ಫೆ.26 ಬೃಹತ್ ಆರೋಗ್ಯ ಮೇಳ ಉಚಿತ ಆರೋಗ್ಯ ತಪಾಸಣೆಯಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞವೈದ್ಯರು ಭಾಗಿ:.ವೆಂಕಟೇಶ್

ಹಾವೇರಿ21: ಸಾರ್ವಜನಿಕರಿಗೆ ಉತ್ತಮ ಆರೋಗ್ಯಕ್ಕೆ ನೆರವಾಗಲು ಉಚಿತವಾಗಿ ಆರೋಗ್ಯ ತಪಾಸಣೆ ಯನ್ನು ಪ್ರವಾಸಿ ಮಂದಿರದಲ್ಲಿ ಗುರುವಾರ ಬೆಳಿಗ್ಗೆ ಆರೋಗ್ಯ ಮೇಳ ಆಯೋಜನೆ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧಿಕಾರಿ  ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

      ಇದೇ ಫೆಬ್ರುವರಿ 26 ಹಾಗೂ 27ರ  ಹಾವೇರಿ ನಗರದಲ್ಲಿ ಎರಡು ದಿನ ಹಾವೇರಿ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. 

ನಗರದ ಹುಕ್ಕೇರಿಮಠದ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಬೃಹತ್ ಆರೋಗ್ಯ ಮೇಳದಲ್ಲಿ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ 40ಕ್ಕೂ ಹೆಚ್ಚು ತಜ್ಞವೈದ್ಯರು, 20ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ಸಂಘದ ತಜ್ಞವೈದ್ಯರು, 30 ಎಂ.ಬಿ.ಬಿ.ಎಸ್. ವೈದ್ಯರು, 280ಕ್ಕೂ ಅಧಿಕ ಅರೇವೈದ್ಯಕೀಯ ಸಿಬ್ಬಂದಿಗಳು ಹಾಗೂ 1000 ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ನರರೋಗ, ಮಾನಸಿಕ ರೋಗ, ಕ್ಯಾನ್ಸರ್, ಮಧುಮೇಹ, ಮೂತ್ರಪಿಂಡ, ಸ್ತ್ರೀರೋಗ, ಕಿವಿ, ಮೂಗು, ಗಂಟಲು, ದಂತ , ಚಿಕ್ಕ ಮಕ್ಕಳ ಪರೀಕ್ಷೆ ಕುರಿತಂತೆ ಎಲ್ಲ ರೀತಿಯ ಕಾಯಿಲೆಗಳ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರಿಗೆ ತಪಾಸಣೆಗಾಗಿ 25 ಚಿಕಿತ್ಸಾ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿಕೊಠಡಿಯಲ್ಲೂ ತಜ್ಞವೈದ್ಯರು ತಪಾಸಣೆ ನಡೆಸಲಿದ್ದಾರೆ. ಹಳೆಯ ಕಾಯಿಲೆ ಹಾಗೂ ಪತ್ಯೇಯಾಗದ ಕಾಯಿಲೆಗಳ ಕುರಿತಂತೆ ತಪಾಸಣೆ ನಡೆಸಿ ಚಿಕಿತ್ಸೆ ಅಗತ್ಯ ಕಂಡುಬಂದರೆ ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗುವುದು. ಕೆಲ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲದಿದ್ದರೆ ಆಯುಷ್ಮಾನ್  ಭಾರತ ಆರೋಗ್ಯ ಕನರ್ಾಟಕ ಯೋಜನೆಯಡಿ ನೋಂದಾಯಿತ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ನಿಯಮಾನುಸಾರ ಎ.ಪಿ.ಎಲ್. ಕಾಡರ್ುದಾರರಿಗೆ ಉಚಿತವಾಗಿ ,ಬಿಪಿಎಲ್ ಕಾಡರ್ುದಾರರಿಗೆ  ಚಿಕಿತ್ಸಾ ವೆಚ್ಚದ ಶೇ.30ರಷ್ಟು ಹಣವನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಪಾವತಿಸಬೇಕಾಗುತ್ತದೆ. ಎಲ್ಲರಿಗೂ ತಪಾಸಣೆ ಉಚಿತವಾಗಿರುತ್ತದೆ ಎಂದು ತಿಳಿಸಿದರು.

