ಧಾರವಾಡ 18: ಗೋವಾ ಮಾಪುಸಾದ ಪೆಡ್ಡೆಂ ಒಳಾಂಗಣ ಕ್ರೀಡಾಂಗಣದಲ್ಲಿ ಡಿ. 12ರಿಂದ 14ರವರೆಗೆ ಜರುಗಿದ 2ನೇ ಅಖಿಲ ಭಾರತ ಮುಕ್ತ ರಾಷ್ಟ್ರಮಟ್ಟದ ಟೇಕ್ವಾಂಡೋ ಚಾಂಪಿಯನ್ಶಿಪ್ -2019ರಲ್ಲಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿ ಗಳು ಭಾಗವಹಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.
ಬಾಲಕೀಯರ ಕೆಡೆಟ್ ವಿಭಾಗದಲ್ಲಿ ಪವನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಅದಿತಿ ಕ್ಷಾತ್ರತೇಜ ಬಂಗಾರದ ಪದಕ ಪಡೆದಿರುತ್ತಾಳೆ
ಬಾಲಕಿಯರ ಸೀನಿಯರ್ ವಿಭಾಗದಲ್ಲಿ ಕರ್ನಾ ಟಕ ವಿಜ್ಞಾನ ಮಹಾವಿದ್ಯಾಲಯದ ಸುಷ್ಮಾ ಬಳ್ಳಾರಿ ಬೆಳ್ಳಿ ಪದಕ, ಕಾವೇರಿ ಹಳವುರ ಕಂಚಿನ ಪದಕ ಪಡೆದಿರುತ್ತಾರೆ.
ಬಾಲಕರ ಸಬ್-ಜೂನಿಯರ್ ವಿಭಾಗದಲ್ಲಿ ಕೆಲಗೇರಿಯ ಜೆ ಎಸ್ ಎಸ್ ಪಬ್ಲಿಕ್ ಶಾಲೆಯ ಅಮೇಯ ಪಾಟೀಲ ಕಂಚಿನ ಪದಕ ಪಡೆದಿರುತ್ತಾನೆ.
ಬಾಲಕರ ಕೆಡೆಟ್ ವಿಭಾಗದದಲ್ಲಿ ಪವನ ಆಂಗ್ಲ ಮಾಧ್ಯಮ ಶಾಲೆಯ ಸಾಯಿಪ್ರಸಾದ ಕ್ಷಾತ್ರತೇಜ ಕಂಚಿನ ಪದಕ, ಸುಪ್ರಿತ ಎಸ್ ತೀಟೆ ಕಂಚಿನ ಪದಕ ಪಡೆದಿದ್ದಾರೆ.
ಬಾಲಕರ ಸೀನಿಯರ್ ವಿಭಾಗದಲ್ಲಿ ಬನಶಂಕರಿ ಗುಬ್ಬಿ ಕಾಲೇಜನ ಕೇತನ್ ಹಜೇರಿ ಕಂಚಿನ ಪದಕ ಪಡೆದಿದ್ದಾರೆ.
ಮಾನಸ ಗಂಗೋತ್ರಿ ಶಾಲೆಯ ಮಹಮ್ಮದ ಸಾದ ಕೋಳಚಿ, ಮಹಮ್ಮದ ಜಾಯೇದ ಕೋಳಚಿ, ಕೆ.ಎಲ್.ಇ ಸ್ಕೂಲ್-ರಾಯಪೂರ ಆಕೀಲ್ ಸೋನ್ಸ, ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ನ ಚಿನ್ಮಯಿ ಭಾಪ್ರಿ, ಪವನ ಆಂಗ್ಲ ಮಾಧ್ಯಮ ಶಾಲೆಯ ತನ್ವಿ ಘೊಡ್ಕೆ, ಸಿ.ಎಸ್.ಐ ಕಾಲೇಜನ ಮಹಮ್ಮದ್ ನಬಿ, ಕರ್ನಾ ಟಕ ಕಲಾ ಮಹಾವಿದ್ಯಾಲಯ ದ ಅಶುತೋಶ್ ಮೀತ್ಬಾವಕರ, ಸಚಿನ್ ಕೊಮಾರ ಇವರುಗಳು ಭಾಗವಹಿಸಿರುತ್ತಾರೆ.
ಬಿ.ಟಿ.ಎ ಡಿಪಾರ್ಟಮೆಂಟ್ ಆಪ್ ಕರ್ನಾ ಟಕ ಕಲಾ ಮಹಾವಿದ್ಯಾಲಯ ಸಮರ್ಥ ಥಿಟೆ, ಮಂಜುನಾಥೇಶ್ವರ ಸ್ಕೂಲನ ಸಹನಾ ಗೊಕಾವಿ ಇವರುಗಳು ಕ್ರೀಡಾ ನಿಣರ್ಾಯಕರಾಗಿ ಭಾಗವಹಿಸಿರುತ್ತಾರೆ.
ಇವರೊಂದಿಗೆ ತಂಡದ ತರಬೇತುದಾರರಾಗಿ ಆನಂದ ಕಿಟದಾಳ ತಂಡದ ವ್ಯವಸ್ಥಾಪಕರಾಗಿ ಶೋಭಾ ರಸಾಳಕರ ಕೂಡ ಪ್ರಯಾಣಿಸಿದ್ದರು.
ಈ ಸಾಧನೆಯನ್ನು ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಆನಂದ ಕುಲಕರ್ಣಿ , ಉಪಾಧ್ಯಕ್ಷ ಬಿ.ಎಸ್.ತಾಳಿಕೋಟಿ, ಜಿಲ್ಲಾ ಓಲಂಪಿಕ್ ಸಂಸ್ಥೆಯ ಖಜಾಂಚಿ ಎಸ್.ಎಸ್. ಅಗಡಿ, ಜಿಲ್ಲಾ ಟೆಕ್ವಾಂಡೊ ಸಂಸ್ಥೆಯ ಹಿರಿಯ ತರಬೇತುದಾರರು ಹಾಗೂ ಕಾರ್ಯದರ್ಶಿ ಅಂಜಲಿ ಪರಪ್ಪ, ರಾಷ್ಟ್ರೀಯ ತರಬೇತುದಾರ ಪರಪ್ಪ ಎಸ್. ಕೆ ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.