ರಾಜ್ಯದಲ್ಲಿ ಬಿಜೆಪಿ ಪ್ರಭಲವಾಗಲು ಮಾಜಿ ಮುಖ್ಯಮಂತ್ರಿ ಯಡೀಯೂರ​‍್ಪನವರು ಕಾರಣ: ಸಿದ್ದರಾಜ ಹೋಳಿ

Former Chief Minister Yediyurappa is the reason for BJP's dominance in the state: Siddaraja Holi

ರಾಜ್ಯದಲ್ಲಿ ಬಿಜೆಪಿ ಪ್ರಭಲವಾಗಲು ಮಾಜಿ ಮುಖ್ಯಮಂತ್ರಿ ಯಡೀಯೂರ​‍್ಪನವರು ಕಾರಣ: ಸಿದ್ದರಾಜ ಹೋಳಿ 

ಮುದ್ದೇಬಿಹಾಳ 11: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡಹಳ್ಳಿ ಅಭಿಮಾನಿ ಬಳಗದಿಂದ  ಮಾಜಿ ಸಿಎಂ ಬಿ ಎಸ್ ಯಡಿಯೂರ​‍್ಪ, ಬಿಜೆಪಿ ರಾಜಾಧ್ಯಕ್ಷ, ಬಿವೈ ವಿಜಯೇಂದ್ರ, ಮಾಜಿ ಶಾಸಕ ಎ.ಎಸ್‌. ಪಾಟೀಲ್ ನಡಹಳ್ಳಿ ಅವರ ಭಾವಚಿತ್ರಗಳಿಗೆ  ಕ್ರೀರಾಭಿಷೇಕ ಮಾಡುವ ಮೂಲಕ ಗೌರವಿಸಿದ್ದಲ್ಲದೇ ಸ್ವಾಭಿಮಾನ ಮೆರೆದರು. 

ಈ ವೇಳೆ  ಸಿದ್ದರಾಜ ಹೋಳಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಇಷ್ಟೋಂದು ಪ್ರಭಲವಾಗಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡೀಯೂರ​‍್ಪನವರ ಮಾತ್ರ ಬಹುಮುಖ್ಯವಾಗಿದೆ.  ಕಾಲಿ ಚಕ್ರವನ್ನು ಕಟ್ಟಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಬಲವರ್ಧನೆಗೊಳಿಸಿದ್ದಾರೆ ಅಂತಹ ಮಹಾನ ನಾಯಕರ ಬಗ್ಗೆ ಯತ್ನಾಳ ಅವರು ಮಾತನಾಡಬೇಕಾದರೇ ಎಚ್ಚರಿಕೆಯಿಂದ ಮಾತನಾಡಬೇಕು. ಬಿಜೆಪಿ ಪಕ್ಷದಲ್ಲಿ ಒಂದು ತತ್ವ ಸಿದ್ದಾಂತ ಮೇಲೆ ಗಟ್ಟಿಗೊಂಡಿದೆ ಆದರೇ ಅಂತಹ ಸಿಸ್ತಿನ ಪಕ್ಷದಲ್ಲಿ ಯಾವ ನಾಯಕರನ್ನು ಬಿಡದೇ ಬಾಯಿಗೆ ಬಂದಂತೆ ಬೈದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರಿಂದ ಕೇಂದ್ರದ ಬಿಜೆಪಿ ರಾಷ್ಟ್ರೀಯ ಸಿಸ್ತುಪಾಲನಾ ಸಮೀತಿಯು ಯತ್ನಾಳವನರನ್ನು ಉಚ್ಚಾಟನೆ ಮಾಡಿದ್ದಾರೆ. ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೇ ಆದರೇ  ಮಾಜಿ ಸಿಎಂ ಬಿ ಎಸ್ ಯಡಿ ಯೂರ​‍್ಪ, ಬಿಜೆಪಿ ರಾಜಾಧ್ಯಕ್ಷ, ಬಿವೈ ವಿಜಯೇಂದ್ರ, ಮಾಜಿ ಶಾಸಕ ಎ.ಎಸ್‌. ಪಾಟೀಲ್ ನಡಹಳ್ಳಿ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಸುಟ್ಟು ಅಪಮಾನಿಸುವುದು ಯಾವ ನ್ಯಾಯ ಎಂದರು. 

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಅವರು ಮಾತನಾಡಿ ಮಾ.17ರಂದು ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಮುದ್ದೇಬಿಹಾಳದಲ್ಲಿ ನಡೆಯಲಿದ್ದು ಹೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳ ಬೇಕೆಂದು ಕರೆ ನೀಡಿದರು. ಈ ವೇಳೆ ಮುಖಂಡರಾದ ಎಂ ಎಸ್ ಪಾಟೀಲ, ಪ್ರಭು ಕಡಿ, ಮುತ್ತುಸಾಹುಕಾರ ಅಂಗಡಿ,  ಮಲಕೇಂದ್ರಯಾಗೌಡ ಪಾಟೀಲ, ಗುರುನಾಥಗೌಡ ಬಿರಾದಾರ, ಗೌರಮ್ಮ ಹುನಗುಂದ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಅಶೋಕ ಒನಹಳ್ಳಿ, , ಮುಕಂಡರಾದ ರಾಜಶೇಖರ ಹೊಳಿ, ಬಸವರಾಜ ಸರೂರ, ಗಿರಿಶಗೌಡ ಪಾಟೀಲ, ಮಾಂತು ಗಂಗನಗೌಡರ, ಶ್ರೀಶೈಲ ರೂಢಗಿ, ಸೋಮನಗೌಡ ಪಾಟೀಲ, ಸೋಮಶೇಖರ ಮೇಟಿ, ರಾಜು ಮೇಟಿ, ಸಂಜು ಬಾಗೇವಾಡಿ, ವಿಜಯ ಬಡಿಗೇರ ಸುಭಾಶ ಕಟ್ಟಿಮನಿ, ಸೇರಿದಂತೆ ಹಲವರು ಇದ್ದರು.