ಆಳ್ವಾಸ್ ಪರೀಕ್ಷೆಗೆ ಮಕ್ಕಳ ಕರೆಕೊಂಡು ಹೋದ ತಂದೆ ಕಾಣೆ; ಮೂಡುಬಿದರೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಆಳ್ವಾಸ್ ಪರೀಕ್ಷೆಗೆ ಮಕ್ಕಳ ಕರೆಕೊಂಡು ಹೋದ ತಂದೆ ಕಾಣೆ; ಮೂಡುಬಿದರೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Father who took his children for Alva's exam goes missing; case registered at Moodbidri police stat

ಪಾಲಬಾವಿ 07:  ತನ್ನು ಎರಡು ಮಕ್ಕಳನ್ನು ಆಳ್ವಾಸ್ ಮೂಡಬಿದಿರೆ ಶಾಲೆಗೆ ಪರೀಕ್ಷೆಗೆ ಬರೆಯಲು ಕರೆದುಕೊಂಡ ಹೋದ ತಂದೆಯೇ ಕಾಣೆಯಾದ ಘಟನೆಯೊಂದು ಪಾಲಬಾವಿ(ಮುಗಳಖೋಡ) ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಜರುಗಿದೆ. ಪಾಲಬಾವಿ (ಮುಗಳಖೋಡ) ಗ್ರಾಮದ ಸಿದ್ದಪ್ಪ ಬಾಳಪ್ಪ ಮಾನಶೆಟ್ಟಿ(38) ಕಾಣೆಯಾದ ವ್ಯಕ್ತಿ. ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲಿಗೆ ಪ್ರವೇಶ ಪಡೆಯಲು ಮಕ್ಕಳಾದ ಪ್ರೀತಮ್ ಮಾನಶೆಟ್ಟಿ(13) ಹಾಗೂ ವಿಜಯಲಕ್ಷ್ಮಿ ಮಾನಶೆಟ್ಟಿ(11) ಇಬ್ಬರು ಮಕ್ಕಳನ್ನು ದಿ.21ರಂದು ಕರಕೊಂಡು ಹೋದ ತಂದೆ ಸಿದ್ದಪ್ಪ ಮಾನಶೆಟ್ಟಿ ಮಕ್ಕಳನ್ನು ಪರೀಕ್ಷೆಯ ಸಮಯದಲ್ಲಿ ಪರಿಚಯವಾದವರಿಗೆ ನನಗೆ ಅವಸರದ ಕೆಲಸ ಬಂದಿದೆ. ನಾನು ಊರಿಗೆ ಹೋಗಬೇಕಾಗಿದೆ. ನನ್ನ ಮಕ್ಕಳ ಪರೀಕ್ಷೆಯನ್ನು ಬರೆಯಿಸಿ ಜೋಪಾನವಾಗಿ ಊರಿಗೆ ಕರಕೊಂಡು ಬನ್ನಿರಿ ಎಂದು ಹೇಳಿ ಹೋದ ವ್ಯಕ್ತಿಯು ಇನ್ನೂ ಮನೆಗೆ ಬಂದಿರುವುದಿಲ್ಲ. ಕಳೆದ 15 ದಿನಗಳಿಂದ ಕಾಣೆಯಾದ ವ್ಯಕ್ತಿಯ ಮನೆಯವರು ಹುಡುಕಾಟದಲ್ಲಿ ನಿರತರಾಗಿದ್ದು. ಈ ಕುರಿತು ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ  8722239984, 9538383626 ಇವರನ್ನು ಸಂಪರ್ಕಿಸಲು ಕೊರಲಾಗಿದೆ.