ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕುಟುಂಬದ ಬೆಂಬಲ ಅತಿಮುಖ್ಯ: ಬಸವರಾಜ ಮೇಟಿ

Family support is crucial for girls' education: Basavaraja Meti

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕುಟುಂಬದ ಬೆಂಬಲ ಅತಿಮುಖ್ಯ: ಬಸವರಾಜ ಮೇಟಿ

ಕೊಪ್ಪಳ 16: ಜಿಲ್ಲೆಯ ಕುಕನೂರ ತಾಲ್ಲೂಕಿನ ಅರಕೇರಿಯಲ್ಲಿ ಇಕೊ ಫೌಂಡೇಶನ್ ಫಾರ್ ಸಸ್ಟೈನೇಬಲ್ ಅಲ್ಟರ್ ನೇಟಿವ್ಸ್‌  ಬೆಂಗಳೂರು ಇವರ ಸಹಯೋಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪ್ಸಾ ಸಂಸ್ಥೆಯ ನಿರ್ದೇಶಕರಾದ ಸುಧಾ ರೇಡ್ಡಿ ಅವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಯಾಗಿ ಡಾ,ಕೀರ್ತಿ ನಕ್ರೆ ಅವರು ಮತ್ತು ಜಯಶ್ರೀ ಗುಳಗಣ್ಣವರು ವಹಿಸಿಕೊಂಡಿದ್ದರು.  ಉಪಸ್ಥಿತಿ ಸಹಶಿಕ್ಷಕರಾದ ಹೊನ್ನೂರಲಿ ಬಸವರಾಜ ಮೇಟಿ ಕಾರ್ಯಕ್ರಮದ ಉದ್ಘಾಟನೆ ಗಿಡಗಳಿಗೆ ನೀರಿನ ತೊಟ್ಟಿ ಕಟ್ಟಿ ಅವುಗಳಲ್ಲಿ ನೀರು ಹಾಕುವ ಮೂಲಕ ಬೆಸಿಗೆ ಕಾಲದಲ್ಲಿ ಆಗುವ ತೊಂದರೆಗಳನ್ನು ಪಕ್ಷಿಗಳು ದಾಹ ತಿರಿಸಲು ಸಹಕಾರ ಆಗಬೇಕು ಎನ್ನು ದೃಷ್ಟಿಯಿಂದ ಸಂದೇಶ ನೀಡಲಾಯಿತು. ನಂತರ ಡಾ,ಕೀರ್ತಿ ನಕ್ರೆ ಅವರು ಮಾತನಾಡುತ್ತಾ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ  ಕುರಿತು ಹೆಣ್ಣುಮಕ್ಕಳಿಗೆ ಸಿಗಬೇಕಾದ ಅವಕಾಶವನ್ನು ಸಮಾನವಾಗಿ ದೊರೆಯುವಂತೆ  ಮಾಡಲು ಎಲ್ಲರ ಸಹಭಾಗಿತ್ವ ಬಹಳ ಮುಖ್ಯ ಆದ್ದರಿಂದ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಆಗುವ ತೊಂದರೆ ಂಛಿಛಿಜಠಿಣಚಿಛಟಜ ಪರಿಹಾರ ಕಂಡುಕೊಳ್ಳುವಲ್ಲಿ ಎಲ್ಲರೂ ಬರಂಬಲಿಸಬೇಕು ಎಂದು ಹೇಳಿದರು.  ನಂತರ ಜಯಶ್ರೀ ಗುಳಗಣ್ಣವರು ತಾವು ವಿಕಲಾಂಗ ಇದ್ದರೂ ಸಹ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ವೀಲ್ ಚೇರ್ಸ್‌ ರನ್ನಿಂಗ್ ರೆಸ್ ನಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಈಗ ಸ್ವಯಂ ಉದ್ಯೋಗ ಮಾಡುತ್ತಿರುವ ಕುರಿತು ಬೇರೆಯವರಿಗೆ ಸಹ ಮಾದರಿ ಆಗಲು ತಿಳಿಸಿದರು ಮೂರು ಜನ ಮಹಿಳೆಯರ ವಿವಿಧ ಕ್ಷೇತ್ರದಲ್ಲಿ ತೊಡಗಿರುವುದರಿಂದ ಅವರಿಗೆ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು. ಹತ್ತನೆಯ ತರಗತಿಯ ಮಕ್ಕಳಿಗೆ ಪರಿಕ್ಷೆ ಪ್ಯಾಡ್ ಗಳನ್ನು ವಿತರಿಸಲಾಯಿತು. ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ದುರಗೇಶ ಗೊಬ್ಬಿ ನಡೆಸಿಕೊಟ್ಟರು. ಸುಧಾರೆಡ್ಡಿಯವರು ಪ್ರಾಸ್ತಾವಿಕ ನುಡಿಗಳು ಹಾಡಿದರು.ಶಂಕರ್ ಅವರು ವಂದಿಸಿದರು. ಗ್ರಾಮ ಪಂಚಾಯತಿ ಸದಸ್ಯರು ಮತ್ತು ಎಸ್ ಡಿ ಎಮ್ ಸಿ ಸದಸ್ಯರು,ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತಿ ಇದ್ದರು.