ಕಾರ್ಖಾನೆಗೆ ಬೆಂಕಿ: ಮಾಲೀಕನಿಗೆ ಸಿದ್ದು ಕೊಣ್ಣೂರ 50 ಸಾವಿರ ಚೆಕ್ ವಿತರಣೆ
Factory fire: Siddu Konnur issues Rs 50,000 cheque to owner
ಮಹಾಲಿಂಗಪುರ, 01 : ಮಂಗಳವಾರ ಪಟ್ಟಣದ ಚಿಕ್ಕ ಗೃಹ ಕೈಗಾರಿಕಾ ಘಟಕದ ಸುಗಂಧ ಅಗರಬತ್ತಿ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಹೊತ್ತಿ ನಷ್ಟವಾಗಿರುವ ಸ್ಥಳಕ್ಕೆ ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಭೇಟಿ ನೀಡಿ, ಕಾರ್ಖಾನೆ ಮಾಲಿಕರಿಗೆ ನೈತಿಕ ಧೈರ್ಯ ತುಂಬಿ ತಮ್ಮ ಸ್ವಂತ ಖಾತೆಯ ನಗದು 50 ಸಾವಿರ ರೂಪಾಯಿಗಳ ಚೆಕ್ ನೀಡಿ ಓದಾರ್ಯ ಮೆರೆದರು.
ಈ ಘಟನೆಯಲ್ಲಿ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಸೇರಿ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಆಹುತಿಯಾಗಿ ಒಟ್ಟು 25 ಲಕ್ಷಗಳ ವರೆಗಿನ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಕಾರ್ಖಾನೆ ಮಾಲಿಕನ ದಯನೀಯ ಸ್ಥಿತಿ ಅರಿತು, ಪುನಃ ಘಟಕ ಆರಂಭಿಸಿ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ಹೆಚ್ಚಿನ ಅನುದಾನದವನ್ನು ಒದಗಿಸುವ ಭರವಸೆಯನ್ನೂ ಸಹ ನೀಡಿದರು.
ಈ ಭೇಟಿ ಸಮಯದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ಚನಬಸು ಹುರಕಡ್ಲಿ, ನಜೀರ್ ಅತ್ತಾರ, ನಜೀರ್ ಝಾರೆ, ಅರ್ಜುನ್ ದೊಡಮನಿ, ಮಹಾಲಿಂಗಪ್ಪ ಮಾಳಿ, ನಾನಾ ಜೋಷಿ, ಸುಭಾಸ ಬಂಡಿ, ರಾಜೇಶ್ ಭಾವಿಕಟ್ಟಿ, ಬಂಡಿವಡ್ಡರ, ಸಿದ್ದು ಭೂಸಣ್ಣವರ, ಉಪ್ಪಾರ, ಖಾಜಿ, ಹಣ್ಮಂತ ಬಂಡಿವಡ್ಡರ, ಹೆಸ್ಕಾಂ ಅಧಿಕಾರಿ ರಾಜೇಶ್ ಭಾಗೋಜಿ, ತಲಾಠಿ ಸೌರಭ ಮೇತ್ರಿ ಮತ್ತು ಗ್ರಾಮ ಸಹಾಯಕ ಲಾಲಸಾಬ ಸನದಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 