ಸಹನೆಯ ಕಟ್ಟೆ ಒಡೆದ ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಸಹನೆಯ ಕಟ್ಟೆ ಒಡೆದ ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ Farmers who have lost their patience protest by blocking the national highway


ಉಳ್ಳಾಗಡ್ಡಿ-ಖಾನಾಪೂರ:-ಶುಕ್ರವಾರ ದಿ, 7 ರಂದು ಪ್ರಸ್ತುತ ಹಂಗಾಮಿನಲ್ಲಿ ಟನ್ ಕಬ್ಬಿಗೆ ಎಫ್,ಆರ್,ಪಿ, ಕನಿಷ್ಟ 3500 ರೂ ಬೆಲೆ ಘೋಷಿಸುವಂತೆ ಜಿಲ್ಲೆಯ ರೈತರು ಹಮ್ಮಿಕೋಂಡ ಪ್ರತಿಭಟನೆಗೆ ಇಂದು ಹತ್ತರಗಿ ಟೊಲ್ ನಾಕಾದ ಬಳಿಯಿರುವ ಹಿಡಕಲ್ ಡ್ಯಾಂ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರೂ ಜನ ರೈತರು ಕೂಡಿ ಪ್ರತಿಭಟನೆಯ ಕಿಚ್ಚು ಹೆಚ್ಚಾಗುವಂತೆ ಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬಂದ ಮಾಡಲು ಪ್ರಥಮದಲ್ಲಿ ಮೇಲಿಂದ ಮೇಲೆ ಯತ್ನಿಸುತ್ತಿದುದ್ದನ್ನು ಪೋಲಿಸರು ತಡೆಯುತ್ತ ಇದ್ದರು ತದ ನಂತರ ರಾಷ್ಟ್ರೀಯ ಹೆದ್ದಾರಿ ಹಾಗೂ ಸವ್ಹಿಸ್ ರಸ್ತೆಗಳಿಮದ ಸ್ವಲ್ಪ ಸ್ವಲ್ಪ ವಾಹನಗಳನ್ನು ಸಂಚರಿಸುವಂತೆ ತಿಳಿಸಿದರು ಆದರೆ ಸುಮಾರು 2 ಗಂಟೆಯ ನಂತರ ಸರ್ವ್ಹಿಸ್ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟಿಸುತ್ತಿದ್ದಾಗ ಪೋಲಿಸರು ಆವಾಗ ಆವಾಗ ತಡೆಯುತ್ತಿದ್ದರೂ ರೈತರು ಕ್ಯಾರೆ ಎನ್ನದೆ ರಸ್ತೆಗಿಳಿದು ವಾಹನಗಳನ್ನು ತಡೆದು ಪ್ರತಿಭಟಿಸುತ್ತಿದ್ದಾರೆ ಪ್ರತಿಭಟನೆಗೆ ಮತ್ತಷ್ಟು ಕಿಚ್ಚು ಹಚ್ಚಿದಂತಾಯ್ತು ಸುಮಾರು 12:30 ರಿಂದ 3  ಗಂಟೆಗಳ ವರೆಗೂ ಪ್ರತಿಭಟನೆ ಮುಂದುವರೆದಿತ್ತು. 

ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ರೈತರು:-ಹುಕ್ಕೇರಿ ತಾಲೂಕಿನಾದ್ಯಂತದ ಹಾಗೂ ವಿವಿದೆಡೆಯಿಂದ ನೂರಾರು ಸಂಖ್ಯೆಯಲ್ಲಿ ರೈತರು ಹಿಡಕಲ್ ಡ್ಯಾಂ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸುತ್ತಿದಂತೆ ಪೋಲಿಸರು ರೈತರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಸರ್ವೆಸಾಮಾನ್ಯವಾಗಿದ್ದವು ಹಸಿರು ಟವಲ್ ಹೋತ್ತು ರೈತರು ರಾಷ್ಟ್ರೀಯ ಹೆದ್ದಾರೆಯಲ್ಲಿ ಕುಳಿತು ಸರಕಾರ ಹಾಗೂ ಕಾರ್ಖಾನೆ ಮಾಲಿಕರ ವಿರುದ್ದ ಘೋಷಣೆ ಕೂಗುತ್ತ ಪ್ರತಿಭಟಿಸುತ್ತಿರುವ ದೃಶ್ಯಗಳು ರಾಷ್ಟ್ರೀಯ ಹೆದ್ದಾರಿ ಹಾಗೂ ಸವ್ಹಿಸ್ ರಸ್ತೆಗಳಲ್ಲಿ ಕಂಡಾಗ ವಾಹನ ಚಾಲಕರು ಕೂಡಾ ಕಕ್ಕಾ-ಬಿಕ್ಕಿಯಾಗಿ ಸಂಚಾರವನ್ನು ನಿಲ್ಲಿಸುತ್ತಿದ್ದ ದೃಶ್ಯಗಳು ಕಾಣಸಿಕ್ಕವು. 

ರೈತರ ಕೈಯಲ್ಲಿ ಬಾರಕೋಲು ಶಬ್ದ:-ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ತನ್ನ ಎತ್ತುಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದ ಬಾರಕೊಲು ತಂದು ಅದರಿಂದ ನೆಲಕ್ಕೆ ಬಡಿದ್ದು ಸಕ್ಕರೆ ಕಾರ್ಖಾನೆ ಹಾಗೂ ಸರಕಾರದ ವಿರುದ್ದ ಹರಿಹಾಯ್ದು ವಿನೂತನವಾಗಿ ಪ್ರತಿಭಟಿಸುತ್ತಿದ್ದ ರೈತರೂ ಕಂಡು ಬಂದರು, ಟ್ಯ್ರಾಕ್ಟರಗಳ ಭರಾಟೆ:-ಮುಂಜಾನೆ ಪ್ರತಿಭಟನೆಗೆ ಹಳ್ಳಿಗಳಿಂದ ಆಗಮಿಸುತ್ತಿದ್ದ ರೈತರು ಟ್ಯ್ರಾಕ್ಟರಗಳ ತುಂಬ ಊಟದ ಸಾಮಗ್ರಿಗಳನ್ನು ತುಂಬಿ ಪೂರ್ವಯೋಜನೆಯಲ್ಲೆ ಪ್ರತಿಭಟನೆಗೆ ಆಗಮಿಸುತ್ತಿದ್ದ ದೃಶ್ಯಗಳು ಕಂಡವು 

ಪ್ರತಿಭಟನೆಗೆ ಸಾಥ ನೀಡಿದ ಶ್ರೀಗಳು:- ಹತ್ತರಗಿಯ ಶ್ರೀಗುರುಸಿದೆಶ್ವರ ಮಹಾಸ್ವಾಮಿಗಳು ಹಾಗೂ ಯಮಕನಮರಡಿಯ ಹುಣಸಿಕೋಳ್ಳಮಠದ ಶ್ರೀ ಸಿದ್ದಬಸವ ದೇವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲವನ್ನು ಸೂಚಿಸಿದರು, ಈ ಪ್ರತಿಭಟನೆಯಲ್ಲಿ ಹುಕ್ಕೇರಿ ತಾಲೂಕಿನ ಹಾಗೂ ಜಿಲ್ಲೆಯ ಎಲ್ಲ ರೈತರು ರೈತ ಮುಖಂಡರು ಪಾಲ್ಗೋಂಡಿದ್ದರು ಸಂಜೆ 4 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಪ್ರಾರಂಭವಾಯ್ತು, 

