ಎಫ್‌.ಐ.ಡಿ ಕಡ್ಡಾಯ ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಗಳ ಪ್ರತಿಭಟನೆ

ಎಫ್‌.ಐ.ಡಿ ಕಡ್ಡಾಯ ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಗಳ ಪ್ರತಿಭಟನೆ Farmers' unions protest demanding immediate repeal of FID mandate

ಶಿಗ್ಗಾವಿ 03 : ರಸಗೊಬ್ಬರ ಖರೀದಿಗೆ ಸರ್ಕಾರ ಎಫ್‌.ಐ.ಡಿ ಕಡ್ಡಾಯಗೊಳಿಸಿರುವುದನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ಕಬ್ಬು ಬೆಳೆಗಾರರ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.  ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡರಸಗೊಬ್ಬರ ಖರೀದಿಗೆ ಎಐಡಿ ಕಡ್ಡಾಯಗೊಳಿಸಿರುವುದರಿಂದ ರೈತರಿಗೆ ಮುಂದಿನ ದಿನಗಳಲ್ಲಿ ತುಂಬಾ ತೊಂದರೆಯಾಗಲಿದೆ. ರೈತರು ಎಕರೆಗೆ ಮೂರ್ನಾಲ್ಕು ಚೀಲ ರಸಗೊಬ್ಬರ ಬಳಸುವುದು ಸಾಮಾನ್ಯ. ಆದರೆ, ಸರ್ಕಾರ ಎಐಡಿ ಕಡ್ಡಾಯ ಜಾರಿಗೊಳಿಸುವ ಮೂಲಕ ಪ್ರತಿ ರೈತರಿಗೆ ಒಂದು ಚೀಲ ಗೊಬ್ಬರ ವಿತರಣೆ ಮಾಡುವ ಹುನ್ನಾರ ನಡೆಸಿದೆ ತಕ್ಷಣವೇ ಎಪ್‌.ಐ.ಡಿ ಕಡ್ಡಾಯಗೊಳಿಸಿರುವುದನ್ನು ರದ್ದು ಮಾಡಬೇಕು ಎಂದರು.

ರೈತ ಸಂಘದ ಹಸಿರು ಸೇನೆಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಬೆಳೆಗೆ ಅಗತ್ಯವಿರುವಷ್ಟು ರಸಗೊಬ್ಬರ ದೊರೆಯದಿದ್ದಲ್ಲಿ ಬೆಳೆಗಳ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಎಐಡಿ ಕಡ್ಡಾಯ ನಿಯಮವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ತಾಲೂಕಿನ ಗೊಬ್ಬರ ವ್ಯಾಪಾರಸ್ತರು ರೈತರಿಗೆ ಲಿಂಕ್ ಮೂಲಕ ಗೊಬ್ಬರ ಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು. ರೈತನಿಗೆ ಅವಶ್ಯವಿರುವ ಗೊಬ್ಬರವನ್ನು ಸರ್ಕಾರಗಳು ಸಮರ​‍್ಕವಾಗಿ ಪೂರೈಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.ಪಟ್ಟಣದ ಪೋಸ್ಟ್‌ ಆಫೀಸ್ ನಿಂದ ಪ್ರಾರಂಭವಾದ ರೈತ ಮುಖಂಡರ ಪ್ರತಿಭಟನೆ ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಜಿಲ್ಲಾ ಕೃಷಿ ಇಲಾಖೆ ಉಪ ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಸಂತೋಷಗೌಡ ಪಾಟೀಲ, ಬಸಲಿಂಗಪ್ಪ ನರಗುಂದ, ಮಂಜುನಾಥ ಕಂಕನವಾಡ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಹನುಮಂತಗೌಡ ಏಗನಗೌಡ್ರು, ಶಂಭು ನಂದಿ, ಬಸನಗೌಡ ಏಗನಗೌಡ್ರು, ಬಸವರಾಜ ಗಂಜೀಗಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.