ಹಾರೂಗೇರಿ,11: ಬೆಳಗಾವಿ ಜಿಲ್ಲೆಯಲ್ಲಿ ಶಿಕ್ಷಣಿಕ, ಆಥರ್ಿಕ, ಉದ್ಯೋಗ, ಧಾಮರ್ಿಕ ಹಾಗೂ ಯಾವುದೇ ಕೋಮು ಗಲಭೆಯಿಲ್ಲದೆ ಎಲ್ಲಾ ಎಲ್ಲರು ಮನೋಭಾವನೆ ಹೊಂದಿದ ಸಂಸ್ಕೃತಿ ಹೀಗೆ ಎಲ್ಲಾ ದೃಷ್ಠಿಯಿಂದ ನೋಡಿದರೂ ನಮ್ಮ ಜಿಲ್ಲೆಯಲ್ಲಿ ಹಾರೂಗೇರಿ ಪಟ್ಟಣ ಪ್ರಥಮವಾಗಿ ಮುಂದೆ ಇದೆ. ಕಳೆದ 15 ವರ್ಷಗಳ ಹಿಂದೆ ಹಾರೂಗೇರಿ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕಿತ್ತು. ಅದು ಆ ಸಂದರ್ಭದಲ್ಲಿ ಯಾಕೆ ಯಾವ ಕಾರಣಕ್ಕಾಗಿ ತಾಲೂಕಾ ಘೋಷಣೆ ಮಾಡುವುದು ಹಿಂದೆ ಉಳಿದಿರುವುದು ಸ್ವಷ್ಟಪಡಿಸುವುದು ಈ ಬೇಡಿಸುವುದು ಅದರ ಅವಶ್ಯಕತೆ ಇಲ್ಲ. ರಾಜಕೀಯ ಹಿತಾಶಕ್ತಿಯಿಂದ ಚಿಕ್ಕೋಡಿ ಜಿಲ್ಲೆ ಹಾಗೂ ಹಾರೂಗೇರಿ ತಾಲೂಕಾ ಕೇಂದ್ರ ಘೋಷಣೆ ಮಾಡದೇ ಇರುವುದರಿಂದ ಈ ಭಾಗದ ಜನ ಉಗ್ರವಾಗಿ ಹೋರಾಟಕ್ಕೆ ಮುಂದೆ ಬಂದು ಜಿಲ್ಲೆ ಮತ್ತು ತಾಲೂಕೂ ಘೋಷಣೆೆ ಮಾಡದಿದ್ದರೆ ವಿಷಸೇವನೆ ಮಾಡುವುದಾಗಿ ಸರಕಾರಕ್ಕೆ ದತ್ತು ಹಕ್ಯಾಗೋಳ ಎಚ್ಚರಿಕೆಯನ್ನು ನೀಡಿದ್ದಾರೆ.
ಅವರು ಹಾರೂಗೇರಿ ಪಟ್ಟಣದಲ್ಲಿ ಇಂದು ನಡೆಸುತ್ತಿರುವ ಚಿಕ್ಕೋಡಿ ಜಿಲ್ಲೆ ಹಾಗೂ ಹಾರೂಗೇರಿ ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ರಾಜ್ಯ ಹೆದ್ದಾರಿ 31 ಜತ್ತ ಜಾಂಬೋಟಿ ಬಂದ ಕರೆ ನೀಡಿ ರಸ್ತೆಯ ಮೇಲೆ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಬೆಂಬಲ ನೀಡಿ ಮಾತನಾಡುತ್ತಾ ರಾಜ್ಯದಲ್ಲಿ ಮೂರು ಸಣ್ಣ ಸಣ್ಣ ಹಳ್ಳಿಗಳಿಗೆ ತಾಲೂಕೂ ಕೇಂದ್ರವನ್ನಾಗಿ ಸರಕಾರಗಳು ಘೋಷಣೆ ಮಾಡಿದ್ದಾರೆ. ಆದರೆ ಈ ಭಾಗದಲ್ಲಿ ಸುಮಾರು 20 ಹಳ್ಳಿಗಳಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಹಾರೂಗೇರಿ ತಾಲೂಕಾ ಕೇಂದ್ರ ಮತ್ತು ಚಿಕ್ಕೋಡಿ ಜಿಲ್ಲೆಯನ್ನಾಗಿ ಈ ಚಳಿಗಾಲ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿಗಳು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಪಟ್ಟಣದಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು, ಖಾಸಗಿ ಆಸ್ಪತ್ರೆ ಹಾಗೂ ಔಷಧಿ ಅಂಗಡಿ, ಬಸ್ ಸಂಚಾರಗಳು ಮತ್ತು ಶಾಲಾ ಕಾಲೇಜ ರಜೆ ನೀಡಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ರಾಜ್ಯ ಹೆದ್ದಾರಿ ಜತ್ತ ಜಾಂಬೋಟಿ, ರಾಯಬಾಗ ಅಥಣಿ ರಸ್ತೆಯನ್ನು ಸಂಪೂರ್ಣವಾಗಿ ಬಂದ ಮಾಡಿ ರಸ್ತೆಯ ಮೇಲೆ ಉಪಹಾರ ಸೇವಿಸಿ ಉಗ್ರವಾಗಿ ಬಿಸಿಲು ಲೆಕ್ಕಿಸದೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ಮನವಿ ಪಡೆದುಕೊಂಡ ಉಪತಹಶೀಲ್ದಾರ: ಸಾಯಂಕಾಲ ಕುಡಚಿ ಉಪತಹಶೀಲ್ದಾರ ಪರಮಾನಂದ ಮಂಗಸೂಳಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅವರುಗಳ ಮುಂದೆ ಪ್ರತಿಭಟನಾಕಾರರು ಉಪತಹಶೀಲ್ದಾರ ಮೂಲಕ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ, ಚಿಕ್ಕೋಡಿ ಜಿಲ್ಲೆ ಹಾಗೂ ಹಾರೂಗೇರಿ ತಾಲೂಕಾ ಕೇಂದ್ರ ಘೋಷಣೆ ಮಾಡಬೇಕೆಂದು ಅವರ ಮೂಲಕ ಮನವಿಯನ್ನು ಪಡೆದುಕೊಂಡು ಹೋರಾಟಗಾರರು ನೀಡಿರುವ ಮನವಿಯನ್ನು ಈ ತಕ್ಷಣ ಜಿಲ್ಲಾಧಿಕಾರಿಗಳ ಮೂಲಕವಾಗಿ ಸರಕಾರಕ್ಕೆ ಕಳಿಸಿಕೊಡುವುದಾಗಿ ಉಪತಹಶೀಲ್ದಾರ ಮಂಗಸೂಳಿ ಹೇಳಿದರು.
ವಿವರ: ಹಾರೂಗೇರಿ ಪಟ್ಟಣವು ಭೌಗೋಳಿಕವಾಗಿ ಸುಮಾರು 6 ಕೀ.ಮೀಟರ ವ್ಯಾಪ್ತಿಯನ್ನು ಹೊಂದಿದ್ದು ಇಲ್ಲಿ ಘಟಪ್ರಭಾ ನದಿಯಿಂದ ಸುಮಾರು 8 ತಿಂಗಳ ಕಾಲುವೆ ನೀರು ಹರಿಯುವದರಿಂದ ಈ ಭಾಗದ ನಾಗರಿಕರಿಗೆ ನೀರಿನ ತೊಂದರೆ ಇಲ್ಲದಂತಾಗಿದೆ. ಗ್ರಾಮೀಣ ಭಾಗದ ರೈತರು ಕಬ್ಬು, ಅರಿಸಿನ, ಗೋವಿನ ಜೋಳ, ಸೋಯಾಬಿನ ಬೆಳೆ ಬೆಳೆಯುವದರಿಂದ ತಾಲೂಕಿನಲ್ಲಿಯೇ ಖ್ಯಾತಿ ಹೊಂದಿರುವಂತಹ ಅತಿ ದೊಡ್ಡ ಶ್ರೀಮಂತ ಪಟ್ಟಣವಾಗಿದೆ ಇದಕ್ಕೆ ಗ್ರಾಮದ ಆರಾಧ್ಯ ದೈವವಾದ ದೇವರ ಕೊಂಡಪ್ಪನವರ ( ಚನ್ನವೃಷಭೇಂದ್ರ ಮಹಾ ಸ್ವಾಮಿಗಳ) ಕೃಪಾ ಕಟಾಕ್ಷ ಇರುತ್ತದೆ.
