ರೈತರು ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಿ:ಅಧ್ಯಕ್ಷ ಆರ್‌.ಲಿಂಗನಗೌಡ

Farmers join hands for the development of cooperative society: President R. Lingan Gowda

ರೈತರು ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಿ:ಅಧ್ಯಕ್ಷ ಆರ್‌.ಲಿಂಗನಗೌಡ 

ಕಂಪ್ಲಿ 09: ನಿರ್ದೇಶಕರ ಮತ್ತು ರೈತರ ಸಹಕಾರದೊಂದಿಗೆ ಸೊಸೈಟಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಹಕಾರ ಸಂಘದ ನೂತನ ಅಧ್ಯಕ್ಷ ಆರ್‌.ಲಿಂಗನಗೌಡ ತಿಳಿಸಿದರು. ತಾಲೂಕಿನ ಹಂಪಾದೇವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡ ನಂತರ ಮಾಲಾರೆ​‍್ಣ ಸ್ವೀಕರಿಸಿ ಮಾತನಾಡಿ, ಸಹಕಾರ ಸಂಘದಲ್ಲಿರುವ ಯೋಜನೆಗಳನ್ನು ರೈತರಿಗೆ ತಲುಪಿಸುವ ಜತೆಗೆ ಸಂಘವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಾಗುವುದು ಎಂದರು. ಇಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಅಧ್ಯಕ್ಷರಾಗಿ ಆರ್‌.ಲಿಂಗನಗೌಡ, ಉಪಾಧ್ಯಕ್ಷರಾಗಿ ಎಂ.ರಂಗಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್‌.ಈರೇಶ್ ಘೋಷಿಸಿದರು. 

ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ​‍್ಣ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ದೊಡ್ಡಬಸಪ್ಪ, ಉಮೇಶಸ್ವಾಮಿ, ಕೆ.ದೊಡ್ಡಬಸಪ್ಪ, ಎಂ.ನರಸಪ್ಪ, ಹೆಚ್‌.ತಿಪ್ಪೇಸ್ವಾಮಿ, ಎನ್‌.ಈರಮ್ಮ, ಮಲ್ಲಮ್ಮ, ಉಪ್ಪಾರ ನರಸಮ್ಮ, ಯು.ಶಿವಪ್ಪ, ಜಿ.ಯರಿ​‍್ರಸ್ವಾಮಿ, ಮುಖ್ಯಕಾರ್ಯನಿರ್ವಾಹಕ ಹೆಚ್‌.ದೊಡ್ಡಬಸಪ್ಪ, ಮುಖಂಡರಾದ ಎ.ಹುಲುಗಪ್ಪ, ಇಟಗಿ ಬಸಪ್ಪ, ರಾಮಣ್ಣ, ಯು.ಗುರುಮೂರ್ತಿ, ಬಳ್ಳಾಪುರ ಲಿಂಗಪ್ಪ, ಎಸ್‌.ವೆಂಕಟೇಶ, ಮಲ್ಲಿಕಾರ್ಜುನ, ಬಸವರಾಜ, ರಾಮಲಿಂಗಯ್ಯ, ಬಿ.ಮಾರೆಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.