ಧಾರವಾಡ 12:ಭಾರತೀಯ ಸಂವಿಧಾನವು ಜಾಗತಿಕವಾಗಿ ವಾಸ್ತವಿಕ ನೆಲೆಗಟ್ಟಿನ ಅಂಶಗಳನ್ನು ಒಳಗೊಂಡಿರುವುದರಿಂದ ಭಾರತೀಯ ಸಂವಿಧಾನವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಗಿದೆ ಎಂದು ಕನರ್ಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂತರ್ಿ ಹೆಚ್.ಎನ್ ನಾಗಮೋಹನ್ದಾಸ್ ಅಭಿಪ್ರಾಯಪಟ್ಟರು.
ಅವರು ಕನರ್ಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಕವಿವಿಯ ಎನ್.ಎಸ್.ಎಸ್ ಯೋಜನಾ ಕೋಶ, ರಾಜ್ಯ ಸರಕಾರದ ಎನ್.ಎಸ್.ಎಸ್ ಕೋಶ ಹಾಗೂ ಸಹಯಾನ ಕೆರೆಕೋಣ ಮತ್ತು ಸಮುದಾಯ ಕನರ್ಾಟಕ ಇವರ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಚಾರ ಅಭಿಯಾನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂವಿಧಾನವು ದೇಶದ ಎಲ್ಲ ಸಮುದಾಯದ ಜನರಿಗೆ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಹಕ್ಕುಗಳನ್ನು ನೀಡಿದ್ದು, ಪ್ರತಿಯೊಬ್ಬ ಭಾರತೀಯನು ಜಾತಿ, ಮತ ಮತ್ತು ಪಂಥಗಳ ಭೇದವಿಲ್ಲದೆ ಈ ಹಕ್ಕುಗಳನ್ನು ಅನುಭವಿಸಲು ಅರ್ಹನಾಗಿದ್ದು, ಇಂದು ಪ್ರತಿಯೊಬ್ಬ ಭಾರತದ ನಾಗರಿಕನಿಗೆ ಸಂವಿಧಾನ ಅಧ್ಯಯನ ಮತ್ತು ಓದು ಬಹಳ ಅಗತ್ಯ ಎಂದರು.
ಬೆಂಗಳೂರಿನ ಸಂವಿಧಾನ ಓದು ಅಭಿಯಾನದ ನೋಡಲ್ ಅಧಿಕಾರಿ ಡಾ. ವಿಠ್ಠಲ ಭಂಡಾರಿ ಮಾತನಾಡಿ ದೇಶವು ಪ್ರಗತಿಯಾಗಲು ಸಂವಿಧಾನದ ಓದು ಬಹಳ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂದು ಯುವ ಜನತೆಗೆ ಸಂವಿಧಾನದ ಮಹತ್ವವನ್ನು ತಿಳಿಸಲು ಈ ಅಭಿಯಾನವನ್ನು ಸರಕಾರವು ಆಯೋಜಿಸಿದೆ ಎಂದರು.
ಕವಿವಿ ಕುಲಸಚಿವ ಪ್ರೊ. ಸಿ.ಬಿ. ಹೊನ್ನು ಸಿದ್ದಾರ್ಥ ಮಾತನಾಡಿ ಭಾರತೀಯ ಸಂವಿಧಾನದ ಕುರಿತು ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳುವದು ಅವಶ್ಯಕವಾಗಿರುವುದರಿಂದ ಜನರಿಗೆ ತಮ್ಮ ಜಾತಿ, ಧರ್ಮ ಮೌಢ್ಯತೆಗಳನ್ನು ಹೋಗಲಾಡಿಸಲು ಸಂವಿಧಾನದಿಂದ ಸಹಾಯಕವಾಗಲಿದೆ ಎಂದ ಅವರು ಸಂವಿಧಾನದ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ ಎಂದರು.
ಕವಿವಿ ಪ್ರಭಾರ ಕುಲಪತಿಗಳಾದ ಪ್ರೊ. ಎ.ಎಸ್.ಶಿರಾಳಶೆಟ್ಟಿ ಮಾತನಾಡಿ ಭಾರತದಲ್ಲಿರುವ ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಮೂಲ ಆಶಯಗಳನ್ನು ತಿಳಿದು ನಡೆದರೆ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ಸಾಧ್ಯ ಎಂದ ಅವರು ಸಂವಿಧಾನದ ಮೂಲ ಆಶಯಗಳನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಸಂವಿಧಾನದ ಮಹತ್ವವನ್ನು ತಿಳಿಸುವದು ಇಂದಿನ ಅವಶ್ಯಕವಾಗಿದೆ ಎಂದರು.
ಕವಿವಿ ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ.ದಳಪತಿ, ಡಾ. ವಿಠ್ಠಲ ಭಂಡಾರಿ, ಪ್ರೊ. ಎಸ್. ಬಿ. ಸಂಗಮ್ಮನವರ ಪ್ರೊ. ಎಸ್.ಬಿ ನ್ಯಾಮತಿ, ಡಾ. ಎಮ್.ಎಸ್.ಹುಲಗೂರ್, ಡಾ. ಪಂಪಾಪತಿ ಈಡಗಲ್ ಪ್ರೊ. ಶಿವಕುಮಾರ ಹಿರೇಮಠ, ಪ್ರೊ. ಚೈತನ್ಯ ಕಿತ್ತೂರ, ಪ್ರೊ. ಲತಾ ಕಿಲ್ಲೇದಾರ, ಪ್ರೊ. ಝಕಿಯಾ ಸೌದಾಗರ್, ಡಾ. ಬಿ.ಎಸ್.ಭಜಂತ್ರಿ, ಡಾ. ಎಸ್.ಎ.ಕೊಳೂರ ಸೇರಿದಂತೆ ವಿದ್ಯಾಥರ್ಿಗಳು ಪ್ರಾಧ್ಯಾಪಕರು ಹಾಜರಿದ್ದರು.