ಈ ಒಂದು ಪಟ್ಟಣದಲ್ಲಿ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಎಷ್ಟು ಇವೆ ಎಂದರೆ ತಾವುಗಳು ಆಶ್ಚರ್ಯ ಪಡುವಂತಾಗಿದೆ. ಕಿರಿಯ ಪ್ರಾಥಮಿಕ ಶಾಲೆ 6, ಹಿರಿಯ ಪ್ರಾಥಮಿಕ ಶಾಲೆಗಳು-22, ಪ್ರೌಢ ಶಾಲೆಗಳು-17,ಸಿ.ಬಿ.ಎಸ್.ಈ 3 ಶಾಲೆ, ಪಿ.ಯು.ಸಿ. ಕಾಲೇಜಗಳು-7, ಪದವಿ ಮಹಾವಿದ್ಯಾಲಯಗಳು-3, ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜುಗಳು-4, ಪ್ರೌಢಶಾಲೆ ಶಿಕ್ಷಕರ ತರಬೇತಿ ಕಾಲೇಜುಗಳು-2, ಬಿ.ಎಸ್.ಡಬ್ಲೂ, ಬಿ.ಪಿ.ಎಡ್, ಪಿ.ಎಚ್.ಡಿ, ಎಂ.ಪಿಲ್, ಇವು ತಲಾ ಒಂದರಂತಿವೆ. ಹಾಗೂ ಬಿ.ಬಿ.ಎ-2, ಬಿ.ಸಿ.ಎ-2, ಆಯ್.ಟಿ.ಆಯ್-3, ಪಟ್ಟಣದಲ್ಲಿ ಬಿ.ಎ.ಎಮ್.ಎಸ್. ಆಯರ್ುವೇದಿಕ ಮೇಡಿಕಲ್ ಕಾಲೇಜು, ನಸರ್ಿಂಗ್ ಕಾಲೇಜು, ಡಿ.ಎಮ್.ಎಲ್.ಟಿ ಕಾಲೇಜು ಇರುತ್ತದೆ. ಇಲ್ಲಿ ಒಟ್ಟು ಈ ಗ್ರಾಮದಲ್ಲಿ 73 ಶಿಕ್ಷಣ ಕೇಂದ್ರಗಳಿವೆ. ಒಟ್ಟು ಪಟ್ಟಣಕ್ಕೆ ಸುಮಾರು 20 ಸಾವಿರ ವಿದ್ಯಾಥರ್ಿಗಳು ಹಾರೂಗೇರಿ ಪಟ್ಟಣಕ್ಕೆ ಕಡೆಗೆ ಮುಖಮಾಡುತ್ತಾರೆ.
ಈ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಾದ ಹಿಡಕಲ್, ಮುಗಳಖೋಡ, ಹಂದಿಗುಂದ, ಫಾಲಬಾವಿ, ಸುಲ್ತಾನಪೂರ, ಖನದಾಳ, ಸವಸುದ್ದಿ, ಇಟ್ನಾಳ, ಬಸ್ತವಾಡ, ಅಳಗವಾಡಿ, ನಿಡಗುಂದಿ, ಬೊಮ್ಮನಾಳ, ಮೊರಬ, ಆಲಖನೂರ, ನಿಲಜಿ, ಬ್ಯಾಕೂಡ, ಚಿಂಚಲಿ, ಸುಟ್ಟಟ್ಟಿ, ಯಲ್ಪಾರಟ್ಟಿ, ಪರಮಾನಂದವಾಡಿ, ಸಿದ್ದಾಪೂರ, ತೀರ್ಥ, ಸಪ್ತಸಾಗರ, ನಂದಿಇಂಗಳಗಾಂವ, ದರೂರ, ಸಂಕ್ರಟ್ಟಿ, ಕೋಳಿಗುಡ್ಡ, ಹಾ-ಕ್ರಾಸ್ ಮತ್ತು ಯಬರಟ್ಟಿ ಹಾಗೂ ಪರ ತಾಲೂಕಿನ ಊರುಗಳಿಂದ ಸಾವಿರಾರು ವಿದ್ಯಾಥರ್ಿಗಳು ವಿದ್ಯಾಭ್ಯಾಸಕ್ಕಾಗಿ ದಿನಂಪ್ರತಿ ಹಾರೂಗೇರಿಯತ್ತ ಹೆಜ್ಜೆ ಹಾಕುತ್ತಾರೆ.
