ಗಣೇಶ ಚತುರ್ಥಿಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಲು ಮಾಜಿ ಶಾಸಕಿ ಮನವಿ

ಗಣೇಶ ಚತುರ್ಥಿಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಲು ಮಾಜಿ ಶಾಸಕಿ ಮನವಿ Former MLA requests permission to use DJs during Ganesh Chaturthi

ಗಣೇಶ ಚತುರ್ಥಿಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಲು ಮಾಜಿ ಶಾಸಕಿ ಮನವಿ 

 ಕಾರವಾರ : ಗಣೇಶ ಚತುರ್ಥಿ ಸಂದರ್ಭದಲ್ಲಿ  ಡಿಜೆ ಹೆವಿ  ಸ್ಪೀಕರ್  ಬಳಕೆಗೆ ಅವಕಾಶ ಮಾಡಿಕೊಡುವಂತೆ  ಮಾಜಿ ಶಾಸಕಿ ರೂಪಾಲಿ ಎಸ್‌.ನಾಯ್ಕ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ ರೂಪಾಲಿ ಎಸ್‌.ನಾಯ್ಕ, ರಾಜ್ಯ ಸರ್ಕಾರ ಹಿಂದುಗಳ ಪವಿತ್ರ ಹಬ್ಬವಾದ ಗಣೇಶ ಚತುರ್ಥಿ ಸಂದರ್ಭದಲ್ಲಿ ಡಿಜೆ ಬಳಕೆಗೆ ನಿಬಂರ್ಧ ವಿಧಿಸಿರುವುದು ಸರಿಯಲ್ಲ ಎಂದರು.ಗಣೇಶೋತ್ಸವ ಎಂದರೆ ಅದೊಂದು ಊರಿಗೆ ಊರೇ ಸಂಭ್ರಮಿಸುವ ಹಬ್ಬ. ಹಿಂದುಗಳು ವರ್ಷದಲ್ಲಿ 11 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರಿ​‍್ಡಸುತ್ತಾರೆ. ಈ ಅವಧಿಯಲ್ಲಿ ಡಿಜೆ ಬಳಕೆಗೆ ಸಮಯದ ಮಿತಿ ಹಾಕುವುದು ಸರಿಯಲ್ಲ. ನಮ್ಮ ಜಿಲ್ಲೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಅವರನ್ನು ವಿನಂತಿಸಿದರು. ಹಾಗೆಯೇ ರಾಜ್ಯ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ವಿನಂತಿಸಿದರು.  ಹಿಂದು ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು......