ಪ್ರತಿಯೊಬ್ಬರು ಸಂವಿಧಾನ ಗೌರವ ನೀಡಬೇಕು: ಎಸ್. ಡಿ. ಮುಡೆಣ್ಣವರ
ಮುಂಡಗೋಡ 27 : ಪಟ್ಟಣದ ಆದಿಜಾಂಬ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 75ನೇ ಸಂವಿಧಾನ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪ್ರತಿಜ್ಞೆ ಮಾಡುವ ಮೂಲಕ ಸಂವಿಧಾನ ಆಚರಣೆ ಮಾಡಿದರು. ಎಸ್. ಡಿ. ಮುಡೆಣ್ಣವರ ಮಾತನಾಡುತ್ತಾ ಇಂದು ನಾವೆಲ್ಲರು ಸಂವಿಧಾನದ ಮಹತ್ವ ತಿಳಿಯಬೇಕಾಗಿದೆ ಪ್ರತಿಯೊಬ್ಬರು ಸಂವಿಧಾನ ಗೌರವ ನೀಡಬೇಕು ಮತ್ತು ಅದರ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಡಾ. ಬಿ. ಆರ್. ಅಂಬೇಡ್ಕರ್ ರವರ ತ್ಯಾಗದ ಮತ್ತು ಪರಿಶ್ರಮದಿಂದ ಇಂದು ಲಿಖಿತವಾದ ಮತ್ತು ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂವಿಧಾನ ಹೊಂದಿದ ರಾಷ್ಟವಾಗಿದೆ.ರಾಷ್ಟ್ರವನ್ನು ಪ್ರೀತಿಸುವ ಜೊತೆಯಲ್ಲಿ ಸಂವಿಧಾನವನ್ನು ಚನ್ನಾಗಿ ಓದಿ ಅರ್ಥೈಸಿ ಅದರ ಮಹತ್ವ ತಿಳಿಯಬೇಕು ಹಾಗೂ ಸಂವಿಧಾನ ಪೀಠಿಕೆ ಅತ್ಯಂತ ಸಮಾನತೆಯ ಸೂತ್ರವನ್ನು ತಿಳಿಸುತ್ತದೆ. ಪೀಠಿಕೆ ಇಡಿ ಸಂವಿಧಾನದ ಅಶಯವನ್ನು ಎತ್ತಿಹಿಡಿಯುತ್ತದೆ. ಎಲ್ಲರೂ ಒಂದಾಗಿ ಜಾತ್ಯತೀತ ಭಾವನೆಯಲ್ಲಿ ಬಾಳಯೋಣ ಎಂದು ಎಸ್. ಡಿ. ಮುಡೆಣ್ಣವರ ಹೇಳಿದರು ಆರ್. ಎಸ್. ಅಕ್ಕಿವಳ್ಳಿ ಪ್ರತಿಜ್ಞೆ ಭೂದಿಸಿದರು. ಎಂ. ಎಸ್. ಪಾಟೀಲ್, ಪಿ. ಸಿ. ಐನಪುರ, ಆರ್. ಬಿ. ಚವ್ಹಾಣ, ಶ್ರೀ. ಎಸ್. ಸಿ. ಪಾಟೀಲ, ಎಂ. ಕೆ. ಕೊಂಡೋಜಿ ಹಾಗೂ ಮುಂತಾದವರು ಇದ್ದರು.