ಮುಗಳಖೋಡ: ರೈತರ ಆಶಾಕಿರಣ ಇಂದೂಧರ ಹಿರೇಮಠ

ಲೋಕದರ್ಶನ ವರದಿ

ಮುಗಳಖೋಡ 13: ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ನೂತನ ಅಗ್ರೀಕಲ್ಚರ ಸಿ.ಓ. ಕೃಷಿ ಅಧಿಕಾರಿ ಇಂದೂಧರ ಹಿರೇಮಠ ಅವರಿಗೆ ಸತ್ಕಾರ ಹಾಗೂ ಅಭಿನಂಧನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

      ಕಾರ್ಯಕ್ರಮದಲ್ಲಿ  ರೈತರನ್ನು ಉದ್ದೇಶಿಸಿ ಇಂದೂಧರ ಹಿರೇಮಠ ಅವರು ಮಾತನಾಡಿ ಬೆಳೆಯ ಬೆಳವಣಿಗೆ ಕುರಿತು ತಿಳಿಸುತ್ತಾ ರೈತರು ದೇಶ ಬೆನ್ನೆಲಬು ಎಂದು ಹೇಳುವರೊಂದಿಗೆ ಈ ಬೆಳೆಯನ್ನು ಯಾವ ರೀತಿಯಲ್ಲಿ ಬೆಳೆಸಬೇಕು ಅದರಿಂದ ಯಾವ ರೀತಿಯಾಗಿ ಹೆಚ್ಚು ಇಳುವರಿಯನ್ನು ಪಡೆಯಬೇಕು ಎಂಬ ಮಾಹಿತಿಯನ್ನು ಹೇಳುತ್ತಾ ರೈತರಲ್ಲಿ ಆತ್ಮವಿಶ್ವಾಸ ಬೆಳೆಸುವುದರೊಂದಿಗೆ ಅವರ ಉತ್ಸಾಹವನ್ನು ಇಮ್ಮಡಿಗೋಳಿಸಿದರು. ನಂತರದಲ್ಲಿ ಕುಡಚಿ ರೈತ ಅಧಿಕಾರಿ ರಘುನಾಥ ಪಾಟೀಲ ಮಾತನಾಡಿ ರೈತರಿಗೆ ಸಮೃದ್ದ ಬೆಳೆಯನ್ನು ಬೆಳೆಯಲು ಕೆಲ ಮಾಹಿತಿಯನ್ನು ನೀಡಿದರು. 

ಇಂದೂಧರ ಹಿರೇಮಠ ಅವರು ಪ್ರಗತಿಪರ ರೈತರಾದ ಶಶಿಕಾಂತ ನಾಗನೂರ ಅವರ ತೋಟಕ್ಕೆ ಬೇಟ್ಟಿ ನೀಡಿ ಅವರು ಬೆಳೆದ ಎಲೆ ಕೋಸು ಬೆಳೆಯನ್ನು ವಿಕ್ಷಿಸಿ ರೈತ ಬಾಂಧವರಿಗೆ ಅಭಿನಂದನೆ ಸಲ್ಲಿಸಿದರು. ರೈತರಲ್ಲಿ ಯುವ ಉತ್ಸಾಹ ತುಂಬಿದ ಇಂದೂಧರ ಹಿರೇಮಠ ಅವರಿಗೆ ಗ್ರಾಮಸ್ಥರು ಅಭಿನಂಧನೆ ಸಲ್ಲಿಸಿದರು. 

ಈ ಕಾರ್ಯಕ್ರಮದಲ್ಲಿ ಗ್ರಾಮ ಸೇವಕ ಹೊನ್ನಳ್ಳಿ, ಎಸ್.ಕೆ.ಕುಂಬಾರ, ಬಿ.ಎಲ್.ಘಂಟಿ, ಶಶಿಧರ ನಾಗನೂರ, ಆಕಾಶ ಕಾಂಬಳೆ ಹಿಡಕಲ್ಲ ಗ್ರಾಮದ ಎಲ್ಲ ರೈತ ಬಾಂಧವರು ಪಾಲ್ಗೊಂಡಿದ್ದರು.