ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಾಧನೆಯ ಮೆಟ್ಟಿಲು: ಜಯಾನಂದ
ಮಹಾಲಿಂಗಪುರ: ವಿದ್ಯಾರ್ಥಿಗಳಿಗೆ ಪಠ್ಯದಿಂದ ಜ್ಞಾನ ಸಿಗಬಹುದು, ಪರಿಜ್ಞಾನ ಬರಬೇಕಾದರೆ ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದು ಬೆಳಗಾವಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಾಣಿಜ್ಯ ಸಂಭ್ರಮ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಸುಪ್ತಾವಸ್ಥೆಯ ಆಗಾಧ ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮ ಪೂರಕ ವೇದಿಕೆಯಾಗಬಹುದು ಎಂದರು. ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ ಉದ್ಘಾಟಿಸಿದರು. ಸುತ್ತಲಿನ 14 ಪ್ರೌಢಶಾಲೆಗಳಿಂದ 20ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳ ಪ್ರದರ್ಶನ ಜರುಗಿತು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಕ್ಕಿಮರಡಿಯ ಸರಕಾರಿ ಪ್ರೌಢಶಾಲೆ ಪ್ರಥಮ, ಕುಡಚಿಯ ಜಿ.ಯು.ಎಚ್ ತೋಟದ ಪ್ರೌಢಶಾಲೆ ಕುಡಚಿ ದ್ವಿತೀಯ, ಫಾಲಭಾವಿಯ ಸರಕಾರಿ ಪ್ರೌಢಶಾಲೆ ತೃತೀಯ, ಮುಗಳಖೋಡದ ಸರಕಾರಿ ಪ್ರೌಢಶಾಲೆ ಚತುರ್ಥ ಸ್ಥಾನ ಪಡೆದವು. ನೃತ್ಯ ಸ್ಪರ್ಧೆಯಲ್ಲಿ ಮಹಾಲಿಂಗಪುರ ಎಸ್‌ಸಿಪಿ ಪ್ರೌಢಶಾಲೆಯ ಆಯಿಷಾ ನದಾಫ್ ತಂಡ ಪ್ರಥಮ, ಢವಳೇಶ್ವರ ಸರಕಾರಿ ಪ್ರೌಢಶಾಲೆಯ ಪವಿತ್ರಾ ಮೇತ್ರಿ ತಂಡ ದ್ವಿತೀಯ, ಮಹಾಲಿಂಗಪುರ ಎಸ್.ಸಿ.ಪಿ ಪ್ರೌಢಶಾಲೆ ಯ ಮನೋಹರ ಹಳ್ಳಿ ತಂಡ ತೃತೀಯ ಸ್ಥಾನ ಪಡೆದರು. ಭಾಷಣ ಸ್ಪರ್ಧೆಯಲ್ಲಿ ರುಚಿತಾ ಚಿಲ್ಲಾಳಶೆಟ್ಟಿ (ಸಿ.ಕೆ.ಚಿಂಚಲಿ ಪ್ರೌಢಶಾಲೆ) ಪ್ರಥಮ, ಭಾಗ್ಯಶ್ರೀ ಹಿರೇಮಠ (ನಾಗರಾಳ ಪ್ರೌಢಶಾಲೆ) ದ್ವಿತೀಯ, ಸೃಷ್ಠಿ ಆಸಂಗಿ (ರನ್ನಬೆಳಗಲಿ ಪ್ರೌಢಶಾಲೆ) ತೃತೀಯ ಸ್ಥಾನ ಪಡೆದರು.
ಗಾಯನ ಸ್ಪರ್ಧೆಯಲ್ಲಿ ವಿಶಾಲ ಮುರಗೋಡ (ಜೆ.ಸಿ.ಪ್ರೌಢಶಾಲೆ) ಪ್ರಥಮ, ತೇಜಸ್ವಿನಿ ಪತ್ತಾರ(ನಾಗರಾಳ ಪ್ರೌಢಶಾಲೆ) ದ್ವಿತೀಯ, ವೈಷ್ಣವಿ ತೇರದಾಳ (ಸಿ.ಕೆ.ಚಿಂಚಲಿ) ತೃತೀಯ ಸ್ಥಾನ ಪಡೆದರು. ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ಪ್ರಥಮ ಸ್ಥಾನ ಪಡೆದ ಮಾದರಿಗೆ ಕೆಎಲ್‌ಇ ಸಂಸ್ಥೆಯ ವತಿಯಿಂದ 4 ಸಾವಿರ ರೂ. ಮತ್ತು ರೋಹಿಣಿ ಬಯೋಟೆಕ್ ಸಂಸ್ಥೆಯ ಡಾ.ಎಂ.ವೈ.ಕಟ್ಟಿ ವತಿಯಿಂದ 5 ಸಾವಿರ ರೂ. ವಿಶೇಷ ನಗದು ಬಹುಮಾನ ನೀಡಲಾಯಿತು. ನಾಗರಾಳದ ಸರಕಾರಿ ಪ್ರೌಢಶಾಲೆ ಜನರಲ್ ಚಾಂಪಿಯನಶಿಪ್ ಮತ್ತು ಮಹಾಲಿಂಗಪುರದ ಸಿ.ಕೆ.ಚಿಂಚಲಿ ಪ್ರೌಢಶಾಲೆ ರನ್ನರ್ ಅಪ್ ಸ್ಥಾನ ಪಡೆದವು.
ಮುಖ್ಯ ಅತಿಥಿಗಳಾಗಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಡಫಳಾಪೂರ, ರೋಹಿಣಿ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ವೈ.ಕಟ್ಟಿ, ಪ್ರಾಚಾರ್ಯರಾದ ಎಸ್.ಐ.ಕುಂದಗೋಳ, ಡಾ.ಕೆ.ಎಂ.ಅವರಾದಿ, ಎಲ್.ಬಿ.ತುಪ್ಪದ, ಬಿ.ಎನ್.ಅರಕೇರಿ, ಜಿ.ವೈ.ಕಿತ್ತೂರ, ಎಸ್.ಬಿ.ಮಲಾಬಾದಿ, ಧನಂಜಯ ಕುಲಕರ್ಣಿ, ಎಂ.ಬಿ.ತೇಲ್ಕರ, ಆರ್.ಎನ್.ಪಟ್ಟಣಶೆಟ್ಟಿ, ಜಿ.ಬಿ.ಜತ್ತಿ, ಎಸ್.ವಿ.ಸಿದ್ನಾಳ, ಆರ್.ಎಸ್.ಕಲ್ಲೋಳಿ, ಬಿ.ಬಿ.ಯಲ್ಲಟ್ಟಿ, ಬಿ.ಎನ್.ಹಂದಿಗುಂದ, ಬಿ.ಎಂ.ಸಿದ್ನಾಳ, ಆನಂದ ಬಿಪಾಟೀಲ, ಎ.ಬಿ.ಮುಂಗರವಾಡಿ, ಜೆ.ಪಿ.ಪೂಜಾರ ಇದ್ದರು.