ಶಿಕ್ಷಣ ಇಲಾಖೆಯ ಕಡತ ಯಜ್ಞ ಯಶಸ್ವಿ

ಧಾರವಾಡ, 26: ವಾಯವ್ಯ ಕನರ್ಾಟಕ ವಲಯದ ಬೆಳಗಾವಿ ವಿಭಾಗದ ಎಲ್ಲ 9 ಜಿಲ್ಲೆಗಳಲ್ಲಿ ರವಿವಾರ ರಜಾ ದಿನದಂದು ಜರುಗಿದ ಶಿಕ್ಷಣ ಇಲಾಖೆಯ ಕಡತ ಯಜ್ಞ ಎಲ್ಲೆಡೆ ಯಶಸ್ವಿಯಾಗಿ ಜರುಗಿದ ವರದಿಯಾಗಿದೆ. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಶನಿವಾರ ನೀಡಿದ್ದ ಆದೇಶದಂತೆ ಎಲ್ಲ ಜಿಲ್ಲೆಗಳ ಡಿಡಿಪಿಐ ಹಾಗೂ ಡಯಟ್ ಕಛೇರಿಗಳು, 59 ತಾಲೂಕುಗಳ ಬಿಇಓ ಕಛೇರಿಗಳು, ವಿಭಾಗದ ವ್ಯಾಪ್ತಿಯ ಜಮಖಂಡಿ ಹಾಗೂ ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ), ಸಿಸ್ಲೆಪ್ ಹಾಗೂ ಇತರೇ ಅಧೀನ ಕಛೇರಿಗಳು ರವಿವಾರ ಪೂರ್ಣದಿನ ಕಾರ್ಯನಿರ್ವಹಿಸಿ ಕಛೇರಿಗಳಲ್ಲಿರಬಹುದಾದ ಬಾಕಿ ಕಡತಗಳನ್ನು ಪರಿಶೀಲಿಸಿ ಇಲಾಖೆಯ ನಿಯಮಗಳಡಿಯಲ್ಲಿ ಅವುಗಳ ವಿಲೇವಾರಿಗಾಗಿ ಕ್ರಮಕೈಕೊಳ್ಳಲಾಯಿತು.  

ಪ್ರತೀ ಜಿಲ್ಲೆಯ ಆಡಳಿತ ಹಾಗೂ ಅಭಿವೃದ್ಧಿ ಉಪನಿದರ್ೆಶಕರು, ಪ್ರತೀ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರೇ ಇಲಾಖಾ ಅಧಿಕಾರಿಗಳು, ಎಲ್ಲ ಕಛೇರಿಗಳ ಪತ್ರಾಂಕಿತ ವ್ಯವಸ್ಥಾಪಕರು ಅಧೀಕ್ಷಕರೂ ಸೇರಿದಂತೆ ಸಮಸ್ತ ಲಿಪಿಕ ನೌಕರರು ಕಛೇರಿಗಳಲ್ಲಿದ್ದು, ಕಡತ ಯಜ್ಞದಲ್ಲಿ ಸಕ್ರೀಯವಾಗಿದ್ದರು. 

     ವಿಶೇಷವಾಗಿ ವಿಭಾಗದ ಎಲ್ಲ ತಾಲೂಕುಗಳ ಬಿಇಓ ಕಛೇರಿಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರ ವೇತನ ಬಡ್ತಿ, ಎಚ್.ಆರ್.ಎಂ.ಎಸ್., ಕಾಲಮಿತಿ ಬಡ್ತಿ, ಸ್ವಯಂಚಾಲಿತ ಬಡ್ತಿ, ವಿಶೇಷ ಬಡ್ತಿ, ವೇತನ ಪರಿಷ್ಕರಣೆ ಕುರಿತಂತೆ ಕಡತಗಳ ಮತ್ತು ಸೇವಾ ಪುಸ್ತಕದ ದಾಖಲೆಗಳ ಪರಿಶೀಲನೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ವರದಿಯಾಗಿದೆ. 

ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಸಂದಶರ್ಿಸಿ ತರಗತಿ ವೀಕ್ಷಣೆ ಮಾಡಿ ಇಲಾಖೆಯ ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಭಾಗದ ಸುಮಾರು 12 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ 'ಹಸಿರು ಸ್ವಾತಂತ್ರ್ಯೋತ್ಸವ' ಆಚರಣೆಗೆ ಕರೆ ನೀಡಿ ಎಲ್ಲೆಡೆ ಶಾಲಾ ಅಂಗಳದಲ್ಲಿ ಗಿಡನೆಡಲು ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು