ಜಾನಪದ ಸಾಹಿತ್ಯವು ಬದುಕಿನ ಪ್ರೀತಿಯ ಸಂಕೇತ: ಪ್ರೊ. ಸಿ. ಎಮ್‌. ತ್ಯಾಗರಾಜ

Folk literature is a sign of love for life: Prof. C. M. Tyagaraja

ಜಾನಪದ ಸಾಹಿತ್ಯವು ಬದುಕಿನ ಪ್ರೀತಿಯ ಸಂಕೇತ: ಪ್ರೊ. ಸಿ. ಎಮ್‌. ತ್ಯಾಗರಾಜ  

ಜಾನಪದ ಸಾಹಿತ್ಯವು ಬದುಕಿಗೆ ಬೇಕಾಗಿರುವ ಪ್ರೀತಿಯ ಪಾಠವನ್ನು ಮಾಡುತ್ತದೆ. ಜೀವನಕ್ಕೆ ನೀತಿ ಪಾಠವನ್ನು ಮಾಡಿ ಸಂಬಂಧಗಳ ಬೆಸುಗೆಯನ್ನು ನೀಡುವ ಜಾನಪದ ಸಾಹಿತ್ಯ ಇಂದು ಅಳಿವಿನಂಚಿನಲ್ಲಿ ಇರುವುದು ಶೋಚನೀಯ  ಸಂಗತಿಯಾಗಿದೆ. ಜನಪದ ಸಾಹಿತ್ಯ ಉಳಿವಿಗಾಗಿ ಸಂಶೋಧನೆಗಳು ನಡೆಯಬೇಕಾಗಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಮ್‌. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಅಧ್ಯಯನ ಸಂಸ್ಥೆ ಇವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯ ಜನಪದ ಸಿರಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಜಾನಪದ ಸತ್ವ : ತತ್ವ  ಕೃತಿ ಜನಪದ ಮತ್ತು ಜಾನಪದ ಕುರಿತು ಪ್ರಾದೇಶಿಕ ನೆಲಮೂಲ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದರು. 

ಇಂದಿನ ಸಮಕಾಲೀನ ಯುವಕರಿಗೆ ಮನವರಿಕೆ ಮಾಡುವ ಅವಶ್ಯಕತೆಯ ಕಾಲ ಎದುರಾಗಿದೆ. ಜನಪದ ಸಾಹಿತ್ಯ ಇಂದಿನ ಯುವಕರಲ್ಲಿ ಜಾನಪದ ಸತ್ವ ಮತ್ತು ತತ್ವ ಯಾವುದು ಇಲ್ಲದೆ ಇರುವುದು ಕಂಡು ಬರುತ್ತಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕಾಗಿರುವ ತುರ್ತು ಅವಶ್ಯಕತೆ ಇದೆ. ಆದ್ದರಿಂದ  ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯುವುದರಿಂದ ಯುವಕರಿಗೆ ಜಾನಪದ ಪ್ರೀತಿ ಮತ್ತು ಜಾನಪದ ಪ್ರೇಮವನ್ನು ಬೆಳೆಸಬಹುದಾಗಿದೆ ಎಂದು ಪ್ರೊ. ಸಿ. ಎಮ್‌. ತ್ಯಾಗರಾಜ ಅವರತು ಹೇಳಿದರು. 

ಜಾನಪದ ಲೇಪನವಿಲ್ಲದ ಯಾವುದೇ ಕ್ಷೇತ್ರವು ನಮಗೆ ಸಿಗುವುದಿಲ್ಲ. ಆದ್ದರಿಂದ ವಿವಿಧ ಕ್ಷೇತ್ರದ ಜೊತೆಗೆ ತೌಲನಿಕವಾಗಿ ಜಾನಪದವನ್ನು ನೋಡುವುದರಿಂದ ಜಾನಪದ ಬೇರೆ ಬೇರೆ ಕ್ಷೇತ್ರದೊಂದಿಗೆ ಬೆಸೆದಿರುವ ನಂಟು ತಿಳಿಯುತ್ತದೆ ಎಂದು ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಂ. ಎನ್‌. ವೆಂಕಟೇಶ  ಆಶಯ ನುಡಿಗಳ್ನಾಡಿದರು.  

ಜಾನಪದ ಸತ್ವ : ತತ್ವ ಎಂಬ ಕೃತಿಯ ಕುರಿತು ಮಾತನಾಡಿದ ಶಿವಮೊಗ್ಗ ಜಾನಪದ ವಿದ್ವಾಂಸರಾದ ಪ್ರೊ. ಎನ್‌. ಎಂ ಮುತ್ತಯ್ಯ ಅವರು ಸಮಾಜದೊಂದಿಗೆ ಜಾನಪದವು ಹೊಂದಿರುವ ನಂಟಿನ ಕುರಿತು ವಿವಿಧ ಲೇಖನಗಳು ರಚನೆಯಾಗಿರುವುದನ್ನು ಸಮಾಜದ ಮುಖ್ಯವಾಹಿನಿಗೆ ತಂದಿರುವುದು ವಿಶೇಷವಾಗಿದೆ ಎಂದು ಮಾತನಾಡಿದರು. ಡಾ ರಾಮು ಮೂಲಗಿ ಮತ್ತು ಡಾ ಜಯಾನಂದ ಮಾದರ ಅವರು ಕರ್ನಾಟಕದ ವಿವಿಧ ಜಾನಪದ ಹಾಡುಗಳನ್ನು ಹಾಡುವ ಮುಖಾಂತರ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾದ ಮಹತ್ವವನ್ನು ತಂದರು. ಕಾರ್ಯಕ್ರಮದಲ್ಲಿ ಡಾ. ಪಿ ನಾಗರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಪ್ರೊ. ಹಾ. ಮಾ. ನಾಗಾರ್ಜುನ ಅವರು ಉಪಸ್ಥಿತರಿದ್ದರು. ಡಾ. ಮಹೇಶ ಗಾಜಪ್ಪನವರ ಅವರು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಡಾ ಹನುಮಂತಪ್ಪ ಸಂಜೀವಣ್ಣವರ ಅವರು ವಂದಿಸಿದರು. ಡಾ  ಗಜಾನನ  ನಾಯ್ಕ ನಿರೂಪಿಸಿದರು.   

ಸಮಾರೋಪ ಸಮಾರಂಭದಲ್ಲಿ ಪ್ರೊ. ಎಸ್‌. ಎಂ. ಗಂಗಾಧರಯ್ಯ ಅವರು ಸಮಾರೋಪ ನುಡಿಗಳ ನಾಡಿದರು ಡಾ. ಶೋಭಾ ನಾಯಕ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು  ಮತ್ತು  ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.