ಪ್ರಥಮ ಪಿಯುಸಿ ವಿದ್ಯಾಥರ್ಿಗಳ ಸ್ವಾಗತ ಕಾರ್ಯಕ್ರಮ: ಕಾಲೇಜು ಹಂತವು ವಿದ್ಯಾಥರ್ಿಗಳ ಸಮಗ್ರ ಬೆಳವಣಿಗೆ ಕಾಲ

ರಾಮದುರ್ಗ 31:  ಕಾಲೇಜು ಹಂತದಲ್ಲಿ ವಿದ್ಯಾಥರ್ಿಗಳು ಮಾನಸಿಕವಾಗಿ, ದೈಹಿಕವಾಗಿ, ಬೌದ್ಧಿಕವಾಗಿ ಆರೋಗ್ಯವಂತರಾಗಿದ್ದರೆ ಅವರಿಂದ ಉತ್ತಮ ಫಲಿತಾಂಶ ನೀರೀಕ್ಷಿಸಲು ಸಾಧ್ಯ  ಈ ಹಂತವು ವಿದ್ಯಾಥರ್ಿಗಳ ಸಮಗ್ರ ಬೆಳವಣಿಗೆ ಕಾಲ. ಈ ಸಮಯದಲ್ಲಿ ಪಾಲಕರು ಹಾಗೂ ಶಿಕ್ಷಕರು ಓದು, ಬರವಣಿಗೆ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಬೆಳಗಾವಿಯ ಆರ್.ಎಲ್.ಎಸ್ ಕಾಲೇಜಿನ ನಿವೃತ್ತ ಗಣಿತ ಉಪನ್ಯಾಸಕ ಬಿ. ಎಂ. ಬೆಳಗಲಿ ಹೇಳಿದರು.

ಅವರು ತಾಲೂಕಿನ ಚಂದರಗಿಯ ಕ್ರೀಡಾ ವಸತಿ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾಥರ್ಿಗಳ ಸ್ವಾಗತ ಹಾಗೂ 2019-20ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ  ಉದ್ದೇಶಿಸಿ ಮಾತನಾಡುತ್ತಾ ಚೆನ್ನಾಗಿ ಯೋಜನೆ ಮಾಡಿ ಅದಕ್ಕೆ ತಕ್ಕಂತೆ ಪ್ರಯತ್ನ ಮಾಡದಿದ್ದರೆ ಪ್ರತಿಫಲ ದೊರೆಯುವುದಿಲ್ಲ. ನಮ್ಮಲ್ಲಿರುವ ಸಮಸ್ಯೆಗಳನ್ನು ಸತತ ಅಭ್ಯಾಸ, ಶಿಸ್ತು, ಒಳ್ಳೆ ನಡತೆ, ಉತ್ತಮ ಸ್ವಭಾವ ಹಾಗೂ ಉತ್ತಮ ಮೌಲ್ಯಗಳ ಮೂಲಕ ಮೆಟ್ಟಿ ನಿಂತಾಗ ಯಶಸ್ಸು ಸಾಧಿಸುತ್ತೇವೆ ಎಂದರು. ಮುಗ್ಧರಾಗಿರುವ ವಿದ್ಯಾಥರ್ಿಗಳು ಸುಳ್ಳು, ಮೋಸ, ವಂಚನೆ ಇವುಗಳನ್ನು ಸಹವಾಸದಿಂದ ಕಲಿಯುತ್ತಾರೆ ಎಂದು ಉದಾಹರಣೆ ಮೂಲಕ ವಿವರಿಸಿದರು. ಈ ಕಾಲೇಜಿನ ವಿದ್ಯಾಥರ್ಿಗಳು ಉತ್ತಮ ವ್ಯಾಸಂಗ ಮಾಡಿ ಸಂಸ್ಥೆಯ ಕೀತರ್ಿಯನ್ನು ಹೆಚ್ಚಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಸತ್ಕಾರ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಆರ್ ಪಾಟೀಲ ವಹಿಸಿಕೊಂಡಿದ್ದರು, ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಯಾದವಾಡ, ನಿದರ್ೇಶಕರಾದ ಆರ್. ಎ. ಪಾಟೀಲ, ಎಂ. ಎಸ್. ಮನೋಳಿ, ಎಸ್. ಆರ್. ನವರಕ್ಕಿ, ಎಸ್. ಜಿ. ಮಡಿವಾಳರ(ದೇಸಾಯಿ), ಎಸ್. ಪಿ. ಮನೋಳಿ ಹಾಗೂ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ತರಬೇತುದಾರರು, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ಪ್ರಾಚಾರ್ಯರಾದ ಎ.ಎನ್.ಮೋದಗಿ ಪ್ರಾಸ್ಥಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು,  ಕಾಲೇಜು ವಿಭಾಗದ ಪ್ರಾಚಾರ್ಯರಾದ ವಿ. ಟಿ. ಪಾಟೀಲ ಕಾಲೇಜಿನ ವಾಷರ್ಿಕ ಕಾರ್ಯಕ್ರಮದ ವರದಿಯನ್ನು ಕುರಿತು ಮಾತನಾಡಿದರು. ಶಿಕ್ಷಕರಾದ ಐ ಜಿ ಅಂಕಲಿ ನಿರೂಪಿಸಿದರು, ಆರ್. ವಿ. ಗಿರಿಯನ್ನವರ ವಂದಿಸಿದರು.