ಧಾರವಾಡ 13: ಯಶಸ್ಸಿಗೆ ಸೋಲು ಮೊದಲ ಮಟ್ಟಿಲು ಎಂದು ಕರ್ನಾ ಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ ಎನ್.ಎಮ್.ಸಾಲಿ ಹೇಳಿದರು. ಅವರು ಕನರ್ಾಟಕ ಕಲಾ ಮಹಾವಿದ್ಯಾಲಯದ ಬಿಬಿಎ ಸಭಾಂಗಣದಲ್ಲಿ ಕೆಸಿಡಿಯ ಪಿ.ಯು.ಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಳ ಪ್ರತಿಭಾ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಗಳು ಜೀವನದಲ್ಲಿ ಸೋಲುಗಳಿಂದ ಸವಾಲುಗಳನ್ನು ಏದುರಿಸಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಸಮಾಜಕ್ಕೆ ದೀಪದಂತೆ ಬೆಳಕಾಗಬೇಕು, ಕರ್ನಾ ಟಕ ಕಾಲೇಜು ಅನೇಕ ಮಹಾನ್ ಸಾಧಕರನ್ನು ನಾಡಿಗೆ ನೀಡಿದ್ದು, ನೀವು ಕೂಡ ಅವರ ಸಾಲಿನಲ್ಲಿ ನಿಲ್ಲಬೇಕು ಎಂದು ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಿಸಿದರು. ಕೆಸಿಡಿಯಲ್ಲಿ ಅಧ್ಯಯನ ಮಾಡುವುದೇ ಒಂದು ವಿಭಿನ್ನ ಅನುಭವ ಎಂದು ತಮ್ಮ ವಿದ್ಯಾರ್ಥಿ ಜೀವನದ ಘಳಿಗೆಗಳನ್ನು ಸ್ಮರಸಿಕೊಂಡರು.
ಕೆಸಿಡಿಯ ಮರಾಠಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಅಮೃತ್ ಯಾರ್ದಿ ಮಾತನಾಡಿ ಗುರು ಇಲ್ಲದೆ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಇಂದಿನ ವಿದ್ಯಾರ್ಥಿ ಗಳು ಸದ್ಗುಣಗಳನ್ನು ಬೆಳಸಿಕೊಳ್ಳಬೇಕು. ಪ್ರಸ್ತುತ ವಿದ್ಯಾರ್ಥಿ ಗಳು ಶಿಕ್ಷಕರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎಂದ ಅವರು ನಿರಂತರ ಪ್ರಯತ್ನದಿಂದ ಯಶಸ್ಸು ಖಂಡಿತ ಸಾಧ್ಯ. ಶಿಕ್ಷಕರನ್ನು ಗೌರವಿಸಿ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.
ಕಳೆದ ತಿಂಗಳು ನಿವೃತ್ತಿ ಹೊಂದಿದ ಕೆಸಿಡಿಯ ಮರಾಠಿ ವಿಭಾಗದ ಡಾ. ಅಮೃತ್ ಯಾರ್ದಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಕೆಸಿಡಿಯ ಪಿ.ಯು.ಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಳನ್ನು ಹೂ ಗುಚ್ಛ ನೀಡಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿ ಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕೆಸಿಡಿಯ ಪ್ರಾಚಾರ್ಯ ಡಾ. ಬಿ.ಎಫ್.ಚಾಕಲಬ್ಬಿ ಮಾತನಾಡಿ ನಿಖರವಾದ ಗುರು ಉದ್ದೇಶದೊಂದಿಗೆ ಪ್ರಯತ್ನ ಮಾಡಬೇಕು ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಡಾ. ಎಸ್.ಅನ್ನಪೂರ್ಣ, ಡಾ.ವಿ. ಶಾರದಾ, ಡಾ. ಡಿ.ಬಿ ಕರಡೋಣಿ, ಡಾ. ವಾಮದೇವ ತಳವಾರ, ಡಾ. ಸಿ.ಬಿ. ಐನ್ನಳ್ಳಿ, ಡಾ. ಬಿ.ಪರ್ವತಾಲು ಡಾ. ನಾಗರಾಜ ದಳಪತಿ, ಪ್ರೊ. ಸದಾಶಿವ ಅರಕೇರಿ, ಡಾ. ಶರಣು ಮುಷ್ಠಿಗೇರಿ, ಡಾ. ನಾಗರಾಜ್ ಸೇರಿದಂತೆ ವಿವಿಧ ಪ್ರಾಧ್ಯಾಪಕರು ವಿದ್ಯಾರ್ಥಿ ಗಳು ಹಾಜರಿದ್ದರು.