 24 ನೇ ವಾರ್ಡಿನ ನಾಗರಿಕರಿಗಾಗಿ ಎಚ್ ಕೆ ಪಾಟೀಲ್ ಸೇವಾ ತಂಡ ಗದಗ ಹಾಗೂ ಹುಲಕೋಟಿಯ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗಷ್ಟೇ ಬಡಾವಣೆಯ ನಾಗರಿಕರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಣ್ಣಿನ ತಪಾಸಣಾ ಶಿಬಿರದಲ್ಲಿ ಪ್ರಮುಖವಾಗಿ ಕಣ್ಣಿನ ಲೆನ್ಸ್ ಹಾಗೂ ಪೋರೆ ಶಸ್ತ್ರ ಚಿಕಿತ್ಸೆಗಾಗಿ ಅನುಮೋದನೆಗೊಂಡ ಬಡಾವಣೆಯ ನಾಗರಿಕರಾದ ಪಾರ್ವತೆವ್ವಾ ಲಕ್ಷಮೇಶ್ವರ್, ರವೀಂದ್ರಸಾ, ಬಸವರಾಜ ಇರಕಲ್, ಪರವೀನ ಬಾನು ಮದರ್ಸಾ,
ಇಮಾಮ ಸಾಬ್ ಇಟಿ, ಹಜರೆಸಾಬ್ ಹಣಗಿ, ಸುಧಾ ನಲವಡಿ, ಫಕ್ಕೀರ್ಪ ಲಕ್ಷಮೇಶ್ವರ್, ಅಬ್ದುಲ್ ರಹೀಮ್ ಬನ್ನೂರ್, ಹುಸೇನಬಿ ಇಲಕಲ್ಲ, ತುಳಜನಸಾ ಎಚ್, ಕಸ್ತೂರಿಬಾಯಿ ಬಾಕಳೆ, ಖುರೇಶಬಿ ಸೊನ್ನೆಖಾನ್,ಚಾಂದಬಿ ಹಬ್ಬುನವರ, ಮಹಮ್ಮದ್ ಅಲಿ ನರಗುಂದ, ಮಹಮ್ಮದ್ ಸಾಬ್ ಬೂದಿಹಾಳ್‌ರವರನ್ನು ನಗರದ 24 ನೇ ವಾರ್ಡಿನ ಸೇವಾ ತಂಡದ ಕ್ಯಾಪ್ಟನರಾದ ಶಿವಪ್ಪ ತಿಪ್ಪಣ್ಣ ಬಳ್ಳಾರಿ ರವರ ನೇತೃತ್ವದಲ್ಲಿ ಹುಲಕೋಟಿಯ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಎಮ್ ಎಮ್ ಜ್ಯೋಶಿ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡದವರಿಂದ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಲೆನ್ಸ್ ಅಳವಡಿಕೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.
ಆ ಪ್ರಯುಕ್ತ 24 ನೇ ವಾರ್ಡಿನ ಸಮಸ್ತ ನಾಗರಿಕರು ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಬುರಬುರೆ, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಗೌಡ ಎಚ್ ಪಾಟೀಲ್ ಹಾಗೂ ಎಚ್ ಕೆ ಪಾಟೀಲ್ ಸೇವಾ ತಂಡದ ಗೌರವಾಧ್ಯಕ್ಷರಾದ ಡಾ ಎಸ್ ಆರ್ ನಾಗನೂರ, ಸಂಯೋಕರಾದ ಎಮ್ ಸಿ ಶೇಖ, ಡಾ ವೇಮನ ಸಾವಕಾರ, ವೈಧ್ಯಕೀಯ ಸಹಾಯಕರಾದ ರಫೀಕ್ ಕರಕಟ್ಟಿ ಸಿಸ್ಟೆರ್ ಆಶೀಯಾ ನದಾಫ್, ಸವಿತಾ ಬಡಿಗೇರ್,ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ರವರ ಜನಸೇವೆಯನ್ನು ಸ್ಮರಿಸಿದರು. ಈ ಸಂಧರ್ಭದಲ್ಲಿ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 