ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಮುಂದಾಗಬೇಕು : ಪ್ರಕಾಶ ಕೋಳಿವಾಡ
Farmers should take the initiative to achieve economic development: Prakash Koliwada
ರಾಣೆಬೆನ್ನೂರು :27 ರೈತರ ಅನುಕೂಲತೆಗಾಗಿ ಜ್ಞಾನ ಮತ್ತು ತಂತ್ರಜ್ಞಾನದ ಹೊಸ ಹೊಸ ಯೋಜನೆಗಳು ಜಾರಿಗೆ ಬಂದಿದ್ದು ಅವುಗಳ ಪ್ರಯೋಜನ ಪಡೆದು ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು ರವಿವಾರ ಸಂಜೆ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಸಭಾಭವನದಲ್ಲಿ ಆಯೋಜಿಸಲಾಗಿದ್ದೆ ಮೆಕ್ಕೆಜೋಳ ಬೆಲೆ ಪಾವತಿ ಯೋಜನೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ವರ್ತಕರು ಸಮಾಜದಲ್ಲಿ ಎರಡು ಮುಖದ ಒಂದು ರೂಪದಲ್ಲಿ ತನ್ನ ಸೇವೆ ಸಲ್ಲಿಸುತ್ತಲಿದೆ. ಈ ಟೆಂಡರ್ ಪ್ರಕ್ರಿಯೆ ರೈತರಿಗೆ ಯಾವುದೇ ರೀತಿಯ ನಷ್ಟ ಆಗಲಾರದು ಎನ್ನುವ ನಂಬಿಕೆ ತಮಗಿದೆ ಎಂದರು. ದೇಶದ ಆರ್ಥಿಕ ಅಭಿವೃದ್ಧಿ ನಮ್ಮ ರೈತರ ಮೇಲೆ ನಿಂತಿದೆ ಹೀಗಿರುವಾಗ ರೈತರು ಮತ್ತು ವರ್ತಕರು ಯಾವುದೇ ರೀತಿಯಲ್ಲಿ ಆರ್ಥಿಕವಾಗಿ ನಷ್ಟ ವಾಗದ ರೀತಿಯಲ್ಲಿ ತಮ್ಮ ಕರ್ತವ್ಯಗಳನ್ನು ವ್ಯವಹಾರಿಕವಾಗಿ ನಡೆಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ . ಎಂ.ವಿ.ಶೈಲಜಾ ಅವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶನದಂತೆ ಈಗಾಗಲೇ ಈ ಯೋಜನೆ ರಾಜ್ಯದ ಹಾವೇರಿ, ವಿಜಯನಗರ, ಗದಗ, ಕೊಪ್ಪಳ, ವಿಜಯಪುರ, ಬೆಳಗಾವಿ, ಹಾಸನ, ದಾವಣಗೆರೆ, ಚಿತ್ರದುರ್ಗ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹಾಗೂ ಉಪ ಮಾರುಕಟ್ಟೆಗಳಲ್ಲಿ ಆರಂಭಿಸಿದೆ ಅತ್ಯಂತ ಸರಳ ಮತ್ತು ಪಾರದರ್ಶಕವಾಗಿದೆ ಎಂದರು. ಶೀಘ್ರದಲ್ಲಿ ಯೋಜನೆಗೆ ಸಂಬಂಧಿಸಿದ ರೈತರಿಗೆ ಪರಿಹಾರ ಧನ ದೊರೆಯಲಿದೆ ಎಂದ ಅವರು, ಯೋಜನೆಯ ಅಡಿಯಲ್ಲಿ ಮಾರಾಟ ಮೀತಿಗೊಳಿಸಲಾಗಿದೆ (ಪ್ರತಿ ಎಕರೆಗೆ 12 ಕ್ವಿಂಟಾಲ್, ಮತ್ತು ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಲ್ ) ರೈತರು ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಸುಧೀರ್ ಕುರುವತ್ತಿ, ವ್ಹಿ.ಪಿ.ಲಿಂಗನಗೌಡ್ರ, ವೀರೇಶ್ ಮೋಟಗಿ, ಜಿ.ಜಿ. ಹೊಟ್ಟೆಗೌಡ್ರ ಎಂ. ಆರ್. ದೊಡ್ಡಗೌಡ್ರ ಮಾಲತೇಶ ಕಜ್ಜರಿ, ಮಾಲತೇಶ ಚಳಗೇರಿ ಪ್ರಕಾಶ್ ಜಂಬಿಗಿ, ಪರಮೇಶ್ ನರಸಿಕೊಂಡರ ಸೇರಿದಂತೆ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಹಮಾಲರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ಕರಡಿ ಆಲದಕಟ್ಟಿ, ಇತರರು ಉಪಸ್ಥಿತರಿದ್ದರು. ಸಂಗಪ್ಪ ಬ್ಯಾಳಿ ಪ್ರಾರ್ಥಿಸಿದರು. ಸಹ ಕಾರ್ಯದರ್ಶಿ ಪರಮೇಶ್ವರ ನಾಯಕ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ರೈತರು, ನೂರಾರು ದಲಾಲರು, ಮತ್ತು ತೂಕದವರು ಹಮಾಲರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 