ಖ್ಯಾತ ವೈದ್ಯ ಡಾ. ಗೀರೀಶ ಸೋನವಾಲಕರ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

Famous doctor Dr. DCM DKshi visits Girish Sonawalakar's residence

 ಖ್ಯಾತ ವೈದ್ಯ ಡಾ. ಗೀರೀಶ ಸೋನವಾಲಕರ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ 

ಬೆಳಗಾವಿ 24: ಖ್ಯಾತ ವೈದ್ಯರಾದ ಡಾ. ಗೀರೀಶ ಸೋನವಾಲಕರ ಅವರ ಮನೆಗೆ  ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಭೇಟಿ ನೀಡಿ, ಉಪಹಾರ ಸವಿದರು.  


ಕಾಂಗ್ರೆಸ್ ಅಧಿವೇಶನ ಹಿನ್ನೆಲೆಯಲ್ಲಿ  ಬೆಳಗಾವಿಗೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್  ಅವರು ಮಂಗಳವಾರ  ನಗರದ ಗಣೇಶಪುರದಲ್ಲಿರುವ  ಡಾ. ಗೀರೀಶ ಸೋನವಾಲಕರ ಅವರ   ನಿವಾಸಕ್ಕೆ ತೆರಳಿ,  ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಬಳಿಕ, ಡಾ. ಗೀರೀಶ ಸೋನವಾಲಕರ ಅವರು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಡಾ.ಸುಧಾಕರ್ ಅವರಿಗೆ ಸನ್ಮಾನಿಸಿ, ಅವರೊಂದಿಗೆ  ಕುಟುಂಬದ ಸದಸ್ಯರು ಪೋಟೊ ತೆಗೆಸಿಕೊಂಡರು. 


ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ , ಎಂಎಲ್ ಸಿ ಚನ್ನರಾಜ್  ಹಟ್ಟಿಹೊಳಿ, ಡಾ. ಗೀರೀಶ ಸೋನವಾಲಕರ, ಡಾ. ಶ್ವೇತಾ ಸೋನವಾಲಕರ, ವೇಮನ್ ಬ್ಯಾಂಕ್ ಅಧ್ಯಕ್ಷರಾದ ಸಂತೋಷ ಸೋನವಾಲಕರ, ಡಾ. ಪ್ರಕಾಶ ಸೋನವಾಲಕರ,  ಸುರೇಖಾ ಸೋನವಾಲಕರ, ರವಿ ಜುಗನ್ನವರ,  ಶ್ರೀನಿವಾಸ್ ಬಿ.ವ್ಹಿ,  ಆಪೀಸ್ ಮುಲ್ಲಾ, ಬೈರಗೌಡ ಪಾಟೀಲ, ರಾಮಚಂದ್ರ  ಅಲಾರೆಡ್ಡಿ, ಕಿರಣ    ಜುಗನ್ನವರ, ರಂಗಣ್ಣ ಮಳಲಿ, ಲೊಕೇಶ ಹಾಗೂ ಇತರರು.