ಗೋಮಟೇಶ ವಿದ್ಯಾಪೀಠದಲ್ಲಿ ಸಂಜಯ ಪಾಟೀಲರಿಂದ ಧ್ವಜಾರೋಹಣ ಕಾರ‌್ಯಕ್ರಮ
ಬೆಳಗಾವಿ 26: ಸ್ಥಳೀಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಭಾರತದ 76 ನೇ ಗಣರಾಜ್ಯೋತ್ಸವವನ್ನು ವಿಜೃಂಭನೆಣೆಯಿಂದ ಆಚರಿಸಲಾಯಿತು. ಗೋಮಟೇಶ ವಿದ್ಯಾಪೀಠದ ಅಧಿಷ್ಠಾತಾ ಹಾಗೂ ಮಾಜಿ ಶಾಸಕರು ಆದ ಸಂಜಯ ಬಿ ಪಾಟೀಲ ಅವರು ರಾಷ್ಟೃಧ್ವಜಾರೋಹಣ ಕಾರ‌್ಯಕ್ರಮವನ್ನು ನೆರವೇರಿಸಿದರು ಹಾಗೂ ಭಾರತದ ಸಂವಿದಾನ ಶಿಲ್ಪಿ ಡಾ. ಬಿ. ಅರ್. ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು. ಕಾರ‌್ಯಕ್ರಮದ ಪ್ರಥಮದಲ್ಲಿ ಗೋಮಟೇಶ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಡಿ. ಎಸ್. ಹನಗಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕನ್ನಡ, ಮರಾಠಿ, ಹಾಗೂ ಆಂಗ್ಲಮಾಧ್ಯಮದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ದೇಶ ಭಕ್ತಿ ಕುರಿತು ಭಾಷಣಗಳನ್ನು ಮಾಡಿದರು. ಕಾರ‌್ಯಕ್ರಮದಲ್ಲಿ ವಿದ್ಯಾಪೀಠದ ಭಾರತ ಸೇವಾದಲ, ಭಾರತ ಸ್ಕೌಟ್ ಮತ್ತು ಗೈಡ ಘಟಕಗಳ ಕೆಡೆಟ್‌ಗಳು ಭಾಗವಹಿಸಿ ರಾಷ್ಟ್ರಧ್ವಜಕ್ಕೆ ವಂದನೆಯನ್ನು ಸಲ್ಲಿಸಿದರು. ಗೋಮಟೇಶ ವಿದ್ಯಾಪೀಠದ ಶಾಲಾ ಕಾಲೇಜುಗಳ ಪ್ರಾಂಶುಪಾಲರುಗಳಾದ ಸುನೀಲ ಬಿ ಪಾಟೀಲ, ಮಹೇಶ ಕಾರೇಕರ, ಸರೋಜಾ ಎಂ ಪಾಟೀಲ, ಬೈರು ಪಾಟೀಲ, ಹೆಜಲ್ ಪಿಲ್ಬರ್ಟ, ಮತ್ತಿತರರು ಉಪಸ್ಥಿತರಿದ್ದರು. ಗೋಮಟೇಶ ಮರಾಠಿ ಮಾಧ್ಯಮದ ಶಿಕ್ಷಕಿಯರಾದ ಸವಿತಾ ಹರೇಲ ಅವರು ಕಾರ‌್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.