ಕಾರವಾರ; ಜಿಲ್ಲೆಯಲ್ಲಿ ನಾಲ್ಕು ಬುಡಕಟ್ಟು ಮತಗಟ್ಟೆಗಳು

ಕಾರವಾರ 21: ಸುಗಮ ಮತದಾನಕೆ ಸರ್ವರ ಪಾಲ್ಗೊಳ್ಳುವಿಕೆ ಎಂಬ ಚುನಾವಣಾ ಆಯೋಗದ ಧ್ಯೇಯದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಗಿರಿಜನರ ಹಾಡಿಯಲ್ಲಿ ಸಾಂಪ್ರಾದಾಯಿಕ ಮತಗಟ್ಟೆಗಳನ್ನು ಉತ್ತರ ಕನ್ನಡ ಜಿಲ್ಲಾಡಳಿತ ಮಾಡಿದೆ.

ಉತ್ತರ ಕನ್ನಡ ಮತಕ್ಷೇತ್ರದಲ್ಲಿ ವಿವಿಧ ಬುಡಗಟ್ಟು ಸಮುದಾಯಗಳು ಇದ್ದು ಅವರು ವಾಸಿಸುವ ಪ್ರದೇಶದ ಮತಗಟ್ಟೆಗಳು ಅವರಿಗೆ ಹೊಗ್ಗುವಂತಿರಬೇಕೆಂಬ ಉದ್ದೇಶದಿಂದ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವಂತೆ ಮತಗಟ್ಟೆಗಳನ್ನು ಅಲಂಕರಿಸಲಾಗಿದೆ.

ಸಿದ್ದಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಳಿಯಾಳದ ಸಾಂಬ್ರಾಣಿ ಹಾಗೂ ಗರಡೋಳ್ಳಿ ಹಾಗೂ ಯಲ್ಲಾಪುರ ತಾಲೂಕಿನ ಕೋಟೆಮನೆ ಹಾಗೂ ಬಿಳಕಿಯ ಸಕರ್ಾರಿ ಪ್ರಾಥಮಿಕ ಶಾಲೆಗಳನ್ನು ಸಾಂಪ್ರಾದಾಯಿಕ ಮತಗಟ್ಟೆಗಳೆಂದು ಗುರುತಿಸಿ ಬುಡಕಟ್ಟು ಸಾಂಪ್ರದಾಯದಂತೆ ಹಸೆ ಚಿತ್ತಾರಗಳಿಂದ ಅಲಂಕರಿಸಲಾಗಿದೆ