ಇಂದಿನಿಂದ ರೈತರಿಂದ ಅನಿರ್ದಿಷ್ಟಾವಾಧಿ ಧರಣೆ
Farmers to stage indefinite strike from today
ಗದಗ 07 : ರೈತರ ಬೆಳೆ ಪರಿಹಾರ ಸಮರ್ಕವಾಗಿ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಿಸಾನ್ ಮೋರ್ಚಾ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜ.8 ರಿಂದ ರೋಣ ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ, ಜಿಲ್ಲಾ ಕಾಯಾಧ್ಯಕ್ಷ ಮಹಾದೇವಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಗೆ ತಿಳಿಸಿದ ಅವರು, ಪ್ರತಿಭಟನಾ ಧರಣಿ ಆರಂಭಕ್ಕೂ ಮುನ್ನ ರೋಣ ಕೃಷಿ ಮಾರುಕಟ್ಟೆಯಿಂದ ರೈತರ ಬೃಹತ್ ಮೆರವಣಿಗೆ ಮೂಲಕ ಬೆಳಗ್ಗೆ 11.30ಕ್ಕೆ ರೋಣ ತಾಲೂಕ ತಹಶೀಲ್ದಾರರ ಕಚೇರಿಗೆ ಹೋಗುಲಾಗುತ್ತದೆ. ರೋಣ ತಹಶೀಲ್ದಾರ ಕಚೇರಿಯ ಮುಂದೆ ಅನಿರ್ದಿಷ್ಟ ಹೋರಾಟದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಬೇಕು.
ಹವಾಮಾನದ ವೈಪರಿತ್ಯಗಳಿಂದ ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದ ಕೈಗೆ ಬಂದ ಬೆಳೆ ಮನೆಗೆ ಬಾರದೆ ಹಾಳಾಗಿ ಹೋಗುತ್ತಿದೆ. ಅಲ್ಪ ಸ್ವಲ್ಪ ಬೆಳೆ ಬಂದರೂ ಅದಕ್ಕೂ ಕೂಡ ಬೆಲೆ ಇಲ್ಲದಂತಾಗಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಬೆಳೆಯ ಬೆಲೆ ನಿರ್ಧರಿಸುವ ನಿಯಮಗಳನ್ನು ಜಾರಿಗೆ ಮಾಡಬೇಕು. ಬೆಳೆನಾಶವಾದಾಗಲೂ ಕೂಡ ಖಾಸಗಿ ವಿಮಾಕಂಪನಿಗಳ ಬ್ರಹ್ಮಾಂಡ ಭ್ರಷ್ಟಚಾರದ ಫಲವಾಗಿ ಬೆಳೆವಿಮೆ ಮಾಡಿಸಿದ ರೈತರಿಗೆ ಬಾರದಂತಾಗಿದೆ. ರೈತರ ಬೆಳೆ ಪರಿಹಾರ ಸಮರ್ಕವಾಗಿ ವಿತರಿಸಬೇಕು. ಕಡಲೆ ಬೆಳೆಗೆ ಸಂಬಂಧಿಸಿದಂತೆ ಬೆಳೆ ಬರುವ ಪೂರ್ವದಲ್ಲಿ ಬೆಂಬಲ ಬೆಳೆ ಘೋರ್ಷಣೆ ಮಾಡಬೇಕು. ಖರೀದಿ ಕೇಂದ್ರ ಸ್ಥಾಪಿಸಬೇಕು. ಎಲ್ಲ ಬೆಳೆಗಳಿಗೆ ವಿಮಾ ಪರಿಹಾರ ಮೊತ್ತ ಶೀಘ್ರವಾಗಿ ನೀಡಬೇಕು ಎಂದು ಹೇಳಿದರು.
ರೋಣ ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಸಂಗಣ್ಣ ದಂಡಿನ, ರೈತ ಮುಖಂಡರಾದ ಮೇಘರಾಜ ಬಾವಿ, ಎಸ್.ಎಸ್. ಕಂಠಿ, ಸಂಗಮೇಶ ಪವಾಡಶೆಟ್ಟರ, ರಾಮಣ್ಣ ಸೂಡಿ, ದೇವಪ್ಪ ಹುನಗುಂದ, ಬಸನಗೌಡ ಮಂಗಳೂರು, ಸೇರಿದಂತ ಜಿಲ್ಲೆಯ ವಿವಿಧ ಭಾಗದ ರೈತರು ಭಾಗವಹಿಸುತ್ತಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 