ಲೋಕದರ್ಶನ ವರದಿ
ಕುಕನೂರು 03: ತಾಲೂಕಿನ ಯರೇಹಂಚಿನಾಳ ಗ್ರಾಮದ ಮುಂದೆ ಇರುವ ಬಾವಿ ಹಳ್ಳದಲ್ಲಿ ಸೇತೆವೆಯನ್ನು ನಿಮರ್ಾಣ ಮಾಡಲಾಗುತ್ತಿದೆ ಈ ಸೇತೆವೆಯು ರಸ್ತೆಕಿಂತ ಕೆಳಹಂತವಾಗಿದೆ ಅದನ್ನು ರಸ್ತೆಕಿಂತ ಎತ್ತರ ಹೆಚ್ಚಳ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಆಗ್ರಹಿಸಿದ್ದಾರೆ.
ಈಗಾಗಲೇ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಗ್ರಾಮದ ಕಡೆಗೆ ಯಾವ ಅಧಿಕಾರಿಗಳು ಸುಳಿದಿಲ್ಲಾ ಇದೇ ರೀತಿ ಆಗಿ ಗುತ್ತಿಗೆದಾರರನ್ನು ಸರಕಾರದ ಕೆಲಸವನ್ನು ಕೆಳದೆ ಹೋದರೆ ಗುತ್ತಿಗೆದಾರರು ಸರಕಾರವನ್ನೆ ಹಾಳುಮಾಡಿಹೊಗುತ್ತಾರೆ ಗುತ್ತಿಗೆದಾರರು ಮಾಡುವ ಕೆಲಸಕ್ಕೆ ಸಾರ್ವಜನಿಕರು ಈ ರಸ್ತೆಯಲ್ಲಿ ಕಷ್ಟ ಅನುಭವಿಸಬೇಕು ಇದಕ್ಕೆ ಸರಕಾರ ಗುತ್ತಿಗೆದಾರರ ಮೇಲೆ ಕ್ರಮಜರುಗಿಸಬೇಕು ಇಲ್ಲಾವಾದರೆ ರೈತ ಸಂಘದಿಂದ ಉಗ್ರಹೊರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ರೈತ ಸಂಘದ ಸದಸ್ಯರಾದ ಪರಮೇಶ ಹನಸಿ. ಅಮರೇಶ ಎತ್ತಿನಮನಿ. ಕಿರಣ್ಣ .ಚ.ಶಿಳ್ಳಿನ. ರಾಮಚಂದ್ರ ಗಂಗೋಜಿ. ಮುತ್ತಪ್ಪ ಕೋಳೂರ. ಬಸವರಾಜ ಚಿತವಾಡಗಿ. ಶಶಿಧರ ಹನಸಿ. ಮುತ್ತಪ್ಪ ಕಮತರ. ಶರಣಪ್ಪ ಗಡಾದ. ಈಶಪ್ಪ ಯಲಬುಗರ್ಿ. ಶಿವನಂದಪ್ಪ ಗಾಣಿಗೇರ. ಸೇರಿದಂತೆ ಇನ್ನೀತರರು ಹಾಜರಿದ್ದರು.