ರೋಗ ಪತ್ತೆಗಾಗಿ ಎಕ್ಸರೇ, ರಕ್ತತಪಾಸಣೆ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್, ಇ.ಸಿ.ಜಿ ಇಕೋಕಾಡರ್ಿಯಾಗ್ರಫಿ, ಹೃದಯರೋಗ ತಪಾಸಣೆ, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ಸ್ಥಳದಲ್ಲೇ ನಡೆಸಲಾಗುವುದು. ಇದಕ್ಕಾಗಿ ವಿಶೇಷ ಕೌಂಟರ್ಗಳನ್ನು ತೆರೆಯಲಾಗುವುದು. ಅಲ್ಲದೆ ಜನೌಷಧಿ (ಜನರಿಕ್) ಮಳಿಗೆಯೊಂದನ್ನು ಹುಕ್ಕೇರಿಮಠದ ಆವರಣದಲ್ಲಿ ತೆರೆಯಲಾಗುವುದು.

  ಎಲ್ಲ ವೈದ್ಯರಿಗೂ ಜನೌಷಧಿ ಕೇಂದ್ರದಲ್ಲಿ ದೊರೆಯುವ ಮೆಡಿಷನ್ ಬರೆದುಕೊಡಲು ಸೂಚಿಸಲಾಗಿದೆ. ಅನಿವಾರ್ಯ ಮತ್ತು ಜನೌಷಧಿ ಮಳಗೆಯಲ್ಲಿ ಲಭ್ಯವಿಲ್ಲದ ಔಷಧಿಯನು ಮಾತ್ರ ಹೊರಗೆ ಬರೆದುಕೊಡಲು ತಿಳಿಸಲಾಗಿದೆ ಎಂದರು.  

    ಆರೋಗ್ಯ ಶಿಬಿರ ಫೆಬ್ರುವರಿ 26 ಹಾಗೂ 27 ರಂದು ನಡೆಯಲಿದೆ. ಆಯಾ ದಿನ ಬೆಳಿಗ್ಗೆ 8 ರಿಂದ 4 ಗಂಟೆವರೆಗೆ ನೋಂದಾಯಿಸಿಕೊಂಡು ನೋಂದಾಯಿತ ರೋಗಿಗಳು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ವಿವಿಧ ಗ್ರಾಮದಿಂದ ಜನರು ಬರಲು ಅನುಕೂಲವಾಗುವಂತೆ ಸಾರಿಗೆ ಬಸ್ಗಳನ್ನು ಹುಕ್ಕೇರಿಮಠದ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುವವರಿಗೆ ಆಶಾ ಕಾರ್ಯಕರ್ತರ ನೆರವಿನಿಂದ ಆರೋಗ್ಯ ಮೇಳದ ತಪಾಸಣೆಗೆ ಭಾಗವಹಿಸಲು ಅನುಕೂಲಮಾಡಿಕೊಡಲಾಗಿದೆ  ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರದರ್ಶನ ಮಳಿಗೆಗಳನ್ನು ತೆರೆದು ಜನರಿಗೆ ಉಚಿತ ಮಾಹಿತಿ ಹಾಗೂ ಕೌನ್ಸಲಿಂಗ್ ಸಹ ನಡೆಸಲಾಗುತ್ತದೆ ಎಂದು ತಿಳಿಸಿದರು.

      ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿನ ಜನತೆ ಈ ಆರೋಗ್ಯ ಮೇಳದಲ್ಲಿ ಭಾಗವಹಿಸಬಹುದು. ಹೊರಗಿನ ಜಿಲ್ಲೆಯ ಜನರು ಸಹ ತಪಾಸಣೆ, ಚಿಕಿತ್ಸೆ ಪಡೆಯಲು ಯಾವುದೇ ನಿರ್ಭಂಧ ಇರುವುದಿಲ್ಲ. ದಿನಕ್ಕೆ ಕನಿಷ್ಠ 10 ರಿಂದ 15 ಸಾವಿರ ಜನ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಅವರು ಉಪಸ್ಥಿತರಿದ್ದರು.