ಮಾಜಿ ಶಾಸಕ ಬೆನಕೆ, ಸಂಸದ ಶೆಟ್ಟರ್ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ

Former MLA Benake, MP Shettar visit Siddheshwar temple

ಮಾಜಿ ಶಾಸಕ ಬೆನಕೆ, ಸಂಸದ ಶೆಟ್ಟರ್ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ  

ಬೆಳಗಾವಿ 21: ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಶಾಸಕ ಅನಿಲ್ ಬೆನಕೆ ಅವರು ಸಂಸದ ಜಗದೀಶ್ ಶೆಟ್ಟರ್ ಅವರೊಂದಿಗೆ ಇಂದು ಕಣಬರ್ಗಿ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.  ನಂತರ ದೇವಸ್ಥಾನ ಟ್ರಸ್ಟ್‌ ಕಮಿಟಿ ವತಿಯಿಂದ ಸಂಸದರು ಹಾಗೂ ಅನಿಲ್ ಬೆನಕೆ ಅವರನ್ನು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪೂರ್ತಿ ಗೊಳಿಸಿದ್ದಕ್ಕಾಗಿ ಸತ್ಕರಿಸಲಾಯಿತು.  ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಮಾತನಾಡಿ, ಭಕ್ತರ, ಕಣಬರ್ಗಿ ನಿವಾಸಿಗಳ ಹಾಗೂ ದೇವಸ್ತಾನ ಟ್ರಸ್ಟ್‌ ಕಮಿಟಿ ಬೇಡಿಕೆಯಂತೆ ನಾನು ಶಾಸಕನಾಗಿದ್ದಾಗ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಕಾಂಕ್ರೀಟ್ ಅಳವಡಿಕೆ, ಪೈಪಲೈನ್ ಮೂಲಕ ನೀರಿನ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ, ಭಕ್ತರಿಗೆ ಅನುಕೂಲವಾಗುವಂತೆ ಶೌಚಾಲಯ, ಸ್ನಾನಗೃಹಗಳ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಅದರಂತೆ ಸಂಸದರ ವತಿಯಿಂದ ತಡೆಗೋಡೆ( ಕಂಪೌಂಡ್) ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ, ಇನ್ನುಮುಂದೆಯು ಸಹ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ನಾನು ಸಿದ್ಧ ಎಂದು ತಿಳಿಸಿದರು.