ಅಲ್ಲದೇ ಒಂದು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯುತ್ ಇಲಾಖೆ, ನೀರಾವರಿ ಇಲಾಖೆ, ಪಶುಆಸ್ಪತ್ರೆ, ಗ್ರಾಮಲೆಕ್ಕಾಧಿಕಾರಿ ಕಾಯರ್ಾಲಯ, ಪುರಸಭೆ ಕಾಯರ್ಾಲಯ, ಪೊಲೀಸ್ ಠಾಣೆ, ಉಪ ಕೃಷಿ ಮಾರುಕಟ್ಟೆ, ಎರಡು ಚಿತ್ರ ಮಂದಿರಗಳು, 5 ಪೇಟ್ರೋಲ್ ಪಂಪ್, 3 ಸರಕಾರಿ ವಸತಿ ನಿಲಯ, 8 ಖಾಸಗಿ ವಸತಿ ನಿಲಯ, 50 ಹೆಚ್ಚು ಅಂಗನವಾಡಿ ಕೇಂದ್ರಗಳು, 15 ಹೆಚ್ಚು ಪ್ರಮುಖ ದೇವಸ್ಥಾನಗಳು, ಇಂಡಿಯನ್ ಗ್ಯಾಸ್ ಕಾಯರ್ಾಲಯ, ಸಿಮೆಂಟ್ ಮಾರಾಟ ಮಳಿಗೆಗಳು, ಇಷ್ಟೆಲ್ಲಾ ಸೌಲಭ್ಯ ಹೊಂದಿರುವ ಈ ಪಟ್ಟಣ ಸಧ್ಯ ಕುಡಚಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದು ಅಂದಾಜು 1.46 ಲಕ್ಷ ಮತದಾರರನ್ನು ಹೊಂದಿದ್ದು ಈ ಹಾರೂಗೇರಿ ಪಟ್ಟಣ ಸಮಿಪದ 20 ಕೀ.ಮೀ. ವ್ಯಾಪ್ತಿಯಲ್ಲಿ ಬರುವ 30 ಗ್ರಾಮ ಪಂಚಾಯತದವರು ಹಾರೂಗೇರಿ ತಾಲೂಕಾ ಕೇಂದ್ರವಾಗಲಿಕ್ಕೆ ಠರಾವ ಪಾಸ ಮಾಡಿ ಸರಕಾರಕ್ಕೆ ಕಳಿಸಿದರು. ಮತ್ತು ಬಿ.ಆರ್. ದರೂರ ನೇತ್ರತ್ವದಲ್ಲಿ ಸಮಿತಿಯನ್ನು ರಚಿಸಿ ಅವಿರತವಾಗಿ ಸುಮಾರು 15 ವರ್ಷಗಳಿಂದ ಹೋರಾಟ ನಡೆಸಿದ್ದಕ್ಕೆ ಹುಂಡೆಕರ ಆಯೋಗ ಸಮೀತಿಯವರು ಹಾರೂಗೇರಿಯನ್ನು ತಾಲೂಕಾ ಕೇಂದ್ರ ಮಾಡುವುದಕ್ಕೆ ಶಿಫಾರಸ್ಸು ಮಾಡಿದರೂ ಸಹ ಜನಪ್ರತಿನಿಧಿಗಳ ಇಚ್ಛೆ ಕೊರತೆಯಾಗಿದೆ.
ಅದು ಏನೆಯಾಗಲಿ ಎಲ್ಲಾ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ಹಾಗೂ ಹಾರೂಗೇರಿ ಪಟ್ಟಣವು ತಾಲೂಕಾ ಕೇಂದ್ರವಾಗಿ ಸರಕಾರ ಘೋಷಣೆ ಮಾಡಬೇಕೆಂದು ಹಾರೂಗೇರಿ ತಾಲೂಕಾ ಹೋರಾಟ ಸಮೀತಿಯರು ಉಗ್ರವಾಗಿ ಪ್ರತಿಭಟನೆ ನಡೆಸಿ ಹಾರೂಗೇರಿ ತಾಲೂಕು ಘೋಷಿಸಬೇಕೆಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಾರೂಗೇರಿ ತಾಲೂಕಾ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನಾಕಾರರಿಗೆ ಹಾರೂಗೇರಿ, ಅಥಣಿ, ರಾಯಬಾಗ, ಕಾಗವಾಡ ಪೋಲಿಸ್ ಸೂಕ್ತವಾದ ಬಂದೋಬಸ್ತಿಯನ್ನು ಕೈಗೊಂಡಿದ್ದರು.