ತುಂಗಭದ್ರಾ ನದಿ ತೀರದ 6 ಗ್ರಾಮ ಸಮೀಕ್ಷೆ ಯಿಂದ ದೂರ ಸಮೀಕ್ಷೆ ಯಲ್ಲಿ ಜಿಲ್ಲೆಯಲ್ಲಿ ಹೂವಿನಹಡಗಲಿ ಮೊದಲು ಸ್ಥಾನ

ತುಂಗಭದ್ರಾ ನದಿ ತೀರದ 6 ಗ್ರಾಮ ಸಮೀಕ್ಷೆ ಯಿಂದ ದೂರ ಸಮೀಕ್ಷೆ ಯಲ್ಲಿ ಜಿಲ್ಲೆಯಲ್ಲಿ ಹೂವಿನಹಡಗಲಿ ಮೊದಲು ಸ್ಥಾನ  Flower boat ranks first in the district in the survey conducted from a distance of 6 villages on th

ತುಂಗಭದ್ರಾ ನದಿ ತೀರದ 6 ಗ್ರಾಮ ಸಮೀಕ್ಷೆ ಯಿಂದ ದೂರ ಸಮೀಕ್ಷೆ ಯಲ್ಲಿ ಜಿಲ್ಲೆಯಲ್ಲಿ ಹೂವಿನಹಡಗಲಿ ಮೊದಲು ಸ್ಥಾನ  


ಹೂವಿನಹಡಗಲಿ 5: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯು ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಜಯನಗರ ಜಿಲ್ಲೆಯಲ್ಲೇ ಹೂವಿನಹಡಗಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.ಪಟ್ಟಣದ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಸಮೀಕ್ಷೆಯನ್ನು ಮನೆ ಮನೆಗೂ ತೆರಳಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೂವಿನಹಡಗಲಿ- ಶೇ.81.64, ಕೂಡ್ಲಿಗಿ- ಶೇ.78.92, ಹಗರಿಬೊಮ್ಮನಹಳ್ಳಿ- ಶೇ.77.26, ಹರಪನಹಳ್ಳಿ-ಶೇ.77.17, ಕೊಟ್ಟೂರು- ಶೇ.71.50, ಹೊಸಪೇಟೆ-ಶೇ.49.54 ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಶೇ.69.27ರಷ್ಟು ಸಮೀಕ್ಷೆ ನಡೆದಿದೆ ಎಂದರು.ಇದೀಗ ಗಣತಿದಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಕೆಲ ಗ್ರಾಮಗಳು ಸಮೀಕ್ಷೆ ನಕ್ಷೆ (ಜಿಯೊ ಟ್ಯಾಗ್)ಯಿಂದ ದೂರ ಉಳಿದಿವೆ.ಗಡಿಭಾಗದ ಬೇರೆ ಜಿಲ್ಲೆಗಳ ವ್ಯಾಪ್ತಿಗೆ ಸೇರೆ​‍್ಡಯಾದ ಮಕರಬ್ಬಿ ಗ್ರಾಪಂ ವ್ಯಾಪ್ತಿಯ ಮಕರಬ್ಬಿ, ಬ್ಯಾಲ ಹುಣ್ಣಿ, ನಂದಿಗಾವಿ, ಕೋಟಿಹಾಳ್, ಚಿಕ್ಕಬನ್ಸಿಮಟ್ಟಿ, ನವಲಿ ಗ್ರಾಪಂ ವ್ಯಾಪ್ತಿಯ 63 ತಿಮ್ಲಾಪುರ ಗ್ರಾಮಗಳ ಸೇರೆ​‍್ಡ ಮಾಡಲು, ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳಿಗೆ, ಮಾಹಿತಿ ಸಲ್ಲಿಸಲಾ ಗಿದೆ. ಆದಷ್ಟು ಬೇಗ ಸೇರೆ​‍್ಡ ಮಾಡಿ ಸಮೀಕ್ಷೆ ಮಾಡ ಲಾಗುವುದು ಎಂದರು.ತಾಲೂಕಿನ ತುಂಗಭದ್ರ ನದಿ ತೀರದಲ್ಲಿ ಈಗಾಗಲೇ ಮರಳಿ ಸ್ಟಾಕ್ ಯಾರ್ಡ್ಗಳ ಟೆಂಡರ್ ಬಗ್ಗೆ ಪ್ರಕ್ರಿಯೆ ಸರ್ಕಾರ ಮಟ್ಟದಲ್ಲಿ ಇದ್ದು ಸದ್ಯದಲ್ಲೇ ಎಲ್ಲರಿಗೂ ಮರಳು ಸಿಗಲಿದೆ ಎಂದರು. ಪಟ್ಟಣದ ಸೋಗಿ ರಸ್ತೆ, ಹರಿಜನ ಕಾಲೋನಿ ಸೇರಿದಂತೆ 50ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ಡಿಸಿ, ಮನೆಯಲ್ಲಿದ್ದ ಮಹಿಳೆಯರಿಗೆ ಸಮೀಕ್ಷೆ ಕುರಿತು ಮಾಹಿತಿ ನೀಡುತ್ತಾ ಜಾಗೃತಿ ಮೂಡಿಸುವ ಕೆಲಸ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜಿ.ಸಂತೋಷ ಕುಮಾರ್, ಬಿಸಿಎಂ ವಿಸ್ತರಣಾ ಅಧಿಕಾರಿ ರಮೇಶ, ಸಿಡಿಪಿಒ ರಾಮನಗೌಡ, ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್, ಬಿಇಒ ಮಹೇಶ ಪೂಜಾರ್ ಸೇರಿ ಕಂದಾಯ, ಪುರಸಭೆ, ಪೊಲೀಸರು ಇದ್ದರು.