ಹೊಂಡಾ ಸೇವೆ ಮತ್ತು ಮಾರಾಟದಲ್ಲಿ ನಾಲ್ಕನೇ ಸ್ಥಾನ : ಶಾಸಕ ಸುನೀಲಗೌಡ ಪಾಟೀಲ
Fourth place in Honda service and sales: MLA Sunil Gowda Patil
ಹೊಂಡಾ ಸೇವೆ ಮತ್ತು ಮಾರಾಟದಲ್ಲಿ ನಾಲ್ಕನೇ ಸ್ಥಾನ : ಶಾಸಕ ಸುನೀಲಗೌಡ ಪಾಟೀಲ
ವಿಜಯಪುರ 29: ಗ್ರಾಹಕರ ಪ್ರೀತಿ ಮತ್ತು ವಿಶ್ವಾಸದ ಫಲವಾಗಿ ನಗರದ ಪಾಟೀಲ ಹೊಂಡಾ ಸೇವೆ ಮತ್ತು ಮಾರಾಟದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತು ಪಾಟೀಲ ಹೊಂಡಾ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ.
ಇಂದು ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹೊಂಡಾ ಶೈನ್ ಡಿಎಮ್‌ಎಕ್ಸ್ 100 ಮತ್ತು ಹಾರ್ನೆಟ್ ಸಿ.ಬಿ 125 ಮಾದರಿಯ ನೂತನ ಬೈಕ್ ಬಿಡುಗಡೆ ಕ್ರಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಟೀಲ ಹೊಂಡಾ ವಿಜಯಪುರ ಜಿಲ್ಲೆಯಲ್ಲಿ 13 ಮತ್ತು ಬಾಗಲಕೋಟೆ ಜಿಲ್ಲೆ 9 ಸೇರಿದಂತೆ ಒಟ್ಟು 22 ಶಾಖೆಗಳನ್ನು ಹೊಂದಿದ್ದು, ಎರಡು ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ. ನಮ್ಮ ವಹಿವಾಟು ದೊಡ್ಡ ನಗರಗಳಿಗಿಂತಲೂ ಹೆಚ್ಚಾಗಿದೆ. ಐಟಿಐ, ಡಿಪ್ಲೋಮಾ ಹಾಗೂ ಎಂಜೀನೀಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ, ಮುಂದೆಯು ಈ ಭಾಗದ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತೇವೆ. ನಮ್ಮ ಈ ಸಾಧನೆಗೆ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ, ಪ್ರೀತಿ ಹಾಗೂ ಸ್ಪಂದನೆ ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೊಂಡಾ ಕಂಪನಿಯ ಉತ್ತರ ಕರ್ನಾಟಕ ವಲಯ ವ್ಯವಸ್ಥಾಪಕ ಪ್ರವೀಣ ಶರ್ಮಾ, ವಲಯ ಉಸ್ತುವಾರಿ ವಿಷ್ಣು ಕೆ.ಟಿ, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಪಿ, ಪಾಟೀಲ ಹೊಂಡಾ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ಆದಿತ್ಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರಿಯಾಂಕ ಅರ್ಜುನ ಕಾಲವಾಡ, ಕಾರ್ತಿಕ ಪಾಟೀಲ ನಿರೂಪಿಸಿದರು. ಗ್ಯಾಬ್ರೀಯಲ್ ಶರವೀನ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಂಜೀನೀಯರಿಂಗ್ ಕಾಲೇಜಿನ ಕಲರವ ತಂಡದ ಸದಸ್ಯರು ಡಾ. ವೈ. ಎ. ಕುಲಕರ್ಣಿ ಮತ್ತು ವೀಣಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಒಐಅ ಖಃಕ ಓಜತಿ ಃಞಜ ಐಚಿಣಟಿಛಿ: ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜೀನೀಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಹೊಂಡಾ ಶೈನ್ ಡಿಎಮ್‌ಎಕ್ಸ್ 100 ಮತ್ತು ಹಾರ್ನೆಟ್ ಸಿ.ಬಿ 125 ಮಾದರಿಯ ನೂತನ ಬೈಕ್ ಬಿಡುಗಡೆ ಕ್ರಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಪ್ರವೀಣ ಶರ್ಮಾ, ವಿಷ್ಣು ಕೆ.ಟಿ, ಮಂಜುನಾಥ ಪಿ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 