ಈಗಿರುವ ಆಡಳಿತ ಸಮಿತಿಯನ್ನೇ 6 ತಿಂಗಳುಗಳಿಗೆ ವಿಸ್ತರಿಸಿ: ಸಿಂಗೆ ಆಗ್ರಹ

ಈಗಿರುವ ಆಡಳಿತ ಸಮಿತಿಯನ್ನೇ 6 ತಿಂಗಳುಗಳಿಗೆ ವಿಸ್ತರಿಸಿ: ಸಿಂಗೆ ಆಗ್ರಹ Extend the current administrative committee for 6 months: Singh demands


      ಸಿಂದಗಿ 24: ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯತಿಗಳಿಗೆ ಆಢಳಿತಾಧಿಕಾರಿಗಳನ್ನು ನೇಮಿಸುವಂತೆ ಉಲ್ಲೇಖಿತ ಪತ್ರದಲ್ಲಿ ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆದು ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ ಅಧಿನಿಯಮ 1993 ರ ಪ್ರಕರಣ 8 ಬಿ() ರನ್ವಯ ಈಗಿರುವ ಆಡಳಿತ ಸಮೀತಿಯನ್ನೇ, ನೂತನ ಆಡಳಿತ ಸಮೀತಿಗಾಗಿ ಮುಂದಿನ 6 ತಿಂಗಳುಗಳಿಗೆ ವಿಸ್ತರಿಸುವ ಮೂಲಕ ಪ್ರಜಾ ಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸಬೇಕೆಂದು ಗ್ರಾಪಂ ಅಧ್ಯಕ್ಷರ ಮಹಾ ಒಕ್ಕೂಟದ ಪರವಾಗಿ ದೇವರನಾವದಗಿ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಸಿಂಗೆ ಆಗ್ರಹಿಸಿದರು. 

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗ್ರಾಪಂ ಅಧ್ಯಕ್ಷರ ಮಹಾ ಒಕ್ಕೂಟ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೇದ 2 ವರ್ಷ್‌ಗಳೀಂದ 15 ನೇ ಹಣಕ/ಆಸು ಯೊಜನೆಯಡಿ ಒಂದು ಬಿಡಿಗಾಸು ಅನುದಾನ ಬಂದಿಲ್ಲ. ಅದೇ ಯೋಜನೆಯಡಿ ಕ್ರೀಯ/ಅ ಯೋಜನೆ ರೂಪಿಸಿ ಗ್ರಾಮಗಳ ನೈರ್ಮಲಿಕರಣ , ಕುಡಿಯುವ ನೀರು ಅಲ್ಲದೆ ಜನರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಅದ್ಯಕ್ಷರುಗಳ ಸಿಪ್ಪಾರಸ್ಸಿನ ಮೆರೆಗೆ ಸಾಲಸೂಲ ಮಾಡಿ ಅಧಿಕಾರ ನಡೆಸಲಾಗುತ್ತಿದೆ ಇದು ಅನುದಾನ ಬರದೇ ಅಧಿಕಾರ ಮೊಟಕು ಗೊಳಿಸಿದರೆ ಮೂಲಭೂತ ಸೌಕರ್ಯಗಳು ನಿಂತು ಹೋಗುವುದಲ್ಲದೆ ಗ್ರಾಪಂ ದುಸ್ತರ ಸ್ಥಿತಿ ಅನುಭವಿಸಬೇಕಾಗುತ್ತದೆ

          ಕಾರಣ 1990 ರ ದಶಕದಲ್ಲಿ ಗ್ರಾಮ ಪಂಚಾಯತಿಗಳ ಅವಧಿಯನ್ನು ರಾಜ್ಯ ಸರ್ಕಾರವು ವಿಸ್ತರಿಸಿದ್ದ ವಿಷಯವನ್ನು ಉದಾಹರಣೆಯಾಗಿ ಪರಿಗಣಿಸಿ  ಕರ್ನಾಟಕ ರಾಜ್ಯದ ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯತಿಗಳಿಗೆ ಈಗಿರುವ ಆಡಳಿತ ಮೀತಿಯನ್ನೆ ನೂತನ ಆಡಳಿತ ಸಮೀತಿಯಾಗಿ ಮುಂದಿನ 6 ತಿಂಗಳುಗಳಿಗೆ ವಿಸ್ತರಿಸಲು ಸಂವಿಧಾನದ ಅನುಚ್ಛೇದ 243-ಇ(1) ರ ಅನ್ವಯ ಯಾವುದೆ ಪಂಚಾಯತಿ ಪ್ರಸ್ತುತ ಜಾರಿಗೆ ಇರುವ ಯಾವುದೆ ಕಾನೂನಿನಡಿಯಲ್ಲಿ ಶೀಘ್ರದಲ್ಲಿಯೇ ವಿಸರ್ಜಿತವಾಗದಿದ್ದರೆ, ಮೊದಲ ಸಭೆಗೆ ನಿಗಧಿ ಪಡಿಸಿದ ದಿನಾಂಕದಿಂದ ಐದು ವರ್ಷಗಳ ಕಾಲ ಮುಂದು ವರೆಯುತ್ತದೆ. ಮತ್ತು ಹೆಚ್ಚಿನದಿಲ್ಲ ಎಂದಿರುತ್ತದೆ. 

       ಈ ಹಿಂದೆ 2020-25ನೇ ಸಾಲಿಗೆ ರಚಿತವಾಗಿದ್ದ ರಾಜ್ಯದ ಗ್ರಾಮ ಜನೇವರಿಯಿಂದ ಮಾರ್ಚ ತಿಂಗಳುಗಳಲ್ಲಿ ವಿವಿಧ ಪಂಚಾಯತಿಗಳ ಅವಧಿಯು 2026 ದಿನಾಂಕಗಳಂದು ಮುಕ್ತಾಯಗೊಳ್ಳುತ್ತದೆ. ರಾಜ್ಯ ಸರ್ಕಾರವು ನಿಗದಿತ ಅವಧಿಯೊಳಗೆ ಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳುವ ಬದಲು ಉಲ್ಲೇಖ 1 ರಲ್ಲಿ 2026-2031 ರವಧಿಗಾಗಿ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದು ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದ ವರೆಗೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ ಅಧಿನಿಯಮ 1993 ರ ಪ್ರಕರಣ 8() ರ ಅನ್ವಯ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ನಿರ್ದೇಶನ ನೀಡಿರುವುದು ವಿಷಾದನೀಯ ಎಂದರು. 

      ಗುಬ್ಬೇವಾಡ ಗ್ರಾಪಂ ಅದ್ಯಕ್ಷ ನಿತ್ಯಾನಂದ ಕಟ್ಟಿಮನಿ, ಮಲಗಾಣ ಗ್ರಾಮ ಅದ್ಯಕ್ಷ ಮೈಬುಬಪಟೇಲ ಜಂಬಗಿ, ಕೊರಳ್ಳಿ ಗ್ರಾಪಂ ಅದ್ಯಕ್ಷ ಪ್ರಕಾಶಗೌಡ ಪಾಟೀಲ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕೊಕಟನುರ ಗ್ರಾಪಂ ಅದ್ಯಕ್ಷ ಬಸವರಾಜ ಹರನಾಳ, ಬಮ್ಮನಳ್ಳಿ ಗ್ರಾಪಂ ಅಧ್ಯಕ್ಷ ಲವಾ ಸೊನ್ನ ಮಂಜುನಾಥ ಪಾಟೀಲ ಸೇರಿದಂತೆ ಅನೇಕರಿದ್ದರು.