ಜಾತಿ ಗಣತಿ ವರದಿ ಬಗ್ಗೆ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ.
ಬ್ಯಾಡಗಿ 19 : ಜನರಿಗೆ ತಪ್ಪು ತಿಳುವಳಿಕೆ ನೀಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ್ದಾಗಿದ್ದು ಸರ್ಕಾರವು ಕರ್ನಾಟಕದ ಮನೆ ಮನೆಗೆ ಹೋಗಿ ವೈಜ್ಞಾನಿಕವಾಗಿ ಜಾತಿಗಾರ್ತಿ ಮಾಡಿಲ್ಲ ಗುಜರಾತ್ನಲ್ಲಿದ್ದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರ ನಿರ್ದೇಶನದಂತೆ ಜಾತಿಗಣತಿ ಬಿಡುಗಡೆ ಮಾಡಿದ್ದಾರೆ 10 ವರ್ಷದ ಜಾತಿ ಗಣತಿಯನ್ನು ಈಗ ಬಿಡುಗಡೆ ಮಾಡುತ್ತಿರುವುದು ಎಷ್ಟು ಸರಿ? 10 ವರ್ಷದಲ್ಲಿ ಎಷ್ಟು ಜನ ಸತ್ತು ಹೋಗಿದ್ದಾರೆ ಯಾರು ಇದ್ದಾರೆ ಯಾರು ಇಲ್ಲ ಎಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಲ್ಲಿ ಆ ಸಾಕಷ್ಟು ಆಕ್ರೋಶವಿದೆ ಈಗ ಅದು ಹೊರಬರುತ್ತಿದ್ದು ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬರಲಿದೆ.ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅನುಮತಿಯಿಲ್ಲ ಕಾರಣ ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕು ಜಾತಿ ಗಣತಿಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ ಆಗಲಿದೆ.ಇದರಿಂದ ಸಮಾಜದಲ್ಲಿ ಜಾತಿ ಎಂಬ ಬೀಜ ಬಿತ್ತಿ ಜಾತಿಗಳ ಮೂಲಕ ಸಮಾಜದಲ್ಲಿ ಸಂಘರ್ಷ ಹಾಗೂ ಹೋಡೆದಾಡಿ ಬಡೆದಾಡುವ ಕೆಲಸ ಆಗುತ್ತದೆ ಹಾಗೂ ಜನರಿಗೆ ತಪ್ಪು ತಿಳುವಳಿಕೆ ನೀಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ.ಸಮಾಜದ ಮನಸ್ಥಿತಿ ಕೆಡಿಸುವ ಕೆಲಸ ಮಾಡುವುದು ಕಾಂಗ್ರೆಸ್ನ ಕೆಲಸ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ.