ಪ್ರತಿಯೊಬ್ಬ ಭಾರತೀಯನು ಸಂವಿಧಾನಕ್ಕೆ ಬದ್ಧನಾಗಿ ನಡೆದುಕೊಳ್ಳಬೇಕು

ಪ್ರತಿಯೊಬ್ಬ ಭಾರತೀಯನು ಸಂವಿಧಾನಕ್ಕೆ ಬದ್ಧನಾಗಿ ನಡೆದುಕೊಳ್ಳಬೇಕು Every Indian must abide by the Constitution

 

             ರಾಣಿಬೆನ್ನೂರ 27 :  ಅತಿ ದೊಡ್ಡ ಹಾಗೂ ವಿಶೇಷತೆ ಹೊಂದಿರುವ ಭಾರತದ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. 1949ರ ನವೆಂಬರ್ 26ರಂದು ಅಂಗೀಕೃತಗೊಂಡಿತು. 1950 ಜನವರಿ 26ರಂದು ಅಧಿಕೃತವಾಗಿ ಜಾರಿಯಾಯಿತು ಎಂದು  ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು. ಬುಧವಾರ ಇಲ್ಲಿನ ತಾಪಂ ಸಭಾಭವನದಲ್ಲಿ ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ವಿವಿಧ  ಸಂಘಟನೆಗಳ. ಮತ್ತು ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಆಶ್ರಯದಲ್ಲಿ ಏರಿ​‍್ಡಸಿದ್ದ ಸಂವಿಧಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಆಂಗ್ಲರ ಆಡಳಿತದಿಂದ ಮುಕ್ತಿ ಹೊಂದಿದ ಭಾರತಕ್ಕೆ ಅಂಬೇಡ್ಕರ್ ಅವರು ಸ್ವಾಭಿಮಾನದ ಸಂವಿಧಾನವನ್ನು ನೀಡಿದರು. ಸಂವಿಧಾನ ಎಂದರೆ ಎಲ್ಲರ ಬದುಕಿಗೂ ಪ್ರಮುಖ ಅರ್ಥವನ್ನು ಕಲ್ಪಿಸಿಕೊಟ್ಟಿದೆ. ಪ್ರತಿಯೊಬ್ಬ ಭಾರತೀಯನು ಸಂವಿಧಾನಕ್ಕೆ ಬದ್ಧನಾಗಿ ನಡೆದುಕೊಳ್ಳಬೇಕು ಎಂದರು. ಸಂವಿಧಾನವು 395 ವಿಧಿಗಳು, ಎಂಟು ಪರಿಚ್ಛೇದಗಳನ್ನು ಹೊಂದಿತ್ತು. 1.45 ಲಕ್ಷ ಪದಗಳನ್ನು ಹೊಂದಿದ್ದ ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನವಾಗಿದೆ. ಕರಡು ಸಮಿತಿ ಅಧ್ಯಕ್ಷ ಡಾ.ಬಿ.ಆರ್‌.ಅಂಬೇಡ್ಕರ್ ಅವರು ನಮ್ಮ ಸಂವಿಧಾನದ ಮುಖ್ಯ ಶಿಲ್ಪಿ ಎನ್ನಬಹುದು ಎಂದರು.  ತಹಸೀಲ್ದಾರ ಆರ್ ಎಚ್ ಭಾಗವಾನ  ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನಕ್ಕೆ ಸಹಿ ಹಾಕಿದ ಮೊದಲಿಗರು. ಈಗಲೂ ಇದು ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನ.  

         ತಾಪಂ ಇಓ ಡಾ. ವೆಂಕಟೇಶ ಸಣ್ಣಬಿದರಿ, ತಾಪಂ ಮಾಜಿ ಅಧ್ಯಕ್ಷರಾದ ನೀಲಕಂಠಪ್ಪ ಕುಸಗೂರ,  ರವೀಂದ್ರಗೌಡ ಪಾಟೀಲ,  ನಗರಸಭೆ ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ,  ತಾಪಂ ಇಓ ಡಾ. ವೆಂಕಟೇಶ ಸಣ್ಣ ಬಿದರಿ,  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಪ್ರಭಾರ ನಿರ್ದೇಶಕ ಮಾಲತೇಶ ಸಿ.ಬಿ ಮಾತನಾಡಿದರು. ನಗರಸಭಾ ಮಾಜಿ ಸದಸ್ಯ ಪ್ರಕಾಶ ಪೂಜಾರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕರೇಗೌಡ ಬಾಗೂರ, ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ,  ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಗಾಯತ್ರಿ ಕೆ.ಎಚ್, ಸಿಡಿಪಿಓ ಪಾರ್ವತಿ ಹುಂಡೇಕಾರ, ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ, ಶ್ರೀಕಾಂತ ಬಣಕಾರ, ಕೊಟ್ರೇಶ ಹಿರೇಮಠ, ವಿಜಯಕುಮಾರ ಹೊಸಂಗಡಿ, ಪ್ರಭಾವತಿ ಹಲಗಣ್ಣನವರ, ಮಮತಾ ಕೆ.ಬಿ, ಶೇಖರ ದೊಡ್ಡಣ್ಣನವರ, ಶಶಿರೇಖಾ ಠಾಣೇರ,ನಾರಾಯಣ ಬಲ್ಲೂರ ಮತ್ತು ಶಾಲಾ ಕಾಲೇಜ ವಿದ್ಯಾರ್ಥಿಗಳು ಇದ್ದರು.    ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ಏರಿ​‍್ಡಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಂದ್ರಶೇಖರ ಪುರದ ಅವರು, ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಭೋಧಿಸಿದರು. ಕಾರ್ಯಕ್ರಮಕ್ಕೆ ಮುನ್ನ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಡಾ. ಮಹಾಂತೇಶ್ ಬೀಳಗಿ ಅವರ ನಿಧನಕ್ಕೆ ಮೌನಾಚರಣೆ ಸಲ್ಲಿಸಲಾಯಿತು.  ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದಲ್ಲಿ ಮಕ್ಕಳೊಂದಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.