ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ: ಶಾಸಕ ನಾಡಗೌಡ
First priority for construction of rural roads: MLA Nad Gowda
ತಾಳಿಕೋಟೆ 25: ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಯಿಂದ ರೈತರ ಬಾಳಿನಲ್ಲಿ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ. ಹಂತಹಂತವಾಗಿ ಮತಕ್ಷೇತ್ರದ ಎಲ್ಲೆಡೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ನಿಯಮಿತದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು. ಅವರು 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ತಾಳಿಕೋಟೆ ತಾಲ್ಲೂಕಿನ ವನಹಳ್ಳಿಯಿಂದ ಬಳಗಾನೂರವರೆಗಿನ (ಕೆನಾಲ್ ವರೆಗೆ ) ರೂ.3.41ಕೋಟಿ ಅನುದಾನದಲ್ಲಿ 3.81 ಕಿಮೀ ರಸ್ತೆ ಸುಧಾರಣೆ ಕಾಮಗಾರಿಗೆ ವನಹಳ್ಳಿ ಗ್ರಾಮದಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ಕಾಂಗ್ರೆಸ್ ಸರ್ಕಾರವು ರೈತ ಮತ್ತು ಮಹಿಳೆಯರ ಆರ್ಥಿಕ ಸಬಲತೆಯ ಗುರಿ ಹೊಂದಿರುವುದಾಗಿ ತಿಳಿಸಿದ ಅವರು ಪಂಚ್ ಗ್ಯಾರಂಟಿ ಯೋಜನೆಗಳಿಂದಾಗಿ ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ.
ವಿರೋಧ ಪಕ್ಷದವರು ವಿನಾಕಾರಣ ಇದನ್ನು ವಿರೋಧಿಸುತ್ತಿದ್ದಾರೆ ಅವರಲ್ಲಿ ಹೆಚ್ಚಿನ ಜನರು ಈ ಯೋಜನೆಯಿಂದ ಲಾಭ ಪಡೆದುಕೊಳ್ಳುತ್ತಿದ್ದಾರೆ ಅದನ್ನು ಅವರು ಬಿಟ್ಟು ನೋಡಲಿ ಎಂದರು. ಮತಕ್ಷೇತ್ರದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ 18 ಸಾವಿರ ಮನೆಗಳು ಕೊಟ್ಟಿದ್ದೇವೆ. ಆದರೂ ಮನೆಗಳು ಬೇಕು ಎಂಬ ಬೇಡಿಕೆ ಇದೆ. ಪಿಎಂಜಿಎಸ್ವೈನಡಿ 31 ಕಿ.ಮೀ ರಸ್ತೆ ನಿರ್ಮಾಣ ನಡೆಯುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ಪಿಡಿಬ್ಲ್ಯುಡಿ, ಒಂದು ಕೋಟಿ ಶಾಲಾ ದುರಸ್ತಿ ಗೆ ನೀಡಲಾಗಿದೆ. ಸಮುದಾಯ ಭವನ ಗಳಿಗೆ 4.50 ಕೋಟಿ ನೀಡಿದ್ದೇನೆ. ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ. ನೀಡಿದ್ದು ಕೆಲಸಗಳು ಶೀಘ್ರದಲ್ಲಿ ಚಾಲನೆಗೊಳ್ಳಲಿವೆ ಎಂದ ಅವರು ಮುಂದೆಯೂ ಉಳಿದಿರುವ ಕೆಲಸಗಳನ್ನು ಮಾಡಿಕೊಡಲು ನಾನು ಬದ್ಧನಾಗಿರುವೆ ಆದರೆ ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು. ಕೆ.ಎಸ್.ಡಿ.ಎಲ್ ಗೆ ಅಧ್ಯಕ್ಷನಾದಾಗ ಸಂಸ್ಥೆ ಹಾನಿಯಲ್ಲಿತ್ತು ಅದನ್ನು 415 ಕೋಟಿ ಲಾಭ ಬರುವಂತೆ ಮಾಡಿದ್ದೇನೆ ಈ ವರ್ಷವೂ ಐದು ಕೋಟಿ ಲಾಭ ವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ವನಹಳ್ಳಿ ಗ್ರಾಮಸ್ಥರಿಂದ ಶಾಸಕ ಅಪ್ಪಾಜಿ ನಾಡಗೌಡರಿಗೆ ವಿಶೇಷ ಸನ್ಮಾನ ನೀಡಲಾಯಿತು.ಈ ಸಂದರ್ಭದಲ್ಲಿ ಪಿಎಂಜಿಎಸ್ ವೈ ಎಇಇ ಜ್ಞಾನೇಶ ಮುರಾಳ, ಬಾವೂರ ಗ್ರಾ.ಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ ಪ್ರಮುಖರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ, ಬಸನಗೌಡ ಬಸರಕೋಡ, ಸಂಗನಗೌಡ ಬಿರಾದಾರ, ಬಸಯ್ಯ ಹಿರೇಮಠ, ಅಯ್ಯನಗೌಡ ನಾಡಗೌಡ, ಅಯ್ಯನಗೌಡ ನಾಡಗೌಡ, ಪರಮಣ್ಣ ಬಡಿಗೇರ, ಶಾಂತಕುಮಾರ ಚಟ್ಟೇರ, ಶೇಖರಯ್ಯ ಹಿರೇಮಠ, ಹನಮಂತ್ರಾಯ ತಿಳಗೂಳ ಇತರರಿದ್ದರು. ಬಸವರಾಜ ಹೊಸಮನಿ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 