ಬ್ಯಾಂಕಿನ ಏಳ್ಗೆಗೆ ಪ್ರತಿಯೊಬ್ಬರು ಸಹಕರಿಸಬೇಕು: ವಿರೇಶ ಎಸ್ ಕಸಬೇಗೌಡರ
Everyone should cooperate for the development of the bank: Viresh S Kasabegouda
ವಿಜಯಪುರ 08: ಶ್ರೀ ಸಿದ್ಧೇಶ್ವರ ಕೊ. ಆಫ್. ಬ್ಯಾಂಕಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ ಹಾಲಿ ಆಡಳಿತ ಮಂಡಳಿಯ ಹಾಗೂ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಉಪಾಧ್ಯಕ್ಷರಿ ಹಾಗೂ ನಿರ್ದೇಶಕ ಮಂಡಳಿಯವರಿಗೆ ಶ್ರೀ ಸಿದ್ಧೇಶ್ವರ ಬ್ಯಾಂಕಿನ ಫಿಗ್ಮಿ ಸಂಗ್ರಹಕಾರ ಅಧ್ಯಕ್ಷರಾದ ವಿರೇಶ ಎಸ್. ಕಸಬೇಗೌಡರು ಹಾಗೂ ಉಳಿದ ಎಲ್ಲಾ ಶಾಖೆಯ ಫಿಗ್ಮಿ ಸಂಗ್ರಹಕಾರರು ಕೂಡಿಕೊಂಡು ಹಾಲಿ ಆಡಳಿತ ಮಂಡಳಿಗೆ ಸನ್ಮಾನಿಸಿ ಗೌರವಿಸಿ ಸಿಹಿ ವಿತರಿಸಿ ಸಂಭ್ರಮ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರ ಸಂಘದ ಅಧ್ಯಕ್ಷರಾದ ವಿರೇಶ ಕಸಬೇಗೌಡರ ಮಾತನಾಡಿ, ಪಿಗ್ಮಿ ಸಂಗ್ರಹಾಕರಿಗೆ ಪ್ರೋತ್ಸಾಹ ಕೊಡಿ ಅವರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ದೇಶಕ ಮಂಡಳಿ ಮುಂದಾಗಬೇಕು. ಬ್ಯಾಂಕಿನ ಏಳ್ಗೆಗೆ ಮುಖ್ಯ ಕಾರಣೀಕರ್ತರು ಪಿಗ್ಮಿ ಸಂಗ್ರಹಕಾರರಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಬ್ಯಾಂಕಿನ ಏಳ್ಗೆಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ನಿದೇಶಕರಾದ ಗುರು ಗಚ್ಚಿನಮಠ, ವೈಜನಾಥ ಕರ್ೂರಮಠ, ಶ್ರೀ ಹರೀಶಗೌಡ ಎಸ್. ಪಾಟೀಲ, ರಮೇಶ ಬಿದನೂರ, ವಿಶ್ವನಾಥ ಮಸಬಿನಾಳ, ಗಚ್ಚಿನಕಟ್ಟಿ, ಡಾ. ಸಂಜು ಮುಳವಾಡ, ಆರ್.ಎಂ. ಪಾಟೀಲ ಸೇರಿದಂತೆ ಪಿಗ್ಮಿ ಸಂಗ್ರಹಾಕಾರರಾದ ಬಸವರಾಜ ಬ್ಯಾಳಿ, ಬಸವರಾಜ ಯಾಳವಾರ, ಎ.ಬಿ.ಮಹೇಂದ್ರಕರ, ಎನ್.ಎಂ. ಮೋಟಗಿ, ಪಿ.ಬಿ.ಕೊಪ್ಪದ, ಅಡಕಿ, ಕೊಂಡಗೂಳಿ, ಪಿ.ಎಸ್.ದೇವರ, ನೀಲಕಠಂ ಪೂಜಾರಿ ಸೇರಿದಂತೆ ಬ್ಯಾಂಕಿನ ಎಲ್ಲ ನಿರ್ದೇಶಕ ಮಂಡಳಿಯವರು ಉಪಸ್ಥಿತರಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 