ಫೆ. 14ರಿಂದ ಮಹಾಶಿವರಾತ್ರಿ ನಿಮಿತ್ಯ ಬಡೇಕೊಳ್ಳ ಮಠದಲ್ಲಿ ಜಾತ್ರಾ ಮಹೋತ್ಸವ
Fair festival to be held at Badekolla Math from Feb. 14 on the occasion of Mahashivratri
ಬೆಳಗಾವಿ 10: ತಾಲೂಕಿನ ಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ಪವಾಡ ಪುರುಷ ನಾಗೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವವು ಫೆ.14ರಿಂದ 18ರವರೆಗೆಐದು ದಿನಗಳ ಕಾಲ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಪ್ರಸ್ತುತ ತೃತೀಯ ಪೀಠಾಧಿಕಾರಿಗಳಾದ ಪರಮಪೂಜ್ಯ ನಾಗಯ್ಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಅತೀ ವಿಜೃಂಬಣೆಯಿಂದ ಜರುಗಲಿದೆ.
ಶನಿವಾರ ದಿನಾಂಕ 14-2-2026ರಂದು ಸಾಯಂಕಾಲ 5 ಘಂಟೆಗೆ ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳ ಸಂತಿಬಸ್ತವಾಡದ ಬಸವೇಶ್ವರ ದೇವಸ್ಥಾನದಿಂದ ಬರುವಧ್ವಜ, ಶಿಂದೊಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಬಸವಗುರು ಸೇವಾ ಭಜನಾ ಸಂಘದ ನೇತೃತ್ವದಲ್ಲಿ ಬರುವಧ್ವಜ ಸೂತ್ರಗಳಿಂದ ಸದ್ಗುರು ನಾಗೇಂದ್ರ ಶಿವಯೋಗಿಗಳವರ ಮಠದ ಪರಂಪರೆಯ ಧರ್ಮಲಾಂಭನದ್ಯೋತಕವಾದ ಧ್ವಜಾರೋಹಣದೊಂದಿಗೆ ಜಾತ್ರೆಯು ಪ್ರಾರಂಭವಾಗುವುದು.
ರವಿವಾರ ದಿನಾಂಕ 15-2-2026ರಂದು ವಿಶ್ವಶಾಂತಿಗಾಗಿ ಮಠದಲ್ಲಿ ಮಹಾರುದ್ರಾಭಿಷೇಕ ನಂತರ ಮುಂ. 9:30ಗಂಟೆಗೆ ವೇ. ಕಲಯ್ಯ ಶಾಸ್ತ್ರಿಗಳು ಉದೇಶಿಮಠ, ಹಿರೇಬಾಗೇವಾಡಿ ಹಾಗೂ ಸಂಗಡಿಗರುಇವರ ನೇತೃತ್ವದಲ್ಲಿ ಹೋಮ. ಸಂಜೆ 4 ಗಂಟೆಗೆ ಪರಮಪೂಜ್ಯ ನಾಗೇಂದ್ರ ಸ್ವಾಮಿಗಳ ಪರಮ ಭಕ್ತರಾದ ಶ್ರೀರುದ್ರಗೌಡ ಬ. ಪಾಟೀಲ ಮಾಸ್ತಮರ್ಡಿ ಇವರಿಂದ ನಿರ್ಮಿತವಾದ ನಾಗೇಂದ್ರ ಶಿವಾಲಯದಿಂದ ಪಲಕ್ಷ್ಮಿ, ಛತ್ರಚಾಮರ ಅಪ್ತಾಗಿರಿ, ಬೆತ್ತ ಮತ್ತು ಅಂಬಲಿ-ಗುಗರಿಗಳಿಂದೊಡಗೂಡಿ ಭಕ್ತ ಸಮೂಹದೊಂದಿಗೆ ಆಗಮಿಸಿದ ಹಾಗೂ ತಾರೀಹಾಳ ಗ್ರಾಮದ ಶ್ರೀ ದೇವಸ್ಥಾನದಿಂದ ಆಗಮಿಸಿದ ಪಲಕ್ಷಿಗಳನ್ನು ಶ್ರೀಗಳು ಹಾಗೂ ಮಠದ ಭಕ್ತರಿಂದ ವಾದ್ಯ ಮೇಳದೊಂದಿಗೆ ಬರಮಾಡಿಕೊಳ್ಳುವದು. ಮಾಸ್ತಮರಡಿ ಹರಿಭಜನಾ ಮಂಡಳಿ ನೇತೃತ್ವದಲ್ಲಿ ಭಜನೆ. ಸುತ್ತಮುತ್ತಲಿನ ಗ್ರಾಮಗಳ ಪರಿಭಜನಾ ಮಂಡಳಿಗಳು ಪಾಲ್ಗೊಳ್ಳುವವು. ರಾತ್ರಿ 8-15 ಗಂಟೆಯಿಂದ ಹ.ಭ.ಪಗಿರಮಲ್ಲ ಮಹಾರಾಜ ಹಾಗೂ ಮಂಡಳಿ, ಸಾಂಬ್ರಾ ಇವರಿಂದ ಕೀರ್ತನೆ ಮತ್ತು ಭಜನೆ. ರಾತ್ರಿ 10-30 ಕ್ಕೆ ಆನಂದ ಸೌಂಡ್ಸ ಹಿರೇಬಾಗೇವಾಡಿ ಇದರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗುವುದು.
