ಕನ್ನಡ ರಕ್ಷಣಾ ವೇದಿಕೆ, ಕನ್ನಡ ಸೇನೆ ಸಂಘಟನೆಯಿಂದ ಆಹಾರ ಕಿಟ್, ಬಟ್ಟೆ ವಿತರಣೆ
Food kits and clothes distributed by Kannada Defence Forum and Kannada Army organization
ಘಟಪ್ರಬ 10 : ಸಮೀಪದ ಬಡಿಗವಾಡ ಗ್ರಾಮದ ರೈತ ರಂಗಪ್ಪ ಮಾಳಪ್ಪ ಚೂಡಪ್ಪಗೋಳ ಹಾಗೂ ಪತ್ನಿ, ನಾಲ್ಕು ಜನ ಮಕ್ಕಳು ಸೇರಿ ಮನೆಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಶನಿವಾರರಂದು ಬೆಳಗ್ಗೆ 10.30 ರ ಸುಮಾರಿಗೆ ಮನೆಯಲ್ಲಿ ಗ್ಯಾಸ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿತ್ತು ಮನೆಯಲ್ಲಿ ಚಿನ್ನಾಭರಣ, ಲಕ್ಷಾಂತರ ನಗದು ಹಣ, ಎರಡು ಎಮ್ಮೆ, ಒಂದು ಆಕಳು, ಗೃಹಬಳಕೆಯ ವಸ್ತುಗಳು, ದವಸ ಧಾನ್ಯಗಳು, ಬಟ್ಟೆ ಬರೆಗಳು, ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿರುವದರಿಂದ ಹನಿಗೋಳಗಾದ ಕುಟುಂಬಸ್ಥರಿಗೆ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ಮತ್ತು ಕನ್ನಡ ಸೇನೆ ಕರ್ನಾಟಕ ಜಂಟಿಯಾಗಿ ಆಹಾರ ಧಾನ್ಯದ ಕಿಟ್ಟಗಳನ್ನು ಹಾಗೂ ಬಟ್ಟೆಗಳನ್ನು ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಸೇರಿ ಸೋಮವಾರಂದು ವಿತರಿಸಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಮಾತನಾಡಿ ನೊಂದ ಕುಟುಂಬಗಳಿಗೆ ಸಹಾಯ ಸಹಕಾರ ಮಾಡುವುದು ಸಂಘಟನೆಗಳ ಉದ್ದೇಶ ಹಾಗೂ ವಿವಿಧ ಸಂಘಟನೆಯವರು ಇಂಥ ಕುಟುಂಬಗಳಿಗೆ ಸಹಾಯ ಸಹಕಾರ ಮಾಡಬೇಕು, ಸಂಘ ಸಂಸ್ಥೆಗಳು, ಧಾನಿಗಳು ಮುಂದೆ ಬಂದು ನೊಂದ ಕುಟುಂಬಕ್ಕೆ ಸಹಾಯ ಸಹಕಾರ ಸಲ್ಲಿಸಬೇಕು, ಮತ್ತು ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಶಾಸಕರು, ಸಚಿವರು, ಈ ಕಡೆ ಗಮನ ಹರಿಸಿ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು,ಎಂದು ಕರವೇ ರಾಜ್ಯಾಧ್ಯಕ್ಷರು ವಿನಂತಿಯಿಂದ ಅಗ್ರಹ ಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಗೋಕಾಕ್ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ, ಕರವೇ ಮುಖಂಡರಾದ ತಮ್ಮಣ್ಣಾ ಅರಭಾವಿ, ಕರವೇ ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಸುರೇಶ ಚಿಗಡೊಳ್ಳಿ, ಕರವೇ ಗೋಕಾಕ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕರವೇ ಮೂಡಲಗಿ ತಾಲೂಕ ಕಾರ್ಯದರ್ಶಿಯಾದ ಮಲ್ಲೇಶ ಚೌಕಶಿ, ಕರವೇ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ ಚೌಕಶಿ, ರಮೇಶ ಮಲ್ಲಾಪುರೆ, ಸಿದ್ದಪ್ಪ ನಲ್ಲಾನಟ್ಟಿ, ಸಿದ್ದರಾಮ ನಲ್ಲಾನಟ್ಟಿ, ಪುಂಡಲೀಕ ನಂದಗಾವಿ, ಶಂಕರ ಜೋಗಿ, ವಿಠ್ಠಲ ಜಾಗನೂರ, ಯೇಸು ರಾಣ್ಣಪ್ಪಗೋಳ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ವಿಠ್ಠಲ್ ಚೂಡಪ್ಪಗೊಳ, ಬಸಪ್ಪ ಚೂಡಪ್ಪಗೊಳ, ಹಾಗೂ ಅನೇಕ ಸಂಘಟನೆ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 