ಈರುಳ್ಳಿ ಹಾಗೂ ಗೋವಿನ ಜೋಳ ಬೆಳೆಯ ಕ್ಷೇತ್ರೋತ್ಸವ

ಈರುಳ್ಳಿ ಹಾಗೂ ಗೋವಿನ ಜೋಳ ಬೆಳೆಯ ಕ್ಷೇತ್ರೋತ್ಸವ Field festival of onion and cowpea crops

                  ಗದಗ 22 : ಐ.ಸಿ.ಎ.ಆರ್ ಹಿ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ವತಿಯಿಂದ, 2025-26 ನೇ ಸಾಲಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿ, ಗದಗ ತಾಲೂಕಿನ ನಾಗಾವಿ ಗ್ರಾಮದ          ಗೋವಿಂದರಡ್ಡಿ ಭರಚಿಮಗೌಡ್ರ ಇವರ ಹೊಲದಲ್ಲಿ ಇತ್ತೀಚಿಗೆ “ಭೀಮಾ ಸೂಪರ” ಎಂಬ ಈರುಳ್ಳಿ ತಳಿಯ ಕ್ಷೇತ್ರೋತ್ಸವವನ್ನು ಏರಿ​‍್ಡಸಲಾಯಿತು.  

               ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಾಗಾವಿ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರಾದ ಉಳವಪ್ಪ ಬಸಪ್ಪ ಸಿಗ್ಲಿ ಯವರು ಭಾಗವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ   ಹಜರೆಸಾಬ ನದಾಫ ಭಾಗವಹಿಸಿದ್ದರು.  

            ಪ್ರಾತ್ಯಕ್ಷಿಕೆಯಲ್ಲಿ ತೆಗೆದುಕೊಂಡ 5 ಜನ ರೈತರು ಭೀಮಾ ಸೂಪರ ತಳಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ, ಈ ತಳಿಯ ಗಡ್ಡೆಗಳು ಒಂದೇ ಆಕಾರದಲ್ಲಿ ಇದ್ದು, ಉತ್ತಮ ಗಾತ್ರದ ಗುಣಮಟ್ಟದ ಆಕರ್ಷಕ ಬಣ್ಣವನ್ನು ಹೊಂದಿದ್ದು ಸ್ಥಳೀಯ ತಳಿಗಳಿಗಿಂತ ಒಳ್ಳೆಯ ಧಾರಣೆಯನ್ನು ಪಡೆಯಬಹುದು ಮತ್ತು ಹಿಂಗಾರು ಹಂಗಾಮಿನಲ್ಲಿ ಈ ತಳಿಯ ಬೀಜೋತ್ಪಾದನೆ ಮಾಡುವುದಾಗಿ ತಿಳಿಸಿದರು.

              ಕೆವಿಕೆಯ ತೋಟಗಾರಿಕೆ ವಿಜ್ಞಾನಿಯಾದ ಹೇಮಾವತಿ ಹಿರೇಗೌಡರ ಮಾತನಾಡಿ ಭೀಮಾ ಸೂಪರ ತಳಿಯು ಸುಧಾರಿತ ಈರುಳ್ಳಿ ತಳಿಯಾಗಿದ್ದು, ಇದು ಈರುಳ್ಳಿ ಮತ್ತು ಬಳ್ಳೊಳ್ಳಿ ನಿರ್ದೇಶನಾಲಯ, ಪುಣೆ ಇಂದ ಬಿಡುಗಡೆಯಾಗಿದ್ದು, ಎಲೆಗಳಿಗೆ ಬರುವ ನೇರಳೆ ಚುಕ್ಕೆ ರೋಗವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ನೀರಾವರಿಯಲ್ಲಿ ಪ್ರತಿ ಎಕರೆಗೆ 190 ಕ್ವಿಂಟಾಲ್ ನಷ್ಟು ಇಳುವರಿ ಕೊಡುವ ಸಾಮರ್ಥ್ಯ ಇದೆ ಎಂದು ತಿಳಿಸಿದರು. ಜೊತೆಗೆ ಕೆವಿಕೆಯ ಮಣ್ಣು ವಿಜ್ಞಾನಿಗಳಾದ ಎನ್‌. ಎಚ್‌. ಭಂಡಿ, ಇವರು ಈರುಳ್ಳಿ ಬೆಳೆಗೆ ಜಿಪ್ಸಂ ಹಾಕುವುದರಿಂದ ಗಡ್ಡೆಗಳು ಕೊಳೆಯುವುದಿಲ್ಲ, ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮತ್ತು ಐ.ಐ.ಎಚ್‌.ಆರ್‌. ಬೆಂಗಳೂರಿನಿಂದ ಬಿಡುಗಡೆಯಾದ ತರಕಾರಿ ಸ್ಪೇಷಲ್ (ಲಘು ಪೋಷಕಾಂಶಗಳ ಮಿಶ್ರಣ) ಸಿಂಪರಣೆ ಮಾಡುವುದರಿಂದ ಅಧಿಕ ಇಳುವರಿ ಹಾಗೂ ಗುಣಮಟ್ಟದ ಗಡ್ಡೆಗಳನ್ನು ಪಡೆಯಬಹುದು ಎಂದು ನೆರೆದಿರುವ ರೈತರಿಗೆ ತಿಳಿಸಿದರು. 

                ಎಸ್‌.ಕೆ.ಮುದ್ಲಾಪುರ್, ನಿವೃತ್ತ. ವಿಷಯ ತಜ್ಞರು (ಸಸ್ಯ ಸಂರಕ್ಷಣೆ)  ಈರುಳ್ಳಿ ಬೆಳೆಗೆ ಬರುವ ಪ್ರಮುಖ ಕೀಟ ಮತ್ತು ರೋಗಗಳ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ರಾಜೇಶ್ವರಿ ಚಿನಿವಾರ, ಕೃಷಿ ಅಧಿಕಾರಿಗಳು, ರೈತರಿಗಾಗಿ ಕೃಷಿ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಕುರಿತು ವಿವಿರಿಸಿದರು.     

              ಪ್ರಾತ್ಯಕ್ಷಿಕೆ ತಾಕುಗಳಿಗೆ ರೈತರ ಭೆಟ್ಟಿಯನ್ನು ಏರಿ​‍್ಡಸಿ ಪ್ರಾತ್ಯಕ್ಷಿಕೆಗಳ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಗೋವಿಂದಗೌಡ ಭರಮಗೌಡರ ಹಾಗೂ ಗ್ರಾಮದ ಇತರೆ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಅಲ್ಲದೇ      39 ಜನ ದೇಸಿ ಶಿಭಿರಾರ್ಥಿಗಳು ಸೇರಿದಂತೆ ಒಟ್ಟು ಸುಮಾರು 60 ಜನ ಈ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.