ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ವಶ
Excise officials raid: Illegal liquor seized
ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ವಶ
ಧಾರವಾಡ 11: ದಿ. 09-09-2025 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಧಾರವಾಡ ಶಹರದ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿರುವಾಗ ಧಾರವಾಡ ಶಹರದ ಗಾಂಧಿಚೌಕ ವ್ಯಾಪ್ತಿಯ ವಾರ್ಡ ನಂ: 11ರ ಕುಂಬಾರ ಓಣಿಯಲ್ಲಿರುವ ಬಸವಣ್ಣೆಪ್ಪ ತಂದೆ ಮಹಾದೇವಪ್ಪ ಕುಂಬಾರ ಇವರಿಗೆ ಸೇರಿದ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಮಿಲಿಟರಿ ಮದ್ಯವನ್ನು ಮಾರಾಟದ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದಾಗಿ ಬಂದ ಮಾಹಿತಿಯನ್ನಾಧರಿಸಿ ಸದರಿಯವರ ಮನೆಯ ಮೇಲೆ ಅಬಕಾರಿ ದಾಳಿಯನ್ನು ನಡೆಸಲಾಗಿ ಬೇಕಾಯ್ದೆಸೀರ ರೀತಿಯಿಂದ “ಈಠ ಆಜಜಿಜಟಿಛಿಜ ಕಜಢಿಠಟಿಜಟ ಓಟಿಟಥಿ” ಎಂದು ನಮೂದಿರುವ ವಿವಿಧ ಬ್ರ್ಯಂಡಿನ ಒಟ್ಟು 75.750 ಲೀ ಮಿಲಿಟರಿ ಮದ್ಯವನ್ನು ಹೊಂದಿ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು ಈ ಕುರಿತು ಶಿವಾನಂದ ರಾಹುತರ, ಅಬಕಾರಿ ನೀರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ ಧಾರವಾಡ ಜಿಲ್ಲೆ ಇವರು ಪ್ರಕರಣ ಸಂಖ್ಯೆ : 25/2025-26 ದಾಖಲಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಮದ್ಯದ ಮೌಲ್ಯ ರೂ. 2,07,930/- ಎಂದು ಅಂದಾಜಿಸಲಾಗಿರುತ್ತದೆ. ಸದರಿ ದಾಳಿಯನ್ನು ಡಾ: ವೈ ಮಂಜುನಾಥ, ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಹಾಗೂ ಎಫ್ ಹೆಚ್ ಚಲವಾದಿ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಬೆಳಗಾವಿ ವಿಭಾಗ ಹಾಗೂ ರಮೇಶಕುಮಾರ ಹೆಚ್, ಅಬಕಾರಿ ಉಪ ಆಯುಕ್ತರು, ಧಾರವಾಡ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನೀರೀಕ್ಷಕರಾದ ಶಿವಾನಂದ ರಾಹುತರ ಹಾಗೂ ಸಿಬ್ಬಂದಿಗಳಾದ ಶಿವಾನಂದ ಅರವಳದ, ಅಬಕಾರಿ ಪೇದೆ ಹಾಗೂ ವಾಹನ ಚಾಲಕ ರವಿ ಹಳ್ಯಾಳ ಇವರುಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 