ಹಾವೇರಿ15: ಹಾವೇರಿ ಜಿಲ್ಲೆಯಲ್ಲಿ ಕಳೆದ ಹಾಗೂ 2018-19ನೇ ಪ್ರಸಕ್ತ ಸಾಲಿನಲ್ಲಿ 6 ರಿಂದ 16 ವರ್ಷ ವಯೋಮಾನದ ಸುಮಾರು 1446 ವಿದ್ಯಾಥರ್ಿಗಳು ಶಾಲೆಯಿಂದ ಹೊರಗುಳಿದಿರುವಂತೆ ಕಂಡುಬಂದಿರುತ್ತದೆ. ಈ ಮಕ್ಕಳ ವಿಸ್ತೃತ ಮತ್ತು ಪರಿಣಾಮಕಾರಿ ಸಮೀಕ್ಷೆ ನಡೆಸಿ ಮುಖ್ಯ ವಾಹಿನಿಗೆ ಸೇರಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಶಾಲಾ ಮುಖ್ಯ ವಾಹಿನಿಗೆ ಬಂದ ಮಕ್ಕಳನ್ನು ಆನ್ ಲೈನ್ ಮೂಲಕ ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿ ಆಳವಡಿಸಿ ಜಾಡು ಹಿಡಿಯುವ ಪ್ರಕ್ರಿಯೆ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿದೆ. ಸಮೀಕ್ಷೆ ನಡೆಸುವ ಮೂಲಕ ಕಳೆದ ಶೈಕ್ಷಣಿಕ ಸಾಲಿನಲ್ಲಿ ದಾಖಲಾದ ವಿದ್ಯಾಥರ್ಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನೈಸಗರ್ಿಕವಾಗಿ ಪೂರ್ಣ ಪ್ರಮಾಣದಲ್ಲಿ ಮುಂದುವರೆಯದೆ ಇರುವ ವ್ಯತ್ಯಾಸದ ಯಾದಿಯೊಂದಿಗೆ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾಥರ್ಿಗಳ ಜಾಡುಹಿಡಿದು ಮುಖ್ಯವಾಹಿನಿಗೆ ಕರೆತರುವುದು ಅವಶ್ಯಕವಾಗಿದೆ.
ಈ ಸಮೀಕ್ಷೆಯನ್ನು ಶಿಕ್ಷಣ ಇಲಾಖೆ, ಕಾಮರ್ಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯತೆಯಲ್ಲಿ ನವಂಬರ್ 19 ರಂದು ಹಾವೇರಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಿ, ಪಂಚಾಯತ್ ಹಾಗೂ ವಾಡರ್್ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಆಶಾ ಕಾರ್ಯಕತರ್ೆಯರ ಸಹಯೋಗದೊಂದಿಗೆ ಶಾಲೆಯಿಂದ ಹೊರಗಳಿದ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವ ಅಭಿಯಾನ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಮೀಕ್ಷೆ ಕಾರ್ಯವು ನವಂಬರ್ 28ರವರೆಗೆ ಮುಂದುವರೆದು ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ತಂಡದೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಶಾಲೆಯಿಂದ ಹೊರಗಳಿದ ಮಕ್ಕಳನ್ನು ಗುರುತಿಸಲಾಗುವುದು. ಈ ಕಾರ್ಯಕ್ಕೆ ಚುನಾಯಿತ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಹಳೇ ವಿದ್ಯಾಥರ್ಿ ಸಂಘಟನೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.