ಧಾರವಾಡ 29: ಮಹಿಳೆಯರ ಅಂತರಂಗದ ನೋವು ನಲಿವುಗಳೇ ಜಾನಪದ ಹಾಡುಗಳಾಗಿ ರೂಪಗೊಂಡಿವೆ ಎಂದು ಉಪನ್ಯಾಸಕಿ ಡಾ. ಶೈಲಾ ಎಮ್ ದೊಡವಾಡ ಅಭಿಪ್ರಾಯ ಪಟ್ಟರು.
ಅವರು ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾ ಭವನದಲ್ಲಿ ಬೆಲವಂತರದ ಮೈಲಾರಲಿಂಗೇಶ್ವರ ಮಹಿಳಾ ಜಾನಪದ ಸಂಘವು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ 2019ರ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಮಹಿಳೆಯರು ತಮ್ಮ ಬದುಕಿನ ಸಿಹಿ ಕಹಿ ಘಟನೆಗಳನ್ನು ತಮ್ಮ ಸ್ವಅನುಭಾವದ ಮೂಲಕ ಹಾಡಾಗಿಸಿದವರು. ನಿರಕ್ಷರಿಗಳಾದ ಮಹಿಳೆಯರು ತಮ್ಮ ಲೋಕಾನುಭವದ ಮೂಲಕ ಜಾನಪದ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದರು ಎಂದು ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ವೀರಣ್ಣ ಒಡ್ಡೀನ ಅತಿಥಿಯಾಗಿ ಮಾತನಾಡಿ, ಜನಪದ ಬದುಕು ನಮ್ಮ ಪಿತ್ರಾಜರ್ಿತ ಆಸ್ತಿ. ಅದನ್ನು ಕೊಂಡು ತಂದಿದ್ದಲ್ಲ, ಅದು ನಮಗೆ ಬಳುವಳಿಯಾಗಿ ಬಂದಿದ್ದು, ಜಾನಪದ ಮಹಿಳೆ ಜೀವನದಲ್ಲಿ ಪಟ್ಟ ಪಾಡೆ ಹಾಡುಗಳಾಗಿ ಹೊರಹೊಮ್ಮಿವೆ. ಜನಪದ ಮಹಿಳೆಯ ಜೀವನವು ಕುಟುಂಬಕ್ಕೆ ಸೀಮಿತವಾಗದೆ ಅವಳ ವ್ಯಕ್ತಿತ್ವದ ವಿಕಾಸದ ಸರ್ವಮಾರ್ಗಗಳು ಅನಾವರಣ ಆಗಬೇಕೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ಸಂಘದ ಕಾರ್ಯದಶರ್ಿ ಕಲ್ಲವ್ವ ಚಿಕ್ಕಣ್ಣವರ ಮಾತನಾಡಿದರು. ಅತಿಥಿಗಳಾಗಿ ಸಾಹಿತಿ ಮಹಮ್ಮದ ಅಲಿ ಗೂಡುಬಾಯಿ, ಮೀರಾ ಎಮ್ ಬೀರಣ್ಣವರ, ಶಾರವ್ವ ಗೊಲ್ಲಗೌಡರ, ಶಿವಾನಂದ ಅಮರಶೆಟ್ಟಿ, ಇಮಾಮಸಾಬ ವಲ್ಲೆಪ್ಪನವರ, ಗಣೇಶ ಹಾಸಲಕರ, ವಾಯ್. ಬಿ ಕಾಳೆ, ಗಂಗವ್ವ ಆಡಿನವರ ಆಗಮಿಸಿದ್ದರು.
ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಜಾನಪದ ಕಲಾವಿದ ಪ್ರಕಾಶ ಮಲ್ಲಿಗವಾಡ ನಡೆಸಿಕೊಟ್ಟರು.
ಜಾನಪದ ಕಲಾವಿದ ಯಕ್ಕೇರಪ್ಪ ನಡುವಿನಮನಿ ಇವರು ಜಾನಪದ ಸಂಗೀತ ಹಾಗೂ ಶಾರವ್ವಾ ಗೊಲ್ಲಗೌಡರ ತಂಡದಿಂದ ಸಂಪ್ರದಾಯ ಪದಗಳು ಮತ್ತು ಬಸವ್ವ ಹೊಸೂರ ತಂಡದಿಂದ ಕೋಲಾಟ ಕಾರ್ಯಕ್ರಮಗಳು ನಡೆದು ಸಭಿಕರ ಮನತಣಿಸಿದವು.