ಸ್ತ್ರೀ-ಪುರುಷರು ಸಮಾನರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು: ಕರಿಯಣ್ಣನವರ

ಹಾವೇರಿ13: ಸ್ತ್ರೀ-ಪುರುಷರು ಸಮಾನರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಯಾವ ಮನೆಯಲ್ಲಿ ಹೆಣ್ಣು ಸುಖದಿಂದ ಇರುತ್ತಾಳೋ ಅಲಿ ಸುಖ, ಸಮೃದ್ಧಿ ತುಂಬಿರುತ್ತದೆ, ಹೆಣ್ಣನ್ನು ಹಿಂಸಿಸುವ ಮನೆಯಲ್ಲಿ ಅಶಾಂತಿ ತಾಂಡವಾಡುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರ ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ  ಜಿಲ್ಲಾ ಆಡಳಿತ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ (ಬೇಟಿ ಬಚಾವೋ ಬೇಟಿ ಪಡಾವೋ) ಸಪ್ತಾಹದ ಸಮಾರೋಪ ಹಾಗೂ ಜಿಲ್ಲೆಯ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಪುರಾಣ ಮತ್ತು ಹರಿಕಥೆಗಳಲ್ಲಿ ಸ್ತ್ರೀಯರಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಗಂಡು ಮಕ್ಕಳ ವ್ಯಾಮೋಹದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದ್ದು, ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿ, ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಿವೆ. ಭಾರತ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳಾ ಅಧಿಕಾರಿಗಳಿದ್ದಲ್ಲಿ ಶೇ.70 ರಷ್ಟು ಲಂಚಾವತಾರ ಇರುವುದಿಲ್ಲ, ಕಡತಗಳ ವಿಲೇವಾರಿ ಬೇಗನೆಯಾಗುತ್ತದೆ ಹಾಗೂ ಅವರು ಇತತರೊಂದಿಗೆ ಸೌಜನ್ಯದಿಂದ ವತರ್ಿಸುತ್ತಾರೆ. ಹೆಣ್ಣು-ಗಂಡೆಂಬ ಬೇದ-ಭಾವ ತೊಡೆದುಹಾಕಿ ವಿಶಾಲ ಮನೋಭಾವದಿಂದ ಹೆಣ್ಣುಮಕ್ಕಳನ್ನು ಓದಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಿದಾಗ ಪ್ರಶಸ್ತಿ ಹಾಗೂ ಬಹುಮಾನಗಳು ದೊರೆಯಲು ಸಾಧ್ಯ. ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂರಕ್ಷಣೆ, ಶಿಕ್ಷಣ ನೀಡಿ ಸಾಧನೆ ಮಾಡಲು ತಂದೆ-ತಾಯಿ ಹಾಗೂ ಶಿಕ್ಷಕರು ಅಪಾರ ಕೊಡುಗೆ ನೀಡಿದ್ದಾರೆ. ಪೂರಕ ವಾತಾವರಣವಿದ್ದಲ್ಲಿ ಕುಗ್ರಾಮದ ಮಹಿಳೆಯೂ ಸಹ ಸಾಧನೆ ಮಾಡಲು ಸಾಧ್ಯ ಎಂದರು.

ಭೂಮಿ ಹಾಗೂ ನೀರನ್ನು ಮಹಿಳೆ ಎಂದು ಭಾವಿಸಲಾಗುತ್ತದೆ. ಆದರೆ ಹೆಣ್ಣು ಮಗು ಜನಿಸಿದಾಗ ಸಾಮಾನ್ಯವಾಗಿ ಸಂಭ್ರಮಪಡುವು ಕಡಿಮೆ.   ರಾಜ್ಯದಲ್ಲಿ 972 ಲಿಂಗಾನುಪಾತವಿದ್ದರೆ ಜಿಲ್ಲೆಯಲ್ಲಿ 2011ರ ಜನಗತಿ ಅನುಸಾರ ಲಿಂಗಾನುಪಾತ 941 ಇದ್ದು ಈಗ 957 ಆಗಿರುತ್ತದೆ. ಶೋಷಣೆ, ಉದಾಸೀನತೆ ಒಂದು ಸಮಸ್ಯೆಯಾಗಿದೆ ಎಂದು ಸಿಂಹಾವಲೋಕನದಿಂದ ತಿಳಿಯುತ್ತದೆ.

  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆ.ಲೀಲಾವತಿ ಅವರು ಮಾತನಾಡಿ, ಸ್ತ್ರೀ ಮತ್ತು ಪುರುಷರು ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನಹೊಂದಿದ್ದಾರೆ. ಇಲ್ಲಿ ಯಾರೂ ಹೆಚ್ಚು ಯಾರೂ ಕಡಿಮೆಯೂ ಅಲ್ಲ. ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಹಾಗೂ ಮೋಸಹೋಗಬಾರದೆಂಬ ತಿಳುವಳಿಕೆ ಮೂಡಲು ಎಲ್ಲರೂ ಓದಬೇಕು. ಆಥರ್ಿಕವಾಗಿ ಸದೃಢರಾಗಲು ಹಾಗೂ ಸ್ವತಂತ್ರರಾಗಿ ಬದುಕಲು ಹೆಣ್ಣಾಗಲಿ ಗಂಡಾಗಲಿ ಜ್ಞಾನವಿರಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೆಶಕ ಪಿ.ವೈ.ಶೆಟ್ಟೆಪ್ಪನವರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು ಹಾಗೂ ಬೀದಿನಾಟಕಕ್ಕೆ ಚಾಲನೆ ನೀಡಲಾಯಿತು.

ಸಿಡಿಪಿಒ ಉಮಾ ಕೆ. ಸ್ವಾಗತಿಸಿದರು. ಮಂಗಳಾ ಅಳಗುಂಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾಜರ್ುನ ಮಠದ ವಂದಿಸಿದರು. 

ಕಾರ್ಯಕ್ರಮದಲ್ಲಿ ಜಿ.ಪಂ.ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್.ಎಸ್.ಮಜೀದ್, ಕಾಣೆಯಾದ ಮಕ್ಕಳ ಬ್ಯೂರೋದ ಮುತ್ತುರಾಜ ಮಾದರ ಇತರರು ಉಪಸ್ಥಿತರಿದ್ದರು.