ಉಚಿತ ಶಿಬಿರಗಳಿಂದ ಬಡವರಿಗೆ ಹೆಚ್ಚು ಅನುಕೂಲ: ಡಾ.ಪ್ರಭುಗೌಡ
Free camps will benefit the poor more: Dr. Prabhugowda
ಉಚಿತ ಶಿಬಿರಗಳಿಂದ ಬಡವರಿಗೆ ಹೆಚ್ಚು ಅನುಕೂಲ: ಡಾ.ಪ್ರಭುಗೌಡ
ತಾಳಿಕೋಟಿ 06: ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ ಆರೋಗ್ಯ ಜಾತ್ರೆ ಎಂಬ ಹೆಸರಿನಲ್ಲಿ ಸರ್ವರೋಗಳ ತಪಾಸಣೆಯ ಈ ಉಚಿತ ಶಿಬಿರುವನ್ನು ಪಿಎಲ್‌ಡಿಇ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ಪಟ್ಟಣದ ಖಾಸ್ಗತೇಶ್ವರ ಸಭಾಭವನದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಬಿ.ಎಲ್.ಡಿ.ಇ.ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಸರ್ವ ರೋಗಗಳ ಉಚಿತ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಉಚಿತ ಆರೋಗ್ಯ ಶಿಬಿರಗಳಿಂದ ಗ್ರಾಮೀಣ ಭಾಗದ ಬಡ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಆರ್ಥಿಕ ಕಾರಣಗಳಿಂದಾಗಿ ಅವರು ದೊಡ್ಡ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ ಅವರಿಗೆ ಅನುಕೂಲವಾಗಲೆಂದೇ ಇಂತಹ ಶಿಬಿರಗಳನ್ನು ನಡೆಸಲಾಗುತ್ತದೆ ಎಂದರು. ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.
ನಂತರ ನಡೆದ ಆರೋಗ್ಯ ಶಿಬಿರದಲ್ಲಿ 350 ಜನರು ನೇತ್ರ ತಪಾಸಣೆಗೆ ಒಳಗಾದರು ಇವರಲ್ಲಿ 80 ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು. ಸುಮಾರು 300ಕ್ಕಿಂತಲೂ ಹೆಚ್ಚು ಜನರು ಇತರ ರೋಗಗಳಿಗಾಗಿ ತಪಾಸಣೆ ಮಾಡಿಸಿ ಕೊಂಡರು. 45 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರುಗಣ್ಯರಾದ ಬಾಳಾಸಾಹೇಬಗೌಡ ಪಾಟೀಲ( ಸಾತಿಹಾಳ), ಡಾ.ವಿ.ಎಸ್.ಕಾರ್ಚಿ, ಮುರಗೇಶ ವಿರಕ್ತಮಠ, ಡಾ.ನಜೀರ, ಡಾ.ಅಗರವಾಲ, ಸಂಗಮೇಶ ದೇಸಾಯಿ, ಬಾಲು ತಳವಾರ, ಸಂಗನಗೌಡ ಲಿಂಗದಳ್ಳಿ, ನಾನಾಗೌಡ ನಡುವಿನಮನಿ, ಸುರೇಶಕುಮಾರ ಪೀರಾಪೂರ, ಶಿವು ದೇಸಾಯಿ, ಶ್ರೀಶೈಲ ಸಜ್ಜನ, ದತ್ತಾತ್ರೇಯ ಹೊಸಮಠ, ಮಲ್ಲನಗೌಡ ಬಿರಾದಾರ, ಬಿ.ಎಲ್.ಡಿ.ಇ. ವೈದ್ಯೆಕೀಯ ಆಸ್ಪತ್ರೆ ಹಾಗೂ ಅನುಗ್ರಹ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 