ಸೋಮವಾರ ದಿನಾಂಕ 16-2-2026ರಂದು ಬೆಳಿಗ್ಗೆ 6ಗಂಟೆಯಿಂದ ಮಹಾರುದ್ರಾಭಿಷೇಕ, 11-30 ರಿಂದ ಶ್ರೀಗಳವರ ಪಾದ ಪೂಜೆ, ಮಧ್ಯಾಹ್ನ1-00 ಘಂಟೆಗೆರಥೋತ್ಸವ ಮ. 2-30 ಕ್ಕೆ ಮಹಾಪ್ರಸಾದ (ಜಾತ್ರೆಯ ಐದು ದಿನ ಪ್ರಸಾದತಯಾರ ಕರುಯರಡಾಲ ಗ್ರಾಮದ ಸದ್ಭಕ್ತರಿಂದ ಮಹಾಪ್ರಸಾದ ಸೇವೆ ನಡೆಯುವುದು.) ಸಂಜೆ 4 ಘಂಟೆಗೆ ಬಲಭೀಮ ಯುವಕ ಮಂಡಳ, ಯರಮಳ್ಳಿ ಇವರಿಂದ ಸೈಕಲ್ ವೃತ್ತಾಕಾರ ಚಲನೆಯ ಕಾರ್ಯಕ್ರಮಗಳು. ಸಾ, 6-30 ಗಂಟೆಗೆ ಹಿರೇಬಾಗೇವಾಡಿ ಶಾಲಾ ಬಾಲಕ-ಬಾಲಕಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ರಾತ್ರಿ 10-30 ಘಂಟೆಗೆ ಆನಂದ ಸೌಂಡ್ಸ ಹಿರೇಬಾಗೇವಾಡಿ ಇವರಿಂದ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ದಿನಾಂಕ 17-2-2026ರಂದು ಮುಂಜಾನೆ 10-30 ರಿಂದ ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿಗಳಿಂದ ಭಜನೆ. ಮಧ್ಯಾಹ್ನ 3 ಗಂಟೆಗೆ ಹಿರೇಬಾಗೇವಾಡಿ ಭಕ್ತಾದಿಗಳ ನೇತೃತ್ವದಲ್ಲಿ ಬಯಲು ಕುಸ್ತಿಗಳು, ರಾತ್ರಿ 10-30ಕ್ಕೆ ರೇಣುಕಾ ಯಲ್ಲಪ್ಪ ಚೌಡಕಿ ಮೇಳ, ಸಾ. ನಾವಲಗಿ ಮತ್ತು ಶ್ರಿ ಬಕ್ಕೇಶ್ವರ ಹರದೇಶಿ ಗಾಯನ ಸಂಘ, ಸಾ ಬ್ಯಾಡಗಿ ಇವರಿಂದ ಚೌಡಕಿ ಪದಗಳು ಜರುಗಲಿವೆ. ಬುಧವಾರ ದಿನಾಂಕ 18-2-2026ರಂದು ಮಧ್ಯಾಹ್ನ 2-00 ಕ್ಕೆ ಪಲಕ್ಕಿ ಬೀಳ್ಕೊಡುವ ಸಮಾರಂಭ, ಸಂಜೆ 4 ಗಂಟೆಗೆ ಧ್ವಜಾವರೋಹಣದೊಂದಿಗೆ ಜಾತ್ರೆಯ ಮುಕ್ತಾಯವಾಗುವದೆಂದು ಪರಮಪೂಜ್ಯ ನಾಗಯ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 