ಎಫ್.ಪಿ.ಎ.ಐ 16 ಕಾರ್ಯಕ್ರಮಗಳ ಆಯೋಜನೆ: ಸುಜಾತಾ ಎಸ್.ಆನಿಶೆಟ್ಟರ
FPAI 16 programs organized by: Sujatha S. Anishettara
ಧಾರವಾಡ 29: ನವ್ಹಂಬರ 25 ರಿಂದ ಡಿಸೆಂಬರ 10 ರ ವರೆಗೆ ರಂದು ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ, ಧಾರವಾಡ ಶಾಖೆಯು ಮಹಿಳಾ ಮೇಲಿನ ದೌಜನ್ಯ ನಿರ್ಮೂಲನೆಯ ಅಂತರಾಷ್ಟ್ರೀಯ ದಿನದ, ವಿಶ್ವ ಎಡ್ಸ್ ದಿನ ಮತ್ತು ಮಾನವ ಹಕ್ಕುಗಳ ದಿನದ ಅಂಗವಾಗಿ 16 ಕಾರ್ಯಕ್ರಮಗಳ ಆಯೋಜನೆಯನ್ನು ಮಹಿಳೆಯರಿಗೆ, ಪುರುಷರಿಗೆ, ಯುವಕರಿಗೆ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರ ಮೊದಲ ದಿನವಾದ ಮಹಿಳಾ ಮೇಲಿನ ದೌಜನ್ಯ ನಿರ್ಮೂಲನೆಯ ಅಂತರಾಷ್ಟ್ರೀಯ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಜನರಲ್ ಮ್ಯಾನೇಜರ ಸುಜಾತಾ ಆನಿಶೆಟ್ಟರ್ ಈ ವರ್ಷದ ಘೋಷಣೆ "ಡಿಜಿಟಲ್ ದುರುಪಯೋಗವನ್ನು ನಿಲ್ಲಿಸಲು ಒಟ್ಟಾಗಿ ಅಭಿಯಾನಕ್ಕೆ ಸೇರಿ" ಎಂಬುದಾಗಿದೆ. ಭಾರತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಮಾಣವು ಗಂಭೀರವಾಗಿದೆ. ಮಹಿಳೆಯರು ದೈಹಿಕವಾಗಿ, ಲೈಂಗಿಕವಾಗಿ, ಮಾನಸಿಕವಾಗಿ, ಮೌಖಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳಷ್ಷು ಹಿಂಸೆಗೆ ಒಳಗಾಗುತ್ತಾಳೆ. ವಿಶೇಷವಾಗಿ ಇಂದಿನ ದಿನಗಳಲ್ಲಿ ಡಿಜಿಟಲ್ ದುರುಪಯೋಗ ಮಾಡಿಕೊಂಡು ಚಿತ್ರ ಆಧಾರಿತ ನಿಂದನೆ, ಆತ್ಮೀಯರ ಚಿತ್ರಗಳ ಒಪ್ಪಿಗೆಯಿಲ್ಲದೆ ಹಂಚಿಕೆ, ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹಂಚಿಕೆ, ಆನ್‌ಲೈನ್ ದಲ್ಲಿ ಲೈಂಗಿಕ ಶೋಷಣೆ ಮತ್ತು ಆನ್‌ಲೈನ್ ದಲ್ಲಿ ಹಿಂಬಾಲಿಸುವದು ಅಥವಾ ಟ್ರ್ಯಾಕಿಂಗ್ ಮಾಡುವದರ ಮೂಲಕ ಮಹಿಳೆಯರ ಮೇಲಿನ ಹಿಂಸೆಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಯಲು ಮಹಿಳೆರಿಗೆ ಮತ್ತು ಹೆಣ್ಣು ಮಕ್ಕಳಿಗೆ ವಿಶೇಷವಾದ ತಿಳುವಳಿಕೆ, ಸಮಸ್ಯೆಗಳನ್ನು ಗುತಿಸುವ ಕೌಶಲ್ಯ ಮತ್ತು ಅದನ್ನು ಎದುರಿಸುವ ತರಬೇತಿ ನೀಡುವದು ಅತೀಅವಶ್ಯವಾಗಿದೆ ಈ ದೇಶೆಯಲ್ಲಿ ಎಫ್.ಪಿ.ಎ.ಐ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಅಧಿಕಾರಿ ಎನ್.ಎಫ್.ಮಡಿವಾಳರ ಮಾತನಾಡಿ ಮಹಿಳೆಯರ ಸಬಲಿಕರಣದಲ್ಲಿ ಪುರುಷರ ಪಾತ್ರ ಕೂಡಾ ಮಹತ್ವದ್ದು,್ದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಭಾಗವಹಿಸುತ್ತಿರುವದು ಅವರ ಸಹಬಾಗಿತ್ವವನ್ನು ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಅನೇಕ ಮಹಿಳೆಯರು ರಕ್ತಹೀನತೆಯಂತೆ ಗಂಭಿರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮಹಿಳೆಯರ ಆರೋಗ್ಯ ರಕ್ಷಣೆ, ಸಬಲಿಕಣವು ಅತ್ಯಂತ ಮಹತ್ವದ್ದು, ಸಬಲಿಕಣ ಹೊಂದಿದ ಮಹಿಳೆ ಸಮಾಜದ ಎಲ್ಲ ರಂಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೋಳ್ಳಲು ಸಾಧ್ಯ. ಸ್ವಯಂ ಉದ್ಯೋಗ, ಆತ್ಮವಿಶ್ವಾಸ, ಏಕತೆ ಮತ್ತು ಕೌಶಲ್ಯ ಅಭಿವೃದ್ಧಿ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಅದಕ್ಕಾಗಿ ಎಫ್.ಪಿ.ಎ.ಐ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು
ಕಾರ್ಯಕ್ರಮದಲ್ಲಿ ಇದೊಂರ್ ಶಾಖೆಯ ದೀಪಮಾಲಾ, ಡಾ. ಶಾರದಾ ಕಮತೂರ, ಡಾ.ನರ್ಸರಿನ್ ಹೊನ್ನಳ್ಳಿ ಹಾಗೂ ಸಿಬ್ಬಂದಿ ಸೇರಿದಂತೆ 150 ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಶಿಲ್ಪಾ ಅದರಗುಂಚಿ ಸ್ವಾಗತಿಸಿದರು, ಆಶಾ ಕೋರಿಶೆಟ್ಟರ್ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 