ಮುಂಡಗೋಡಲ್ಲಿ ಗಾಳಿಯಲ್ಲಿ ತೂರಿಹೋದ ಅಬಕಾರಿ ನಿಯಮಗಳು! ಕೂಲ್ ಡ್ರೀಂಕ್ಸ್ ತರಹ ಎಣ್ಣೆ ವ್ಯಾಪಾರ! ಸಚಿನ ಕೊರವರ
ಮುಡಗೋಡ 01 : ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ, ರಾಜ್ಯದಲ್ಲಿ ಅತೀ ಹೆಚ್ಚು ತೆರಿಗೆ ತರುವ ವ್ಯಾಪಾರವು ಅಬಕಾರಿ ವ್ಯಾಪ್ತಿಯಲ್ಲಿಯೇ ಬರುವುದು! ಈ ರೀತಿ ಇದ್ದಾಗ ಆ ಇಲಾಖೆಯವರು ತುಂಬಾ ಶಿಸ್ತಿನಿಂದ ಕ್ರಮ ತೆಗೆದುಕೊಂಡು ಕೆಲಸ ಮಾಡಬೇಕಿದೆ. ಈಗ ಮುಂಡಗೋಡಿನಲ್ಲಿ ಮೂರುನಾಲ್ಕು ಬಾರ್ ಗಳಿವೆ. ಅವೆಲ್ಲವೂ ಕೂಡ ಕ್ಲಾಸ್-2 ಗೆ ಸೇರುವ ಬಾರ್ ಗಳು, ಬೋರ್ಡಿನಲ್ಲಿ ಸ್ಪಷ್ಟವಾಗಿ ಸಿ ಎಲ್-2 ಎಂದು ಎಲ್ಲಾ ಬಾರ್ ನ ಬೋರ್ಡ್ ಮೇಲೆ ನಮೂದಿಸಿದ್ದು ಕಾಣುತ್ತದೆ. ಆದರೆ ಈ ಬಾರ್ ಗಳೆಲ್ಲವೂ ಕೂಡ ನಿಯಮಾನುಸಾರ ಮದ್ಯ ಮಾರಾಟ ಮಾಡಲು ಅಷ್ಟೇ ಹಕ್ಕು ಹೊಂದಿವೆ ಅಲ್ಲಿ ಆಸನ ವ್ಯವಸ್ಥೆ ಇರಬಾರದೆಂಬ ಅಬಕಾರಿ ನಿಯಮವಿದೆ. ಆದರೆ ಇಲ್ಲಿ ಎಲ್ಲಾ ಬಾರ್ ಗಳಲ್ಲಿಯೂ ಸಿಟ್ಟಿಂಗ್ ವ್ಯವಸ್ಥೆಯಿದೆ ಅಲ್ಲದೇ ಬಾರ್ ಸಪ್ಲೈಯರ್ ಕೂಡ ಇದ್ದು ಟೇಬಲ್ ಸಪ್ಲೈ ನಡೆಯುತ್ತದೆ. ಆದರೆ ನಿಯಮಾನುಸಾರ ಇಂತಹ ಅಂಗಡಿಗಳಲ್ಲಿ ಕೇವಲ ಪಾರ್ಸೆಲ್ ಒಯ್ಯಬೇಕೆಂಬ ನಿಯಮವಿದೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ, ರೇಶನ್ ಸ್ಟಾಲ್, ಹೋಟೆಲ್ಲುಗಳಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದು ಹಳ್ಳಿಯ ಅಂಗಡಿಗಳು ಮಿನಿ ಬಾರ್ ಆಗಿ ಪರಿವರ್ತನೆಗೊಂಡಿವೆ. ಮದ್ಯಪಾನ ಸೇವಿಸಿ ಬೀದಿಯಲ್ಲಿ ತೂಗಾಡುವ ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕುಟುಂಬಗಳು ಬೀದಿಗೆ ಬಂದಿವೆ. ಶಾಲೆಯ ಪಕ್ಕದಲ್ಲಿ ಹಾಗೆಯೇ ಹಾಸ್ಟೆಲ್ಲುಗಳ ಪಕ್ಕದಲ್ಲಿಯೇ ಗ್ರಾಮಗಳಲ್ಲಿ ಹೆಂಡದ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ಮೇಲೆ ಕುಡಿತದ ವ್ಯಸನ ಅಂಟಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಹೈಸ್ಕೂಲು, ಕಾಲೇಜಿನ ಮಕ್ಕಳು ತಮ್ಮ ಶಾಲಾ-ಕಾಲೇಜಿನ ಪಕ್ಕದ ಅಂಗಡಿಯಲ್ಲಿ ಎಣ್ಣೆ ಸಿಗುವುದು ಗೊತ್ತಿರುವ ಕಾರಣ ಕ್ಲಾಸಿಗೆ ಚಕ್ಕರ್ ಹಾಕಿ ಅಂಗಡಿಗಳಲ್ಲಿರುವುದು ಗ್ರಾಮ ವ್ಯಾಪ್ತಿಯಲ್ಲಿ ಕಂಡು ಬರುತ್ತಿದೆ. ಪರವಾನಿಗೆ ಇಲ್ಲದೆ ಮನೆಗಳಲ್ಲಿ ಮದ್ಯ ಮಾರಾಟ ಮಾಡುವ ಮೂಲಕ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನ ನಡೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಪೆಟ್ಟಿ ಅಂಗಡಿಯಲ್ಲಿ ನಿಮ್ಮೂರಲ್ಲಿ ಏನೇನು ಮುಂಡಗೋಡಿನ ಪೆಟ್ಟಿ ಅಂಗಡಿಯಲ್ಲಿ ಬರೀ ಕೂಲ್ ಡ್ರಿಂಕ್ಸ್ ಅಲ್ಲ ಈಗ ಹಾಟ್ ಡ್ರಿಂಕ್ಸ್ ಕೂಡ ಸಿಗುತ್ತಿದೆ! ಹೌದು ಪೆಟ್ಟಿ ಅಂಗಡಿಗಳು ಮಿನಿ ಬಾರ್ ಆಗಿದ್ದಾವೆ, ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದ್ಧು ಮನೆಗೊಂದರಂತೆ ಹಳ್ಳಿಯಲ್ಲಿ ಅಕ್ರಮ ಮದ್ಯ ಸರಬರಾಜು ನಡೆಯುತ್ತಿದೆ. ದಿನವೊಂದಕ್ಕೆ ಸುಮಾರು 500 ಪೆಟ್ ಗಳು ಹಳ್ಳಿಗಳಲ್ಲಿ ಸರಬರಾಜಾಗುತ್ತಿದೆ. ರಾಜಾ ರೋಗವಾಗಿ ಮುಂಡಗೋಡಿಂದ ಕಾರ್ ನಲ್ಲಿ ಮದ್ಯ ಕೊಂಡೊಯ್ದು ಹಳ್ಳಿ ಹಳ್ಳಿಗೆ ಸಾಗಿಸಲಾಗುತ್ತಿದೆ. ಶಾಲಾ ಕಾಲೇಜು ಸುತ್ತ ಮುತ್ತ ಅವರಣದಲ್ಲಿ ಮದ್ಯಪಾನ..? ಪಟ್ಟಣ ಹಾಗೂ ಗ್ರಾಮೀಣದಲ್ಲಿ ಅದರಲ್ಲೂ ಶಾಲೆ-ಕಾಲೇಜುಗಳ ಅಕ್ಕ ಪಕ್ಕದಲ್ಲಿಯೇ ವ್ಯಾಪಕವಾಗಿ ಮದ್ಯ ಮಾರಾಟ ನಡೆದಿದ್ದು 18 ವರ್ಷ ಕೆಳಗಿನ ಮಕ್ಕಳೂ ಕುಡಿತದ ದಾಸರಾಗಲು ಈ ವ್ಯವಸ್ಥೆ ಕಾರಣವಾಗುತ್ತಿದೆ. ದಿನಕ್ಕೆ ಮದ್ಯಪಾನ ಮಾರಾಟ. ಏನಿಲ್ಲವೆಂದರೂ ಒಂದು ದಿನಕ್ಕೆ ಒಂದು ಅಂಗಡಿಯಿಂದ 50-60 ಪೆಟ್ ಗಳು ಮಾರಾಟವಾಗುತ್ತಿವೆ, ಶಾಲಾ ಮಕ್ಕಳು ಹಾಗೂ ಮಹಿಳೆಯರು ಈ ಭಾಗದಲ್ಲಿ ಓಡಾಡದಷ್ಟು ಕುಡುಕರ ಹಾವಳಿ ಹೆಚ್ಚಾಗಿದೆ. ಪಟ್ಟಣ ಹಾಗೂ ಗ್ರಾಮೀಣ ್ಣೌಷ_ ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ನ್ಯಾಸರ್ಗಿ ಸನವಳ್ಳಿ, ಬಾಚಣಕಿ, , ಹಾಗೂ ಮುಂಡಗೋಡಿನ ಕಬ್ಬಾರಗಟ್ಟಿ ಗಾಂಧಿನಗರ, ಆನಂದನಗರ ಹಾಗೆಯೇ ಶಾಲೆಯ ಅಕ್ಕ ಪಕ್ಕದಲ್ಲಿ ಮದ್ಯ ಮಾರಾಟದ ಗೂಡಗಂಡಿಗಳು ತಲೆ ಎತ್ತಿವೆ.ಇದಕ್ಯಾವುದೇ ಲೈಸೆನ್ಸೂ ಸಹ ಇಲ್ಲ ಹಾಗೆಯೇ ಸಮಯದ ಮಿತಿಯೂ ಇಲ್ಲ ಬೆಳಿಗ್ಗೆ 6:00 ಇಂದಲೇ ಶುರುವಾಗುವ ಮದ್ಯ ಮಾರಾಟ ಕೊನೆಗೊಳ್ಳುವುದು ರಾತ್ರಿ 12 ಅಥವಾ 1 ಕ್ಕೆ ಈ ರೀತಿ ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿರುವ ಅಕ್ರಮ ಮದ್ಯ ವ್ಯಾಪಾರಿಗಳನ್ನು ಹಿಡಿದು ಹಾಕದೇ ಅವರ ಜಾಲ ನಾಯಿಕೊಡೆಯಂತೆ ಬೆಳೆಯಲು ಬಿಟ್ಟಿದ್ದು ವ್ಯವಸ್ಥೆಯ ಲೋಪ. ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣು ತೆರೆದು ಈ ದುಸ್ಥಿತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.