ರೈತರ ಹಿತ, ಕಾರಖಾನೆ ಅಭಿವೃದ್ದಿ ನನ್ನ ಗುರಿ : ಅಧ್ಯಕ್ಷ ಪರ್ಪ ಸವದಿ
ಅಥಣಿ 02: ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ರೈತ ಸದಸ್ಯರು, ಕಬ್ಬು ಬೆಳೆಗಾರರರ ಹಿತ ಕಾಪಾಡುವದರ ಜೊತೆ ಕಾರಖಾನೆಯನ್ನು ಅಭಿವೃದ್ದಿ ಪಥದಲ್ಲಿ ಸಾಗಿಸಿ, ರಾಷ್ಟೊ ಮತ್ತು ರಾಜ್ಯದಲ್ಲಿ ಸಹಕಾರಿ ರಂಗದ ಅತ್ಯುತ್ತಮ ಕಾರಖಾನೆಯನ್ನಾಗಿಸುವದು ನನ್ನ ಜೀವನದ ಗುರಿಯಾಗಿದೆ ಎಂದು ಅಧ್ಯಕ್ಷ ಪರ್ಪ ಸವದಿ ಹೇಳಿದರುತಾಲೂಕಿನ ಕೃಷ್ಣಾ ಸಕ್ಕರೆ ಕಾರಖಾನೆಯ ರೈತ ಭವನದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರ್ಪ ಸವದಿ ಅವರ ಅಭಿಮಾನ ಬಳಗ ಆಯೋಜಿಸಿದ್ದ 67 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯಭಾರವನ್ನು 18 ವರ್ಷಗಳಿಂದ ಮಾಡುತ್ತಿದ್ದು, ಎಲ್ಲ ರೈತ ಸದಸ್ಯರ, ಕಬ್ಬು ಬೆಳಗಾರರ, ಕಾರಖಾನೆಯ ಸಿಬ್ಬಂದಿಗಳ, ಕಾರ್ಮಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದ ಅವರು ಸಹಕಾರಿ ರಂಗದ ಸಕ್ಕರೆ ಕಾರಖಾನೆಗಳ ಸಾಲಿನಲ್ಲಿ ಕೃಷ್ಣಾ ಸಕ್ಕರೆ ಕಾರಖಾನೆ ಮೊದಲ ಸಾಲಿನಲ್ಲಿ ನಿಲ್ಲುವಂತೆ ಮಾಡಲು ಎಲ್ಲರ ಸಹಕಾರ ಮಹತ್ವದ್ದಾಗಿದೆ. ನಿಮ್ಮ ಎಲ್ಲರ ಸಹಕಾರ ಇದೆ ರೀತಿ ನಮ್ಮ ಮೇಲೆ ಇರಲಿ ಎಂದು ಹೇಳಿದರು.
ಸಂಗಮನಾಥ ಬ್ಯಾಂಕಿನ ಅಧ್ಯಕ್ಷ ಮಲ್ಲೇಶ ಸವದಿ, ಕಾರಖಾನೆಯ ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ, ಖರೀಧಿ ವಿಭಾಗದ ಸಂತೋಷ ಮನಗುಳಿ ಸೇರಿದಂತೆ ಕಾರಖಾನೆಯ ವಿವಿಧ ಇಲಾಖೆಗಳ ಮುಖ್ಯಸ್ಥರು, ಕಾರ್ಮಿಕರು, ಸಿಬ್ಬಂದಿಗಳು, ಅಭಿಮಾನಿಗಳು ಪಾಲ್ಗೊಂಡು ಪರ್ಪ ಸವದಿ ಇವರನ್ನು ಸತ್ಕರಿಸಿದರು.