ಪುರಸಭೆ ಬಡ್ತಿ ಅಧಿಕಾರಿ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ
Farewell and welcome ceremony for promoted municipal officer
ಹೂವಿನಹಡಗಲಿ 19: ಪಟ್ಟಣದ ಪುರಸಭೆ ಯಲ್ಲಿ ಪಟ್ಟಣಕ್ಕೆ ಆಗಮಿಸಿದ ನೂತನ ಅಧಿಕಾರಿಗಳ ಸ್ವಾಗತ ಹಾಗೂ ಪದೋನ್ನತಿಯೊಂದಿಗೆ ಇಲ್ಲಿಂದ ವರ್ಗಾವಣೆಗೊಂಡ ಇಮಾಮ್ ಸಾಬ್ ಅವರಿಗೆ ಪುರಸಭೆ ಇಲಾಖೆ ಸಿಬ್ಬಂದಿ ಯಿಂದ ಹೃದಯಸ್ಪರ್ಶಿ ಸಮಾರಂಭ ಸೋಮವಾರ ನಡೆಯಿತು. ಕಳೆದ 20 ವರ್ಷದಿಂದ ಪುರಸಭೆ ಯಲ್ಲಿ ವ್ಯವಸ್ಥಾಪಕರಾಗಿ, ಮುಖ್ಯಾಧಿಕಾರಿ ಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇಮಾಮ್ ಸಾಬ್ ಪೌರಾಡಳಿತ ಅವರು ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿದ್ದು, ಇದೇ ವೇಳೆ ನೂತನ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಆಗಮಿಸಿದ
ಅವರನ್ನು ಸನ್ಮಾನಿಸಲಾಯಿತು.ಪುರಸಭೆ ಆಡಳಿತಾಧಿಕಾರಿ ಸುರೇಶ ಕುಮಾರ , ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅದ್ಯಕ್ಷ ಎ.ಕೊಟ್ರಗೌಡ, ಪತ್ರಕರ್ತ ಎಸ್. ನಿಂಗರಾಜ ಮಾತನಾಡಿ ಇಮಾಮ್ ಸಾಬ್ , ದಕ್ಷತೆ, ಪ್ರಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ ಪರಿಣಾಮವಾಗಿ ಅವರು ಇಂದು ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿರುವುದು ಸಂತಸದ ಸಂಗತಿ ಎಂದರು. ಪದೋನ್ನತಿಯೊಂದಿಗೆ ವರ್ಗಾವಣೆ ಗೊಂಡ ಇಮಾಮ್ ಸಾಬ್ ಸನ್ಮಾನ ಸ್ವೀಕರಿಸಿ ಮಾತನಾಡಿ ಜನತೆಯ ಪ್ರೀತಿ, ವಿಶ್ವಾಸ ತೀರಿಸಲಾಗದ ಋಣ ಎಂದ ಅವರು ಮೂಲಸೌಕರ್ಯ ಕಲ್ಪಿಸಲು ನೀಡಿದ ಸಹಕಾರ ಮರೆಯಲಾಗದು ಎಂದರು. ಇದೇ ವೇಳೆ ಪುರಸಭೆ ಮಾಜಿ ಅದ್ಯಕ್ಷೆ ಮತ್ತು ಸದಸ್ಯರು. ಸಿಬ್ಬಂದಿ ವರ್ಗದವರು ಹೃದಯ ಸ್ಪರ್ಶಿ ಸಮಾರಂಭ ಜರುಗಿತು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 