ಲೋಕದರ್ಶನ ವರದಿ
ಕಾರವಾರ, 1: ತಂಬಾಕು ಸೇವನೆಯಿಂದ ಅನೇಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯು ತಂಬಾಕು ನಿಷೇಧಕ್ಕಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸಾರ್ವಜನಿಕರು ಇದರ ಬಗ್ಗೆ ಗಮನಕೊಡಬೇಕಾಗಿದೆ. ಆದ್ದರಿಂದ ಎಲ್ಲರ ಪರಸ್ಪರ ಸಹಕಾರದಿಂದ ತಂಬಾಕು ಮುಕ್ತ ವಾತಾವರಣವನ್ನು ನಿರ್ಮಾ ಣ ಮಾಡಲು ಪ್ರಯತ್ನಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಜಿ.ಎನ್.ಅಶೋಕ ಕುಮಾರ ಅಭಿಪ್ರಾಯ ವ್ಯಕ್ತ ಪಡಿಸಿದರು. ಕಲ್ಲೂರು ಅಝಾರ್ ಯುವ್ತ್ ಕ್ಲಬ್ ಮತ್ತು ಕಲ್ಲೂರು ಎಜುಕೇಶನ್ ಟ್ರಸ್ಟ್ ಡಿಎಚ್ಓ ಚೇಂಬರ್ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಥಿಯಾಗಿ ಮಾತನಾಡಿದ ವಿ.ಎಮ್.ಹೆಗಡೆ ತಂಬಾಕು ಸೇವನೆಯಲ್ಲಿ ಯುವ ಪೀಳಿಗೆ ಹಾಗೂ ದಿನಗೂಲಿ ಕಾಮರ್ಿಕರು ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಧೂಮಪಾನಕ್ಕಿಂತ ಗುಟಕಾ, ತಂಬಾಕು ಸೇವನೆ ಹೆಚ್ಚಾಗಿ ಆಗುತ್ತದೆ. ಆರೋಗ್ಯ ಇಲಾಖೆಯು ನಿಷೇಧಕ್ಕಾಗಿ ಹೆಚ್ಚು ಒತ್ತಡವನ್ನು ಹಾಕಬೇಕಾಗಿದೆ. ಇದರ ಕುರಿತು ನಾವೆಲ್ಲರೂ ಸೇರಿ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್ ಮಾತನಾಡಿ ಹೊಟ್ಟೆಪಾಡಿಗಾಗಿ ಕೆಲವರು ತಂಬಾಕನ್ನು ಬೆಳೆಸುತ್ತಾರೆ. ಎಲ್ಲರೂ ಸೇರಿ ತಂಬಾಕು ಬೆಳೆಯದಂತೆ ತಡೆದರೆ ತಂಬಾಕು ಸೇವನೆ ಕಡಿಮೆ ಯಾಗಬಹುದು ಎಂದು ಹೇಳಿದರು.
ಪ್ರಾರಂಭದಲ್ಲಿ ಫೈರೋಜಾ ಬೇಗಂ ಶೇಖ್ ಪ್ರಾಸ್ತವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕ್ಲಬ್ನ ಸದಸ್ಯ ಮೊಹಮ್ಮದ್ ಅಸಿಫ್ ಶೇಖ್ ವಂದಿಸಿದರು. ಈ ಸಂದರ್ಭದಲ್ಲಿ ಸುಪ್ರಿಡೆಂಟ್ ಸುಭಾಷ್ ಗಾಂವ್ಕಾರ್, ಎಸ್.ಆರ್.ಪಾವಸ್ಕರ್, ಸಹಾಯಕ ಆಡಳಿತಾಧಿಕಾರಿ ಶಿವಗಾನಾಯ್ಕ ಜಿ.ಎ, ಶಶಿಕಲಾ ಜಿ.ನಾಯ್ಕ, ಸಮನ್ವಾಧಿಕಾರಿ ಪ್ರವೀಣ ಫಾಯದೆ, ತಂಬಾಕು ಸಲಹೆಗಾರ ಪ್ರೇಮಕುಮಾರ್, ಡೆಟಾ ಮೆನೆಜರ್ ಗುರುಪ್ರಸಾದ್, ಗೋರೆಸಾಬ್ ನದಾಫ್, ಕ್ಲಬ್ನ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.