ಬಿಗುವುಗೊಂಡ ವಾತಾವರಣ:- ಇಂದು ನಡೆದ ಪ್ರತಿಭಟನೆ ಕ್ಷಣಕ್ಷಣದಲ್ಲೆ ತೀವ್ರತೆ ಪಡಯುತ್ತಿತ್ತು,  ಮಧ್ಯಾನ್ಹ 3 ರ ನಂತರ ಪೋಲಿಸರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸುತ್ತಿದ್ದ ಕೆಲಯುವ ರೈತರನ್ನು ರಸ್ತೆಯಿಂದ ಎಬ್ಬಿಸುತ್ತಿದಂತೆಯೇ ಕೆಲವರು ಕಲ್ಲುತೂರಾಟ ನಡೆಸಿದರು, ಪರಿಸ್ಥಿತಿ ಪೋಲಿಸರ ಕೈಮಿರುತ್ತಿದಂತೆ ಪೋಲಿಸರು ಲಾಠಿ ಬಿಸುತ್ತಿದಂತೆಯೇ ಪೋಲಿಸರತ್ತವೂ ಕಲ್ಲುಗಳು ಬಂದವು ಆಗ ಮಾತ್ರ ಪೋಲಿಸರು ಅಸಹಾಯಕರಾಗಿ ಕಲ್ಲಿನ ಏಟು ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯಿತು ಆಗ ಪ್ರತಿಭಟನಾ ಸ್ಥಳದಲ್ಲಿ ವಾತಾವರಣ ಬಿಗುವಿನಿಂದ ಕೂಡಿತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ರಾಜ್ಯ ರಸ್ತೆಸಾರಿಗೆ ಬಸ್ಸಿಗೆ ಲಾರಿಗಳಿಗೆ ಹಾಗೂ ಒಂದು ಖಾಸಗಿ ವಾಹನದ ಗಾಜುಗಳಿಗೆ ಕಲ್ಲು ತೂರಲಾಯ್ತು, ಇದರಿಂದಾಗಿ ಖಾಸಗಿ ವಾಹನದಲ್ಲಿದ್ದ ಒರ್ವಳ ಕೈಗೆ ಪೆಟ್ಠಾದ ಬಗ್ಗೆ ವರದಿಯಾಗಿದೆ ಹೆಸರು ತಿಳಿದು ಬಂದಿಲ್ಲಾ, ಇಂದು ನಡೆದ ಪ್ರತಿಭಟನೆ ಕ್ಷಣಕ್ಷಣದಲ್ಲೆ ತೀವ್ರತೆ ಪಡಯುತ್ತಿತ್ತು,   

ಪ್ರತಿಭಟನಾ ಸ್ಥಳಕ್ಕೆ ಎಸ್,ಪಿ,ಭೆಟ್ಟಿ:-ನಂತರ ಬೆಳಗಾವಿ ಎಸ್,ಪಿ, ಭೀಮಾಶಂಕರ ಹಾಗೂ ರೈತ ಸಂಘದ ಅಧ್ಯಕ್ಷ ಶಿನಪ್ಪಾ ಪೂಜೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ವಾತಾವರಣ ತಿಳಿಯಾಗಿ ಕಲ್ಲಿನ ರಬಸಕ್ಕೆ ಅಲ್ಲಲ್ಲಿ ಓಡಿ ಹೋದ ಪೋಲಿಸರು ಮೆಲ್ಲನೆ ಬರುತ್ತಿರುವ ದೃಶ್ಯಗಳು ಕಾಣಸಿಕ್ಕವು. ಶಿನಪ್ಪ ಪೋಜೇರಿ ಮಾತನಾಡಿ ಸರಕಾರ ಮಾತುಕತೆ ಮಾಡುತ್ತಿದ್ದು ರೈತರು ಮಾಧ್ಯಮ ಹಾಗೂ ಪೋಲಿಸರು ನಮ್ಮವರೆ ನಮ್ಮ ರಕ್ಷಣೆಗೆ ಬಂದವರು ಸಹೋದರರು ಪ್ರಯಾಣಿಕರು ನಮ್ಮವರು ನಾವು ಶಾಂತಿಯಿಂದ ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಪ್ರತಿಭಟಣೆ ಮುಂದುವರೆಸಿ ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಹಿಂದೆತೆಗೆದುಕೊಂಡು ಇದೇ ಪ್ರತಿಭಟನೆಯನ್ನು ಮತ್ತೆ ಗುರ್ಲಾಪೂರದಲ್ಲಿ ಶಾಂತಿಯುತವಾಗಿ ಮುಂದುವರೆಸುತ್ತೆವೆ ಎಂದರು.